ಸಿನಿಮಾ ಸುದ್ದಿ

'ಮುಗುಳು ನಗೆ'ಯ ಮುಹೂರ್ತದ ದಿನವೇ ವಿತರಣ ಹಕ್ಕುಗಳು ಖರೀದಿ

ನಟ-ನಿರ್ದೇಶಕ ಜೋಡಿ ಗಣೇಶ್ ಮತ್ತು ಯೋಗರಾಜ್ ಭಟ್ 'ಮುಗುಳು ನಗೆ' ಮುಹೂರ್ತದ ದಿನವೇ ಗೆಲುವಿನ ನಗೆ ಬೀರಿದ್ದಾರೆ. ಅಂದೇ ಸಿನೆಮಾದ ವಿತರಣಾ ಹಕ್ಕುಗಳು ಮಾರಾಟವಾಗಿರುವುದು ಈ

'ಮುಗುಳು ನಗೆ'ಯ ಮುಹೂರ್ತದ ದಿನವೇ ವಿತರಣ ಹಕ್ಕುಗಳು ಖರೀದಿ
'ಮುಗುಳು ನಗೆ' ಚಿತ್ರದ ಪೋಸ್ಟರ್
Published On :
ಬೆಂಗಳೂರು: ನಟ-ನಿರ್ದೇಶಕ ಜೋಡಿ ಗಣೇಶ್ ಮತ್ತು ಯೋಗರಾಜ್ ಭಟ್ 'ಮುಗುಳು ನಗೆ' ಮುಹೂರ್ತದ ದಿನವೇ ಗೆಲುವಿನ ನಗೆ ಬೀರಿದ್ದಾರೆ. ಅಂದೇ ಸಿನೆಮಾದ ವಿತರಣಾ ಹಕ್ಕುಗಳು ಮಾರಾಟವಾಗಿರುವುದು ಈ ಸಂತಸಕ್ಕೆ ಕಾರಣ. 
ಬಲ್ಲ ಮೂಲಗಳ ಪ್ರಕಾರ ಮೈಸೂರು ಟಾಕೀಸ್ ನ ಜಾಕ್ ಮಂಜು ವಿತರಣೆಗೆ ಸಿನೆಮಾ ಚಿತ್ರೀಕರಣಕ್ಕೂ ಮುಂಚಿತವಾಗಿ ಹಕ್ಕುಗಳನ್ನು ಖರೀದಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇದು ಮೊದಲು. ಇದು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದು ಕೂಡ ಕೇಳಿಬಂದಿದೆ. 
"ಹಿಂದಿನ ಸಿನೆಮಾಗಳಾದ 'ಮುಂಗಾರು ಮಳೆ' ಮತ್ತು 'ಗಾಳಿಪಟ' ಸಿನೆಮಾಗಳಲ್ಲಿ ಈ ನಟ-ನಿರ್ದೇಶಕ ಜೋಡಿ ದಾಖಲೆಗಳನ್ನು ಬರೆದಿದೆ. ಈ ಜೋಡಿ ಹ್ಯಾಟ್ರಿಕ್ ಹೊಡೆಯಲಿದೆ ಎಂದು ಜಾಕ್ ಮಂಜು ಆತ್ಮವಿಶ್ವಾಸದಿಂದಿದ್ದಾರೆ" ಎನ್ನುತ್ತವೆ ಮೂಲಗಳು. 
ಈ ಸಿನೆಮಾದಲ್ಲಿ ಅಮೂಲ್ಯ, ಆಶಿಕಾ ಮತ್ತು ನಿಖಿತಾ ನಾರಾಯಣ್ ನಾಯಕ ನಟಿಯರಾಗಿ ಕಾಣಿಸಿಕೊಳ್ಳುತ್ತಿದ್ದು, ಭಾವನಾ ಅತಿಥಿ ನಟಿಯಾಗಿ ನಟಿಸಲಿದ್ದಾರೆ. 
ಯೋಗರಾಜ್ ಭಟ್ ಫಿಲಂಸ್, ಗೋಲ್ಡನ್ ಮೂವೀಸ್ ಮತ್ತು ಸಯ್ಯದ್ ಸಲಾಂ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿವೆ. ಸುಜ್ಞಾನ್ ಛಾಯಾಗ್ರಹಣ ಮಾಡಲಿದ್ದು, ಹರಿಕೃಷ್ಣ ಸಂಗೀತ ನೀಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.