ಏರುತ್ತಿದೆ 'ಟಗರು' ಜ್ವರ!
'ದುನಿಯಾ', 'ಜಾಕಿ', 'ಅಣ್ಣಾ ಬಾಂಡ್', 'ಕೆಂಡಸಂಪಿಗೆ'. 'ದೊಡ್ಮನೆ ಹುಡುಗ' ಇತ್ಯಾದಿ ಯಶಸ್ವಿ ಸಿನೆಮಾಗಳನ್ನು ನೀಡಿ ನಟರ ಒತ್ತಾಸೆಯ ನಿರ್ದೇಶಕನಾಗಿ ಹೊರಹೊಮ್ಮಿರುವ ನಿರ್ದೇಶಕ ಸೂರಿ

Published On :
ಬೆಂಗಳೂರು: 'ದುನಿಯಾ', 'ಜಾಕಿ', 'ಅಣ್ಣಾ ಬಾಂಡ್', 'ಕೆಂಡಸಂಪಿಗೆ'. 'ದೊಡ್ಮನೆ ಹುಡುಗ' ಇತ್ಯಾದಿ ಯಶಸ್ವಿ ಸಿನೆಮಾಗಳನ್ನು ನೀಡಿ ನಟರ ಒತ್ತಾಸೆಯ ನಿರ್ದೇಶಕನಾಗಿ ಹೊರಹೊಮ್ಮಿರುವ ನಿರ್ದೇಶಕ ಸೂರಿ ನಿರ್ದೇಶನದ ಮುಂದಿನ ಚಿತ್ರ 'ಟಗರು' ಸಿನೆರಸಿಕರಲ್ಲಿ ಕುತೂಹಲವನ್ನು ಕೆರಳಿಸುತ್ತಲೇ ಇದೆ. ನಟ ಶಿವರಾಜ್ ಕುಮಾರ್ ಇದರಲ್ಲಿ ನಾಯಕನಟ.
ಬುಕ್ ಮೈ ಷೋ. ಕಾಮ್ ಅಂತರ್ಜಾಲ ತಾಣದಲ್ಲಿ 'ಟಗರು' ಸಿನೆಮಾವನ್ನು ೨೦೧೭ ರ ಅತಿ ಹೆಚ್ಚು ನಿರೀಕ್ಷಿತ ದಕ್ಷಿಣ ಭಾರತ ಸಿನೆಮಾ ಎಂದು ಆಯ್ಕೆ ಮಾಡಲಾಗಿದೆ. ಈ ತಾಣ ಪಟ್ಟಿ ಮಾಡಿರುವ ಸಿನೆಮಾಗಳಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ ೨', ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟಿಸಿರುವ '೨.೦', ತೆಲುಗು ನಟ ಚಿರಂಜೀವಿಯವರ ೧೫೦ ನೆಯ ಚಿತ್ರ 'ಖೈದಿ ನಂ. ೧೫೦'. ಪವನ್ ಕಲ್ಯಾಣ್ ಅವರ 'ಕಾಟಮರಾಯುಡು', ಕಮಲ್ ಹಾಸನ್ ಅವರ 'ವಿಶ್ವರೂಪಂ ೨' ಮತ್ತು ಮೋಹನ್ ಲಾಲ್ ಅವರ 'ಬಿಯಾಂಡ್ ಬ್ರದರ್ಸ್' ಕೂಡ ಸೇರಿದೆ. ಈ ಪಟ್ಟಿಯಲ್ಲಿ ಪುನೀತ್ ರಾಜಕುಮಾರ್ ಅವರ 'ರಾಜಕುಮಾರ' ಮತ್ತು ಯಶ್ ಅವರ 'ಕೆಜಿಎಫ್' ಕೂಡ ಸೇರಿರುವುದು ವಿಶೇಷ.
'ಕಡ್ಡಿಪುಡಿ' ಸಿನೆಮಾದ ನಂತರ ಸೂರಿ ಮತ್ತು ಶಿವಣ್ಣ ಈ ಸಿನೆಮಾದ ಮೂಲಕ ಒಟ್ಟಾಗಿರುವುದು ಕೂಡ ವಿಶೇಷ. ಸಿನೆಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಈಗ ಡಿಸೆಂಬರ್ ೨೦ ರಿಂದ ಪ್ರಾರಂಭವಾಗಲಿರುವ ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಹೊರಾಂಗಣ ಪ್ರದೇಶದ ಹುಡುಕಾಟದಲ್ಲಿದೆ ಚಿತ್ರತಂಡ.
ಈ ಸಿನೆಮಾ ನಟ ಧನಂಜಯ್, ವಸಿಷ್ಠ ಸಿಂಹ ಮತ್ತು ಮಾನ್ವಿತಾ ಹರೀಶ್ ಅವರನ್ನು ಕೂಡ ಒಟ್ಟಿಗೆ ತಂದಿದೆ. ಚರಣ್ ರಾಜ್ ಸಂಗೀತ ನೀಡುತ್ತಿದ್ದು, ಮಹೇಂದ್ರ ಸಿಂಹ ಮೊದಲ ಬಾರಿಗೆ ಛಾಯಾಗ್ರಹಣ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


