ವಿದೇಶದಲ್ಲಿ ತೆರೆ ಕಾಣಲಿರುವ 'ಮಮ್ಮಿ ಸೇವ್ ಮಿ'
ಕನ್ನಡದಲ್ಲಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ ಹೆಚ್.ಸಿ.ಲೋಹಿತ್...

Published On :
ಕನ್ನಡದಲ್ಲಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ ಹೆಚ್.ಸಿ.ಲೋಹಿತ್ ನಿರ್ದೇಶಿಸಿರುವ 'ಮಮ್ಮಿ ಸೇವ್ ಮಿ' ಚಿತ್ರ ಜನಮೆಚ್ಚುಗೆ ಗಳಿಸಿದ್ದು ಉತ್ತಮ ಗಳಿಕೆಯನ್ನೂ ಕಂಡಿದೆ. ರಾಜ್ಯಾದ್ಯಂತ ಥಿಯೇಟರ್ ಗಳಲ್ಲಿ 25 ದಿನಗಳ ಪ್ರದರ್ಶನವನ್ನು ಪೂರೈಸಿರುವ ಚಿತ್ರ ಇದೀಗ ವಿದೇಶದಲ್ಲಿ ಪ್ರದರ್ಶನ ಕಾಣಲು ಸಜ್ಜಾಗಿದೆ.
ಜಾಗ್ವಾರ್ ಚಿತ್ರವನ್ನು ವಿತರಣೆ ಮಾಡಿದ್ದ ತನೀಶ್ ಮೀಡಿಯಾ ಸಂಸ್ಥೆ ಈ ಚಿತ್ರದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ವಿದೇಶಗಳಲ್ಲಿ ಮುಂದಿನ ವರ್ಷ ಜನವರಿ 6ರಂದು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು ಪ್ರಮುಖ ನಗರಗಳಾದ ಯುಎಸ್ಎ, ಚಿಕಾಗೊ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ನ್ಯೂಜೆರ್ಸಿ, ಸಾನ್ ಜೊಸ್, ಅಟ್ಲಾಂಟಾ, ಡೆಟ್ರಾಯ್ಟ್ ಮೊದಲಾದ ಕಡೆಗಳಲ್ಲಿ ಬಿಡುಗಡೆಯಾಗಲಿದೆ.
ಭಯಾನಕ ಥ್ರಿಲ್ಲರ್ ನ್ನು ಹೊಂದಿರುವ ಚಿತ್ರ ಲೋಹಿತ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದ್ದು ನೈಜ ಘಟನೆಯನ್ನಾಧರಿಸಿ ಕಥೆ ಹೆಣೆಯಲಾಗಿದೆ. ಗರ್ಭಿಣಿ ಮಹಿಳೆಯ ಸುತ್ತ ನಡೆಯುವ ಚರಿತ್ರೆಯಿದು. ಬಾಲ ನಟಿ ಯುವಿನಾ ಪಾರ್ಥವಿ ಚಿತ್ರದಲ್ಲಿ ಪ್ರಿಯಾಂಕಾ ಮಗಳ ಪಾತ್ರದಲ್ಲಿ ನಟಿಸಿದ್ದಾಳೆ.
ಅಜನೀಶ್ ಬಿ.ಲೋಕನಾಥ್ ಸಂಗೀತ ನೀಡಿದ್ದು, ಹೆಚ್.ಸಿ.ವೇಣು ಅವರ ಕ್ಯಾಮರಾ ಕೈ ಚಳಕವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


