ಎಲ್ಲವು ಅದೃಷ್ಟದ ಅವಕಾಶ: 'ಕಿರಿಕ್ ಪಾರ್ಟಿ'ಯ ರಶ್ಮಿಕಾ ಮಂದಣ್ಣ
ಕೆಲವು ನಟಿಯರು ನಟನೆಗೆ ತೊಡಗಿಸಿಕೊಂಡ ಅತಿ ಸಣ್ಣ ಸಮಯದಲ್ಲಿಯೇ ಜನಪ್ರಿಯರಾಗುತ್ತಾರೆ, ಅಂತಹವರಲ್ಲಿ ಒಬ್ಬರು ಈ ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ. ತಮ್ಮ ಚೊಚ್ಚಲ ಚಿತ್ರದ ಬಿಡುಗಡೆಗೆ

Published On :
ಬೆಂಗಳೂರು: ಕೆಲವು ನಟಿಯರು ನಟನೆಗೆ ತೊಡಗಿಸಿಕೊಂಡ ಅತಿ ಸಣ್ಣ ಸಮಯದಲ್ಲಿಯೇ ಜನಪ್ರಿಯರಾಗುತ್ತಾರೆ, ಅಂತಹವರಲ್ಲಿ ಒಬ್ಬರು ಈ ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ. ತಮ್ಮ ಚೊಚ್ಚಲ ಚಿತ್ರದ ಬಿಡುಗಡೆಗೆ ಮುಂಚಿತವಾಗಿಯೇ ಗಾಂಧಿನಗರದ ಗಮನ ಸೆಳೆಯಲು ಸಫಲವಾಗಿರುವ ನಟಿ, ಈಗಾಗಲೇ ದರ್ಶನ್ ಎದುರು ನಟಿಸಲು ತಮ್ಮ ಎರಡನೇ ಸಿನೆಮಾಗೆ ಸಹಿ ಹಾಕಿದ್ದಾರೆ.
ಇವೆಲ್ಲವೂ ನನ್ನ ಅದೃಷ್ಟ ಎನ್ನುವ ನಟಿ ರಶ್ಮಿ "ನಾನು ಇಂತಹ ಸ್ಫೋಟಕ ಸ್ವಾಗತವನ್ನು ನಿರೀಕ್ಷಿಸಿರಲಿಲ್ಲ" ಎನ್ನುತ್ತಾರೆ. "ಮತ್ತು ನಾನಿದನ್ನು ಖುಷಿಯಿಂದ ಸ್ವೀಕರಿಸುತ್ತಿದ್ದೇನೆ. ಅದೇ ಸಮಯದಲ್ಲಿ ಅತಿ ಹೆಚ್ಚು ಉತ್ಸುಕಳಾಗಿ ಯಾವುದನ್ನು ಹೆಚ್ಚು ಮಾಡಿ ನಿರಾಶೆ ಉಂಟುಮಾಡುವುದರಿಂದ ಎಚ್ಚರದಿಂದಿದ್ದೇನೆ" ಎನ್ನುತ್ತಾರೆ.
'ಕಿರಿಕ್ ಪಾರ್ಟಿ' ಕನ್ನಡ ಚಿತ್ರರಂಗದಲ್ಲಿ ತಮ್ಮ ಮೊದಲ ಸಿನೆಮಾ ಆಗಿದ್ದು, ಈ ಉದ್ದಿಮೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಉತ್ತಮಗೊಳಿಸಿದೆ ಎನ್ನುತ್ತಾರೆ. "ನಾನು ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದೇನೆ ಎಂದು ಜನರಿಗೆ ಹೇಳಿದಾಗ ಅವರೆಲ್ಲ ಎಚ್ಚರಿಕೆಯಿಂದಿರಲು ನನಗೆ ತಿಳಿಸಿದ್ದರು. ಅದೃಷ್ಟವಶಾತ್ ನನ್ನ ಸುತ್ತಲೆಲ್ಲಾ ಒಳ್ಳೆಯ ಜನರೇ ಇದ್ದಾರೆ. ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ತಂಡಕ್ಕೆ ಇದಕ್ಕಾಗಿ ಧನ್ಯವಾದ ಹೇಳಬೇಕು" ಎನ್ನುತ್ತಾರೆ ರಶ್ಮಿಕಾ.
ಮಾಡಿಲೆಂಗ್ ಲೋಕದಿಂದ ಬಂದಿದ್ದರು ರಶ್ಮಿಕಾ 'ಕಿರಿಕ್ ಪಾರ್ಟಿ' ಸಿನೆಮಾದಲ್ಲಿ ಗ್ಲಾಮರ್ ಇಲ್ಲದ ಪಾತ್ರದಲ್ಲಿ ನಟಿಸತ್ತಿದ್ದಾರೆ "ಇದು ತಂಡದ ಆಯ್ಕೆಯಾಗಿತ್ತು" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


