ಹೊಸ ವರ್ಷದಂದು ಬಿಡುಗಡೆಗೆ ಕಾದು ನಿಂತಿವೆ ಕನ್ನಡ ಸಿನಿಮಾ ಟೀಸರ್ ಗಳು
ಈ ಹೊಸ ವರ್ಷದಲ್ಲಿ ಸಿನಿ ಪ್ರಿಯರಿಗೆ ಮತ್ತಷ್ಟು ರಸದೌತಣ ಉಣಬಡಿಸಲು ಸ್ಯಾಂಡಲ್ ವುಡ್ ತಯಾರಿ ನಡೆಸಿದೆ. ಡಿಸೆಂಬರ್ 31 ಅಥವಾ ಜನವರಿ 1...

ಬೆಂಗಳೂರು: ಈ ಹೊಸ ವರ್ಷದಲ್ಲಿ ಸಿನಿ ಪ್ರಿಯರಿಗೆ ಮತ್ತಷ್ಟು ರಸದೌತಣ ಉಣಬಡಿಸಲು ಸ್ಯಾಂಡಲ್ ವುಡ್ ತಯಾರಿ ನಡೆಸಿದೆ. ಡಿಸೆಂಬರ್ 31 ಅಥವಾ ಜನವರಿ 1 ರಂದು ಹಲವು ಕನ್ನಡ ಸಿನಿಮಾಗಳ ಟೀಸರ್ ಗಳು ಬಿಡುಗಡೆಯಾಗಲಿವೆ.
ಸಂತೋಷ್ ಆನಂದರಾಮ್ ನಿರ್ದೇಶನ ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ್ ಸಿನಿಮಾದ ಎರಡನೇ ಟೀಸರ್ ಬಿಡುಗಡೆಗೆ ಚಿತ್ರ ತಂಡ ತಯಾರಿ ನಡೆಸಿದೆ. ಒಂದು ನಿಮಿಷ ಇರುವ ಟೀಸರ್ ನಲ್ಲಿ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರನ್ನು ಪರಿಚಯಿಸಲಿದೆ. ಡಿಸೆಂಬರ್ 31 ಅಥವಾ ಜನವರಿ 1 ರಂದು ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಸಂತೋಷ್ ತಿಳಿಸಿದ್ದಾರೆ.
ನೂರೊಂದು ನೆನಪು ಚಿತ್ರತಂಡ ಕೂಡ ಹೊಸ ವರ್ಷದ ಮೊದಲ ದಿನದಂದು ತನ್ನ ಮೊದಲ ಟೀಸರ್ ಬಿಡುಗಡೆಗೆ ತಯಾರಿ ನಡೆಸಿದೆ. ಪ್ರೇಶ್ರಕರ ಮುಂದೆ ಟೀಸರ್ ರಿಲೀಸ್ ಮಾಡಲು ಹೊಸ ವರ್ಷ ಉತ್ತಮ ಸಮಯವಾಗಿದೆ ಎಂದು ನೂರೊಂದು ನೆನಪು ಸಿನಿಮಾ ನಿರ್ಮಾಪಕ ಸೂರಜ್ ಹೇಳಿದ್ದಾರೆ.
ಇನ್ನೂ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಸಾಹೇಬ ಚಿತ್ರದ ಟ್ರೈಲರ್ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಭರತ್ ನಿರ್ದಶನದ ಈ ಚಿತ್ರದಲ್ಲಿ ಸಾನ್ವಿ ಶ್ರೀವಾತ್ಸವ ನಟಿಸಿದ್ದಾರೆ.
ಬ್ಯಾಂಕಾಕ್, ಆಸ್ಟ್ರೇಲಿಯಾ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿರುವ ರಾಜಕುಮಾರ್ ಚಿತ್ರ ತಂಡ ಡಿಸೆಂಬರ್ 29 ರಂದು ಅಂತಿಮ ಹಂತದ ಶೂಟಿಂಗ್ ಗಾಗಿ ಕಾಶಿಗೆ ತೆರಳಲಿದೆ. ಇದು ಸಿನಿಮಾದ ಅತಿ ಪ್ರಮುಖ ಭಾಗವಾಗಿದ್ದು, ಪುನೀತ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಒಂದು ಹಾಡಿನ ಚಿತ್ರೀಕರಣ ಉಳಿದಿದ್ದು, ಜನವರಿ 10 ರೊಳಗೆ ಶೂಟಿಂಗ್ ಮುಗಿಸುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


