ಕನ್ನಡ ಚಿತ್ರರಂಗದಲ್ಲಿ ಕ್ರಿಸ್ಮಸ್ ಸಂಭ್ರಮದ ವಾತಾವರಣ
ನೋಟು ಹಿಂಪಡೆತ ನಿರ್ಧಾರದಿಂದ ಕನ್ನಡ ಚಿತ್ರರಂಗ ಕಷ್ಟದ ದಿನಗಳನ್ನು ಕಾಣುತ್ತಿದ್ದರು, ಕೆಲವು ನಿರ್ಮಾಪಕರು ಕ್ರಿಸ್ಮಸ್ ರಜೆಯ ಸದುಪಯೋಗ ಪಡೆಯಲು ಮುಂದಾಗಿದ್ದಾರೆ.

Published On :
ಬೆಂಗಳೂರು: ನೋಟು ಹಿಂಪಡೆತ ನಿರ್ಧಾರದಿಂದ ಕನ್ನಡ ಚಿತ್ರರಂಗ ಕಷ್ಟದ ದಿನಗಳನ್ನು ಕಾಣುತ್ತಿದ್ದರು, ಕೆಲವು ನಿರ್ಮಾಪಕರು ಕ್ರಿಸ್ಮಸ್ ರಜೆಯ ಸದುಪಯೋಗ ಪಡೆಯಲು ಮುಂದಾಗಿದ್ದಾರೆ.
ರಮೇಶ್ ಅರವಿಂದ್ ನಿರ್ದೇಶನದ 'ಸುಂದರಾಂಗ ಜಾಣ', ಪ್ರೀತಮ್ ಗುಬ್ಬಿ ಅವರ 'ನಾನು ಮತ್ತು ವರಲಕ್ಷ್ಮಿ' ಮತ್ತು ಅಪೂರ್ವ ಕಾಸರವಳ್ಳಿ ಅವರ 'ನಿರುತ್ತರ' ಡಿಸೆಂಬರ್ 23 ರಂದು ಬಿಡುಗಡೆಗೆ ಸಜ್ಜಾಗಿದ್ದು, ಅಮೀರ್ ಖಾನ್ ನಟನೆಯ ಬಾಲಿವುಡ್ ಸಿನೆಮಾ 'ದಂಗಾಲ್'ನೊಂದಿಗೆ ಸೆಣಸಲಿವೆ.
ರಮೇಶ್ ಅರವಿಂದ್ ತಿಳಿಸುವಂತೆ 'ಸುಂದರಾಂಗ ಜಾಣ' ಮೊದಲೇ ನಿಗದಿಯಾದಂತೆ ಡಿಸೆಂಬರ್ ೯ ಕ್ಕೆ ಬಿಡುಗಡೆಯಾಗಬೇಕಿತ್ತಂತೆ, ಆದರೆ ನೋಟು ಹಿಂಪಡೆತ ನಿರ್ಧಾರದಿಂದ ಆಗಿರುವ ನಗದು ಬಿಕ್ಕಟ್ಟಿನಿಂದ ಮುಂದೂಡಲಾಯಿತಂತೆ. "ಬ್ಯಾಂಕ್ ಗಳಲ್ಲಿ ದೊಡ್ಡ ದೊಡ್ಡ ಸರತಿ ಸಾಲುಗಳಲ್ಲಿ ನಿಂತು ಹಣ ಪಡೆಯಲು ಕಷ್ಟ ಪಡುತ್ತಿದ್ದರು. ಆದುದರಿಂದ ಬಿಡುಗಡೆ ಮುಂದೂಡಲು ನಿರ್ಧರಿಸಿದೆವು. ಕ್ರಿಸ್ಮಸ್ ರಜಕ್ಕೆ ಜನ ವಿರಾಮದಲ್ಲಿ ನೋಡಲೆಂದು ಈ ದಿನಾಂಕ ಆರಿಸಿಕೊಂಡೆವು" ಎನ್ನುವ ಅವರು "ಈಗ ಕಾರ್ಮೋಡ ಕರಗಿದ್ದು, ಜನ ಥಿಯೇಟರ್ ಗಳ ಮುಂದೆ ಸಾಲುಗಟ್ಟಿ ನಿಲ್ಲಲಿದ್ದಾರೆ ಎಂದು ನಂಬಿದ್ದೇವೆ" ಎಂದಿದ್ದಾರೆ.
ತೆಲುಗು ಸಿನೆಮಾ 'ಭಲೇ ಭಲೇ ಮಾಗಾಡಿವೋಯ್' ನ ರಿಮೇಕ್ ಇದಾಗಿದ್ದು, ಗಣೇಶ್ ಮತ್ತು ಶಾನ್ವಿ ಶ್ರೀವಾಸ್ತವ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
'ನಾನು ಮತ್ತು ...' ಸಿನೆಮಾ ಬಿಡುಗಡೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರೀತಮ್ " ಈ ಸಿನೆಮಾ ನನ್ನ ಅತ್ಯುತ್ತಮ ಗೆಳೆಯ ಗಣೇಶ್ ಸಿನೆಮಾದೊಂದಿಗೆ ಬಿಡುಗಡೆಯಾಗುತ್ತಿದೆ ಹಾಗು 'ನಿರುತ್ತರ'ದಲ್ಲಿ ಕಿರಣ್ ಇದ್ದಾರೆ. ಅವರನ್ನು ನನ್ನ ನಿರ್ದೇಶನದ ಸಿನೆಮಾದಲ್ಲಿಯೇ ಪರಿಚಯಿಸಿದ್ದೆ. ಎಲ್ಲ ಸಿನೆಮಾಗಳು ವಿಭಿನ್ನವಾಗಿರುವುದರಿಂದ ಇಲ್ಲಿ ಸ್ಪರ್ಧೆಯೇನು ಇಲ್ಲ. 'ನಾನು ಮತ್ತು ವರಲಕ್ಷ್ಮಿ' ಪ್ರೀತಿಯ ಬಗ್ಗೆ ಆಗಿದ್ದು, ಇದು ಕ್ರಿಸ್ಮಸ್ ಹಬ್ಬಕ್ಕೆ ಪ್ರೇಕ್ಷಕರಿಗೆ ಉಡುಗೊರೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ChristmasNaanu Mattu Varalakshmiನಾನು ಮತ್ತು ವರಲಕ್ಷ್ಮಿಕ್ರಿಸ್ಮಸ್Niruttaraನಿರುತ್ತರಸುಂದರಾಂಗ ಜಾಣSundaranga jaana
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


