ಸಿನಿಮಾ ಸುದ್ದಿ

ಹಣ ವಂಚನೆ ಆರೋಪ: ಮಲಯಾಳಂ ನಟಿ ಧನ್ಯ ಬಂಧನ

ಮಲಯಾಳಂನ ಖ್ಯಾತ ನಟಿ ಧನ್ಯ ಮೇರಿ ವರ್ಗೀಸ್ ತಮ್ಮ ಪತಿ ಜೊತೆಗೂಡಿ ನಡೆಸುತ್ತಿರುವ...

ಹಣ ವಂಚನೆ ಆರೋಪ: ಮಲಯಾಳಂ ನಟಿ ಧನ್ಯ ಬಂಧನ
ಮಲಯಾಳಂ ನಟಿ ಧನ್ಯ ವರ್ಗೀಸ್
Published On :
ತಿರುವನಂತಪುರಂ: ಮಲಯಾಳಂನ ಖ್ಯಾತ ನಟಿ ಧನ್ಯ ಮೇರಿ ವರ್ಗೀಸ್ ತಮ್ಮ ಪತಿ ಜೊತೆಗೂಡಿ ನಡೆಸುತ್ತಿರುವ ಕಂಪೆನಿ ಸ್ಯಾಮ್ಸನ್ ಅಂಡ್ ಸನ್ಸ್ ತಮಗೆ ವಂಚನೆ ಮಾಡಿದೆ ಎಂದು ಸುಮಾರು 50 ಜನರು ನೀಡಿದ್ದ ದೂರಿನ ಮೇರೆಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಧನ್ಯ ಅವರ ಜೊತೆಗೆ ಅವರ ಪತಿ ಜಾನ್ ಜಾಕಬ್ ಮತ್ತು ಸೋದರ ಸ್ಯಾಮ್ಯುವೆಲ್ ಅವರನ್ನು ಕೂಡ ಬಂಧಿಸಲಾಗಿದೆ. ಅಪಾರ್ಟ್ ಮೆಂಟ್ ಕಾಯ್ದಿರಿಸುವ ವಿಷಯದಲ್ಲಿ ಜನರನ್ನು ವಂಚಿಸಿದ ಆರೋಪ ಈ ಮೂವರ ಮೇಲಿದೆ.
ತಮಿಳುನಾಡಿನ ನಾಗರ್ಕೊಯಿಲ್ ಎಂಬಲ್ಲಿ ಕಂಪೆನಿಯಿದ್ದು ತಿರುವನಂತಪುರದ ಪಟ್ಟೊಮ್ ಎಂಬಲ್ಲಿ ನೊವಾ ಕ್ಯಾಸನ್ ಫ್ಲ್ಯಾಟ್ ಗಳನ್ನು ಹಂಚಿಕೆ ಮಾಡುವುದಾಗಿ ಜನರಿಂದ 40 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಗಳವರೆಗೆ ಪ್ರತಿಯೊಬ್ಬರಿಂದ ಹಣ ಸಂಗ್ರಹಿಸಿದ್ದರು. 2011ರಲ್ಲಿಯೇ ಹಣ ಪಡೆದುಕೊಂಡಿದ್ದರೂ ಕೂಡ ಇನ್ನೂ ಅಪಾರ್ಟ್ ಮೆಂಟ್ ಕೊಟ್ಟಿರಲಿಲ್ಲ. ಜಾನ್ ತಂದೆ ಜಾಕೊಬ್ ಸ್ಯಾಮ್ಯನ್ ಈ ಹಿಂದೆ ಬಂಧಿಸಲ್ಪಟ್ಟಿದ್ದರು.
ತಿರುವನಂತಪುರದ ಮ್ಯೂಸಿಯಮ್, ಪೆರೂರ್ಕಡ ಮತ್ತು ಕಂಟೋನ್ ಮೆಂಟ್ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾಗಿದೆ.
2006ರಲ್ಲಿ ತಮಿಳು ಚಿತ್ರ ತಿರುಡಿ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದ ಧನ್ಯ ಶರತ್ ಚಂದ್ರ ವಯನಾಡ್ ನಿರ್ದೇಶನದ ನನ್ಮಾ ಮಲಯಾಳಂ ಚಿತ್ರದಲ್ಲಿ ನಟಿಸಿದರು. ಅವರು ನಟಿಸಿದ ತಲಪ್ಪವು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ನಂತರ ವೈರಂ, ವೆಟ್ಟಿಲೆಕ್ಕುಲ್ಲ ವಝ್ಹಿ, ಕೇರಳ ಕೆಫೆ, ನಾಯಕನ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.