ಕಬ್ಬನ್ ಪಾರ್ಕ್ ನಲ್ಲಿ 'ಇಷ್ಟಕಾಮ್ಯ'
ನಾಗತಿಹಳ್ಳಿ ಚಂದ್ರಶೇಖರ್ ನಿರ್ಸೇಶನದ 'ಇಷ್ಟಕಾಮ್ಯ' ಚಿತ್ರತಂಡ ಭಾನುವಾರ ಕಬ್ಬನ್ ಪಾರ್ಕ್ ಅನ್ನು ಸಿನೆಮಾ ಸೆಟ್ ಆಗಿ ಪರಿವರ್ತಿಸಿತ್ತು. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವಿಜಯ್ ಸೂರಿಯಾ,

ಬೆಂಗಳೂರು: ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಚಿತ್ರತಂಡ ಭಾನುವಾರ ಕಬ್ಬನ್ ಪಾರ್ಕ್ ಅನ್ನು ಸಿನೆಮಾ ಸೆಟ್ ಆಗಿ ಪರಿವರ್ತಿಸಿತ್ತು. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವಿಜಯ್ ಸೂರಿಯಾ, ಮಯೂರಿ ಮತ್ತು ಕಾವ್ಯ ಶೆಟ್ಟಿ ಅವರನ್ನು ಒಳಗೊಂಡ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ಸುಧೀರ್ಘ ಸಮಯದ ವಿರಾಮದ ನಂತರ ಮತ್ತೆ ಹಿಂದಿರುಗಿರುವ ನಿರ್ದೇಶಕ ನಾಗತಿಹಳ್ಳಿ ಈ ಬಾರಿ ವಿಶಿಷ್ಟ ಪ್ರೇಮಕಥೆಯನ್ನು ಆಯ್ದುಕೊಂಡಿದ್ದಾರಂತೆ. ಸಿನೆಮಾದ ಪೋಸ್ಟರ್ ಅನ್ನು ನಟ-ನಿರ್ದೇಶಕ-ಪರಿಸರವಾದಿ ಸುರೇಶ್ ಹೆಬ್ಳಿಕರ್ ಶನಿವಾರ ಬಿಡುಗಡೆ ಮಾಡಿದ್ದಾರೆ. ಕನ್ನಡದ ಮೇರು ಸಾಹಿತಿ ಕುವೆಂಪು ಅವರ ಕನವವೊಂದನ್ನು ಕೂಡ ಸಿನೆಮಾದಲ್ಲಿ ಉಪಯೋಗಿಸುತ್ತಿರುವುದು ಚಿತ್ರದ ಮುಖ್ಯಾಂಶಗಳಲ್ಲೊಂದು.
ಈ ಸಿನೆಮಾವನ್ನು ಶಂಕರೇ ಗೌಡ ನಿರ್ಮಿಸುತ್ತಿದ್ದು, ರವಿಕುಮಾರ್ ಸಾನಾ ಸಿನೆಮ್ಯಾಟೋಗ್ರಾಫರ್. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ಬಿ ಜಯಶ್ರೀ, ಮಂಡ್ಯ ರಮೇಶ್, ಸುಮನ್ ನಗರ್ಕರ್, ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


