ಕ್ರೇಜ್ ಹುಟ್ಟಿಸಿದ 'ಟಗರು' ಹೇರ್ ಸ್ಟೈಲ್!
ನಟ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಸೂರಿ ಜೋಡಿ, ತಮ್ಮ ಮುಂದಿನ ಸಿನೆಮಾ 'ಟಗರು' ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದ್ದಾರೆ. ಈ ಸದ್ಯದ ಕ್ರೇಜ್ ಏನೆಂದರೆ ಶಿವಣ್ಣನವರ ಕೇಶ ವಿನ್ಯಾಸ!

Published On :
ಬೆಂಗಳೂರು: ನಟ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಸೂರಿ ಜೋಡಿ, ತಮ್ಮ ಮುಂದಿನ ಸಿನೆಮಾ 'ಟಗರು' ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದ್ದಾರೆ. ಈ ಸದ್ಯದ ಕ್ರೇಜ್ ಏನೆಂದರೆ ಶಿವಣ್ಣನವರ ಕೇಶ ವಿನ್ಯಾಸ!
ಶಿವರಾಜ್ ಕುಮಾರ್ ಅವರ ಪೊಲೀಸ್ ಹೇರ್ ಕಟ್ ಎಷ್ಟು ಜನಪ್ರಿಯವಾಗಿದೆಯೆಂದರೆ, ಯುವಕರು ಕೇಶವಿನ್ಯಾಸ ಕೇಂದ್ರಗಳಿಗೆ ನಡೆದು, 'ಟಗರು' ಹೇರ್ ಸ್ಟೈಲ್ ಮೊರೆ ಹೋಗಿದ್ದಾರಂತೆ. ನಿರ್ಮಾಪಕ್ ಶ್ರೀಕಾಂತ್ ಹೇಳುವಂತೆ, ಶಿವಣ್ಣನವರ ಹೇರ್ ಸ್ಟೈಲ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿರುವುದು ಇದೆ ಮೊದಲೇನಲ್ಲ ಎನ್ನುತ್ತಾರೆ. "ಇದು ಅವರ ಮೊದಲ ಸಿನೆಮಾ 'ಆನಂದ್' ನಲ್ಲಿಯೇ ಪ್ರಾರಂಭವಾಗಿತ್ತು. ನಂತರ 'ಜೋಗಿ' ಕೇಶ ವಿನ್ಯಾಸ ಮನಸೂರೆಗೊಂಡಿತು. ಈಗ ಶಿವಣ್ಣನವರ ಹೊಸ ನೋಟಕ್ಕೆ ಕಾರಣರಾಗಿರುವ ಸೂರಿಯವರಿಗೆ ಈ ಎಲ್ಲ ಶ್ರೇಯಸ್ಸು ಸಲ್ಲಬೇಕು" ಎನ್ನುತ್ತಾರೆ.
ಸೂರಿ ಹೇಳುವಂತೆ "ಶಿವಣ್ಣನವರಿಗೆ ಈ ಹೇರ್ ಸ್ಟೈಲ್ ಅವಶ್ಯಕತೆ ಇತ್ತು. ಆದರೆ ಸಿನೆಮಾದಲ್ಲಿ ಈ ಕೇಶವಿನ್ಯಾಸಕ್ಕಿಂತಲೂ ಮಿಗಿಲಾದ್ದು ಇದೆ" ಎನ್ನುವ ಅವರು "ಸ್ಕ್ರೀನ್ ಪ್ಲೆ ಅದ್ಭುತವಾಗಿ ಮೂಡಿಬಂದಿದೆ ಮತ್ತು ಮುಂದಿನ ಹಂತದ ಚಿತ್ರೀಕರಣವನ್ನು ಡಿಸೆಂಬರ್ ೨೬ ರಿಂದ ಪ್ರಾರಂಭಿಸಲಿದ್ದೇನೆ" ಎನ್ನುತ್ತಾರೆ.
ಈಮಧ್ಯೆ ಐಟಿ-ಬಿಟಿ ಕನ್ನಡ ಬಳಗದ ಕೆಲವು ಎಂಜಿನಿಯರ್ ಗಳು ಸ್ವಯಂಪ್ರೇರಿತವಾಗಿ 'ಟಗರು' ಸಿನೆಮಾದ ಅಂತರ್ಜಾಲ ತಾಣವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. tagaruthefilm [dot ] com ನಲ್ಲಿ ಸಿನೆಮಾ ಬಗ್ಗೆ ತಾಜಾ ಸುದ್ದಿಗಳು, ವಿವರಗಳು ಸಮಯದಿಂದ ಸಮಯಕ್ಕೆ ಸಿಗಲಿವೆ. "ಕರ್ನಾಟಕದ ಅಭಿವೃದ್ಧಿಗಾಗಿ ಶಿವಣ್ಣನವರು ಎಂದಿಗೂ ಬೆಂಬಲ ನೀಡಿದ್ದಾರೆ" ಎನ್ನುವ ಸಾಫ್ಟ್ ವೇರ್ ಎಂಜಿನಿಯ ಶ್ರೀಕಾಂತ್ ಶೇಷಗಿರಿ "ನಾನು ಅವರ ದೊಡ್ಡ ಅಭಿಮಾನಿ ಮತ್ತು ಅವರಿಗೆ ಧನ್ಯವಾದ ಹೇಳಲು ಈ ವೆಬ್ ಸೈಟ್ ಸೃಷ್ಟಿಸಿದ್ದೇನೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


