ಬುಲೆಟ್ ಪ್ರಕಾಶ್ ಗೆ ಜೀವ ಬೆದರಿಕೆ: ದಿನಕರ್ ತೂಗುದೀಪ್ ವಿರುದ್ಧ ದೂರು
ನಿರ್ದೇಶಕ-ನಿರ್ಮಾಪಕ ದಿನಕರ್ ತೂಗುದೀಪ್ ಅವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಹಾಸ್ಯನಟ ಬುಲೆಟ್ ಪ್ರಕಾಶ್ ದೂರು ದಾಖಲಿಸಿದ್ದಾರೆ...

ಬೆಂಗಳೂರು: ನಿರ್ದೇಶಕ-ನಿರ್ಮಾಪಕ ದಿನಕರ್ ತೂಗುದೀಪ್ ಅವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಹಾಸ್ಯನಟ ಬುಲೆಟ್ ಪ್ರಕಾಶ್ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿಯ ಪೊಲೀಸ್ ಠಾಣೆಯಲ್ಲಿ ಬುಲೆಟ್ ಪ್ರಕಾಶ್ ದಿನಕರ್ ಹಾಗೂ ಪಿಸ್ತಾ ಸೀನು ವಿರುದ್ಧ ಕೊಲೆ ಬೆದರಿಕೆ ದೂರು ದಾಖಲಿಸಿದ್ದಾರೆ.
ನಿನ್ನೆ ರಾತ್ರಿ ದಿನಕರ್ ತೂಗುದೀಪ ಹಾಗೂ ಅವರ ಸಹಚರರು ಕೆಂಪಾಪುರ ಬಳಿಯ ರಾಜನ್ ಸ್ಟುಡಿಯೋ ಮುಂದೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನನ್ನು ಜೀವಂತವಾಗಿರಲು ಬಿಡುವುದಿಲ್ಲ ಅಂತ ಪ್ರಾಣ ಬೆದರಿಕೆ ಹಾಕಿದ್ದರಂತೆ ಈ ಸಂಬಂಧ ದೂರು ದಾಖಲಿಸಿದ್ದಾರೆ.
ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾ ಸೆಟ್‍ನಲ್ಲಿ ದಿನಕರ್ ತೂಗುದೀಪ ಬುಲೆಟ್ ಪ್ರಕಾಶ್ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರಂತೆ. ಈ ವಿಷಯ ತಿಳಿದ ಬುಲೆಟ್ ಪ್ರಕಾಶ್ ಫೋನ್ ಮಾಡಿ ಮಾತನಾಡಿದಾಗ ದಿನಕರ್ ಬಾಯಿಗೆ ಬಂದಂತೆ ಬುಲೆಟ್ ಪ್ರಕಾಶ್‍ಗೆ ಬೈದಿದ್ದಾರೆ.
ಅಲ್ಲದೇ ಸಿನಿಮಾವೊಂದಕ್ಕೆ ದರ್ಶನ್ ಡೇಟ್ ಪಡೆದಿದ್ದರಿಂದ ಆಕ್ರೋಶಗೊಂಡಿರುವ ದಿನಕರ್, ಬುಲೆಟ್ ಪ್ರಕಾಶ್ ಅದು ಹೇಗೆ ಸಿನಿಮಾ ಮಾಡುತ್ತಾನೆ ನೋಡುತ್ತಿನಿ ಅಂತೆಲ್ಲಾ ಕೆಟ್ಟದಾಗಿ ಮಾತನಾಡಿದ್ದಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ದಿನಕರ್ ಬುಲೆಟ್ ಪ್ರಕಾಶ್ ಮನೆಯ ಬಳಿ ಬರುವುದಾಗಿ ತಿಳಿಸಿದರು. ಆದರೆ ಮನೆ ಬಳಿ ಬರಲು ಒಪ್ಪದ ಬುಲೆಟ್ ಪ್ರಕಾಶ್ ರಾಜನ್ ಸ್ಟುಡಿಯೋ ಬಳಿ ಬರಲು ತಿಳಿಸಿದ್ದರು. ಇಲ್ಲಿಗೆ ದಿನಕರ್ ಹಾಗೂ ಅವರ ಸಹಚರರು ಬುಲೆಟ್ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


