ರವಿಚಂದ್ರನ್ ಪುತ್ರ 'ಸಾಹೇಬ'ನ ಮೊದಲ ನೋಟ ಬಿಡುಗಡೆ
ಭರತ್ ನಿರ್ದೇಶನದ 'ಸಾಹೇಬ' ಚಿತ್ರದ ನಟನೆಯಲ್ಲಿ ತೊಡಗಿಸಿಕೊಂಡಿರುವ ಮನೋರಂಜನ್ ಅವರಿಗೆ ಕಲೆಯ ಬಗ್ಗೆ ಹೊಸ ಸಂಗತಿಗಳನ್ನು ತಿಳಿದುಕೊಳ್ಳುತ್ತಿರುವ ಅನುಭವ.

ಬೆಂಗಳೂರು: ಭರತ್ ನಿರ್ದೇಶನದ 'ಸಾಹೇಬ' ಚಿತ್ರದ ನಟನೆಯಲ್ಲಿ ತೊಡಗಿಸಿಕೊಂಡಿರುವ ಮನೋರಂಜನ್ ಅವರಿಗೆ ಕಲೆಯ ಬಗ್ಗೆ ಹೊಸ ಸಂಗತಿಗಳನ್ನು ತಿಳಿದುಕೊಳ್ಳುತ್ತಿರುವ ಅನುಭವ. ಚಲನಚಿತ್ರ ನಾಯಕ-ನಾಯಕಿಯರಾದ ಮನೋರಂಜನ್ ಮತ್ತು ಶಾನ್ವಿ ಶ್ರೀವಾಸ್ತವ್ ಅವರ ಮೊದಲ ನೋಟ ಈಗ ಬಿಡುಗಡೆಯಾಗಿದೆ. ಸಿನೆಮಾ ಸೆಟ್ ನಲ್ಲಿ ಮನೋರಂಜನ್ ಅವರ ನಟನೆ ನೋಡುತ್ತಿರುವ ಮೂಲಗಳ ಪ್ರಕಾರ ರವಿಚಂದ್ರನ್ ಮಗನಾಗಿ ಯಾವುದೇ ಛಾಯೆ ಕಾಣದೆ ತಮ್ಮೆಲ್ಲ ಶಕ್ತಿಯನ್ನು ನಟನೆಗಾಗಿ ತೊಡಗಿಸಿದ್ದಾರಂತೆ.
ಸೆಟ್ ನಲ್ಲಿ 'ಸಾಹೇಬ'ನ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ಮನೋರಂಜನ್ "ನನಗೆ ಅತೀವ ಉತ್ಸಾಹ ಇದೆ ಅದೇ ವಾತಾವರಣ ಸೆಟ್ ನಲ್ಲೂ ಇದೆ. ನಾನು ನಮ್ಮ ತಂದೆಯವರ ಜೊತೆಗೆ ಸೆಟ್ ಗಳಿಗೆ ಹೋಗಿದ್ದೇನೆ ಮತ್ತು ಆಕ್ಷನ್ ಕಟ್ ಪದಗಳ ಪರಿಚಯ ಮೊದಲಿನಿಂದಲೂ ಇದೆ. ಆದರೆ ಸೆಟ್ ನಲ್ಲಿ ಆ ಪದಗಳಿಗೆ ಈಗ ನಾನು ಪ್ರದರ್ಶನ ನೀಡಬೇಕಿದೆ. ನನ್ನ ತಂದೆ ದೃಶ್ಯಗಳ ಮತ್ತು ಆಂಗಿಕ ಅಭಿನಯದ ಬಗ್ಗೆ ನೀಡುತ್ತಿದ್ದ ಸಲಹೆಗಳನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದೇನೆ. ನಾನು ಚಿತ್ರೀಕರಣಕ್ಕೆ ತೆರಳುವಾಗಲೆಲ್ಲಾ ಅವರು ನನಗೆ ಆಶೀರ್ವಾದ ನೀಡಿದ್ದಾರೆ. ಅಲ್ಲದೆ ನಿರ್ದೇಶಕ ಕೂಡ ಸ್ವಾಭಾವಿಕವಾಗಿ ನಟಿಸಲು ಸ್ವಾತಂತ್ರ್ಯ ನೀಡಿದ್ದಾರೆ" ಎನ್ನುತ್ತಾರೆ.
ಅಲ್ಲದೆ ಚಿತ್ರೀಕರಣದ ಪ್ರತಿದಿನದ ವರದಿಯನ್ನು ತಮ್ಮ ತಂದೆಯವರಿಗೆ ಒಪ್ಪಿಸುತ್ತಿದ್ದಾರಂತೆ ಮನೋರಂಜನ್. "ಪ್ರತಿ ಸಂಜೆ ಸೆಟ್ ನಲ್ಲಿನ ನನ್ನ ನಟನೆಯ ಬಗ್ಗೆ ಪೋಸ್ಟ್ ಮಾರ್ಟೆಮ್ ನಡೆಯುತ್ತದೆ. ಅವರಿಗೆ ಎಲ್ಲವನ್ನು ತಿಳಿಸಲು ನನಗೆ ಇಷ್ಟ ಮತ್ತು ಮುಂದಿನ ದಿನದ ಅವರ ಸಲಹೆ ಸೂಚನೆಗಳಿಗಾಗಿ ಕಾಯುತ್ತೇನೆ. ಸಿನೆಮಾದ ಎಲ್ಲ ಆಯಾಮಗಳ ಬಗ್ಗೆ ನನ್ನ ತಂದೆಯವರಿಗೆ ತಿಳಿಸುವುದು ನನ್ನ ಕರ್ತವ್ಯ" ಎಂದು ವಿವರಿಸುತ್ತಾರೆ ಮನೋರಂಜನ್.
ಸಿನೆಮಾಗೆ ವಿ ಹರಿಕೃಷ್ಣ ಅವರ ಸಂಗೀತವಿದ್ದು, ಜಿ ಎಸ್ ವಿ ಸೀತಾರಾಮ್ ಸಿನೆಮ್ಯಾಟೋಗ್ರಾಫರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


