ಪುಷ್ಪಕ ವಿಮಾನ ಹತ್ತಲಿದ್ದಾರೆಯೆ ಜೂಹಿ ಚಾವ್ಲಾ?
ತನ್ನ ಟ್ರೇಲರ್ ಮೂಲಕವೇ ಈಗಾಗಲೇ ಸಾಕಷ್ಟು ಜನರ ಮನ ಗೆದ್ದು ಸುದ್ದಿಯಲ್ಲಿರುವ ಕನ್ನಡದ ಪುಷ್ಪಕ ವಿಮಾನ ಸಿನಿಮಾ ಇದೀಗ ಮತ್ತೆ ಸುದ್ದಿಗೆ ಬಂದಿದ್ದು,...

ತನ್ನ ಟ್ರೇಲರ್ ಮೂಲಕವೇ ಈಗಾಗಲೇ ಸಾಕಷ್ಟು ಜನರ ಮನ ಗೆದ್ದು ಸುದ್ದಿಯಲ್ಲಿರುವ ಪುಷ್ಪಕ ವಿಮಾನ ಸಿನಿಮಾ ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಸಿನಿಮಾದಲ್ಲಿ ಜೂಹಿ ಚಾವ್ಲಾ ಅವರು ನಟಿಸಲಿದ್ದಾರೆಂದು ಹೇಳಲಾಗುತ್ತದೆ.
ಸಿನಿಮಾದಲ್ಲಿ ನಟಿಸುವಂತೆ ಚಿತ್ರದ ತಂಡ ಇದೀಗ ಜೂಹಿ ಚಾವ್ಲಾ ಅವರನ್ನು ಸಂಪರ್ಕಿಸಿದ್ದು, ಜೂಹಿ ಕೂಡ ಚಿತ್ರದ ಟ್ರೇಲರ್ ನೋಡಿ ಇಷ್ಟಪಟ್ಟಿದ್ದಾರಂತೆ. ಅಲ್ಲದೆ, ಚಿತ್ರದ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಇಚ್ಛಿಸಿದ್ದಾರಂತೆ. ಚಿತ್ರದ ಕುರಿತಂತೆ ಜೂಹಿ ಅವರು ನೀಡುತ್ತಿರುವ ಪ್ರತಿಕ್ರಿಯೆ ಇದೀಗ ಅವರು ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಚಿತ್ರದಲ್ಲಿ ಜೂಹಿ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಕೆಲವು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಲ್ಲದೆ, ಚಿತ್ರದ ಹಾಡೊಂದರಲ್ಲೂ ಜೂಹಿ ನಟಿಸಲಿದ್ದಾರೆಂದು ಹೇಳಲಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕ, ಕಿಂದರಿ ಜೋಗಿಯಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಜೂಹಿ ಚಾವ್ಲಾ ಅವರು 1991ರಲ್ಲಿ ಬಂದ ಶಾಂತಿ ಕ್ರಾಂತಿ ನಂತರ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸಿರಲಿಲ್ಲ. ಇದೀಗ ಪುಷ್ಪಕ ವಿಮಾನದ ಮೂಲಕ ಮತ್ತೆ ಜೂಹಿ ಕನ್ನಡ ಚಿತ್ರಕ್ಕೆ ಬರುತ್ತಿದ್ದಾರೆಂಬ ಸುದ್ದಿ ಹರಡುತ್ತಿದ್ದು, ಹಲವರಲ್ಲಿ ಕುತೂಹಲ ಕೆರಳಸಿದೆ.
ಪುಷ್ಪಕ ವಿಮಾನ ಚಿತ್ರವೊಂದು ತಂದೆ-ಮಗಳ ಕಥೆಯಾಗಿದ್ದು, ರಮೇಶ್ ಅರವಿಂದ್ ಅವರು ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಮನ್ಯು ಚಿತ್ರದಲ್ಲಿ ಎಲ್ಲರ ಮೆಚ್ಚುಗೆ ಪಡೆದಿದ್ದ ಯುವೀನಾ ಅವರು ಮಗಳ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಶೇ.75 ರಷ್ಟು ಸಂಪೂರ್ಣವಾಗಿದ್ದು, ಶೀಘ್ರದಲ್ಲಿ ವಿಮಾನ ಹಾರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


