ಸಿನಿಮಾ ಸುದ್ದಿ

'ಸಿಂಪಲ್ಲಾಗ್ ಇನ್ನೊಂದ್..' ನಂತರ ಏರುಗತಿಯಲ್ಲಿ ಪ್ರವೀಣ್ ವೃತ್ತಿಜೀವನ

ಕಿರುತೆರೆಯಿಂದ ಬೆಳ್ಳಿತೆರೆಗೆ ಎಚ್ಚರಿಕೆಯ ನಡೆಯನ್ನಿಟ್ಟಿರುವ ನಟ ಪ್ರವೀಣ್ ಅವರಿಗೆ, ಸುನಿ ನಿರ್ದೇಶನದ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'ಯಲ್ಲಿ ನಟಿಸಿದ ನಂತರ ಅವಕಾಶಗಳು ಒಂದರ ನಂತರ

'ಸಿಂಪಲ್ಲಾಗ್ ಇನ್ನೊಂದ್..' ನಂತರ ಏರುಗತಿಯಲ್ಲಿ ಪ್ರವೀಣ್ ವೃತ್ತಿಜೀವನ
ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ನಟ ಪ್ರವೀಣ್
Published On :
ಬೆಂಗಳೂರು: ಕಿರುತೆರೆಯಿಂದ ಬೆಳ್ಳಿತೆರೆಗೆ ಎಚ್ಚರಿಕೆಯ ನಡೆಯನ್ನಿಟ್ಟಿರುವ ನಟ ಪ್ರವೀಣ್ ಅವರಿಗೆ, ಸುನಿ ನಿರ್ದೇಶನದ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'ಯಲ್ಲಿ ನಟಿಸಿದ ನಂತರ ಅವಕಾಶಗಳು ಒಂದರ ನಂತರ ಮತ್ತೊಂದು ಬೆನ್ನತ್ತಿವೆ. 
ಈಗ ಅವರ ಬಳಿಯಿರುವ ನಟನೆಯ ಅವಕಾಶಗಳನ್ನು ಕಂಡರೆ, ಅವಕಾಶ ಪಡೆಯಲು ಯಶಸ್ಸು ಒಂದೇ ಮಾನದಂಡವಲ್ಲ ಬದಲಿಗೆ ಕಷ್ಟ ಪಟ್ಟು ದುಡಿವ ಗುಣವು ಪ್ರಮುಖ ಪಾತ್ರವಹಿಸುತ್ತದೆ. '೫ ಜನರೇಷನ್' ಮತ್ತು 'ಬಿ ಎಂ ಡಬ್ಲ್ಯೂ' ಸಿನೆಮಾಗಳಲ್ಲಿ ನಟಿಸಬೇಕಿರುವ ನಟ ಪ್ರವೀಣ್ ಸದ್ಯಕ್ಕೆ ಹಾರರ್ ಚಿತ್ರ 'ಶಿವಗಾಮಿ' ಮುಗಿಸುವತ್ತ ದಾಪುಗಾಲು ಹಾಕಿದ್ದಾರೆ. ಈಮಧ್ಯೆ ಮತ್ತೆರಡು ಯೋಜನೆಗಳಿಗೂ ಕೂಡ ಅವರು ಸಹಿ ಹಾಕಿದ್ದಾರೆ. 
ತಾವು ಸಂಕೋಚದ ಸ್ವಭಾವದ ವ್ಯಕ್ತಿ ಎಂದು ಹೇಳಿಕೊಳ್ಳುವ ನಟ, ಇಂದು ಚಿತ್ರರಂಗದಲ್ಲಿ ಯಶಸ್ಸಿಗೆ ಪರಿಣಾಮಕಾರಿಯಾಗಿ ಪ್ರಚಾರ ಮಾಡಿಕೊಳ್ಳುವ ಅವಶ್ಯಕತೆಯನ್ನು ಕೂಡ ಮನಗಂಡಿದ್ದು, ಅದರತ್ತ ಕೂಡ ಕೆಲಸ ಮಾಡುತ್ತಿರವುದಾಗಿ ಹೇಳುತ್ತಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.