ಸಿನಿಮಾ ಸುದ್ದಿ

ಚಾಮುಂಡೇಶ್ವರಿ ದಿವ್ಯ ಸನ್ನಿಧಿಯಲ್ಲಿ ಚಿತ್ರೀಕರಣ ಮುಗಿಸಲಿರುವ 'ಚಕ್ರವರ್ತಿ'

ಇದೆ ವರ್ಷ ಮೇ ೨೩ ರಂದು ನಟ ದರ್ಶನ್ ನಟನೆಯ 'ಚಕ್ರವರ್ತಿ' ಚಿತ್ರೀಕರಣ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಚಿತ್ರೀಕರಣ ಪ್ರಾರಂಭಿಸಿತ್ತು. ಚಿಂತನ್ ನಿರ್ದೇಶನದ ಈ ಸಿನೆಮಾದ ಚಿತ್ರೀಕರಣ

ಚಾಮುಂಡೇಶ್ವರಿ ದಿವ್ಯ ಸನ್ನಿಧಿಯಲ್ಲಿ ಚಿತ್ರೀಕರಣ ಮುಗಿಸಲಿರುವ 'ಚಕ್ರವರ್ತಿ'
'ಚಕ್ರವರ್ತಿ' ಸಿನೆಮಾದಲ್ಲಿ ದರ್ಶನ್
Published On :
ಬೆಂಗಳೂರು: ಇದೆ ವರ್ಷ ಮೇ ೨೩ ರಂದು ನಟ ದರ್ಶನ್ ನಟನೆಯ 'ಚಕ್ರವರ್ತಿ' ಚಿತ್ರೀಕರಣ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಚಿತ್ರೀಕರಣ ಪ್ರಾರಂಭಿಸಿತ್ತು. ಚಿಂತನ್ ನಿರ್ದೇಶನದ ಈ ಸಿನೆಮಾದ ಚಿತ್ರೀಕರಣ ಇಲ್ಲಿಯವರೆಗೆ ಸುಗಮವಾಗಿ ಸಾಗಿದ್ದು, ಕೊನೆಯ ಫ್ರೇಮ್ ನ ಚಿತ್ರೀಕರಣ ಕೂಡ ಅದೇ ದೇವಾಲಯದಲ್ಲಿ ನಡೆಯಲಿದೆ. 
ದರ್ಶನ್ ಮತ್ತು ಅವರ ಸಹೋದರ ದಿನಕರ್. ದೇವಿ ಚಾಮುಂಡೇಶ್ವರಿಯ ಪರಮ ಭಕ್ತರು ಮತ್ತು ಅವರಿಬ್ಬರೂ ಯಾವಾಗಲೂ ದೇವಿಯ ಆಶೀರ್ವಾದಕ್ಕೆ ಮೊರೆ ಹೋಗುವುದು ಸಾಮಾನ್ಯ. ಈ ಬಾರಿ ಇಡೀ ಚಿತ್ರತಂಡ ಇದರಲ್ಲಿ ಭಾಗಿಯಾಗಿಯಾಗಲು ನಿರ್ಧರಿಸಿದ್ದು, ಕೊನೆಯ ಭಾಗದ ಚಿತ್ರೀಕರಣ ಡಿಸೆಂಬರ್ ೧೫ ಕ್ಕೆ ಜರುಗಲಿದೆ. "ಚೊಚ್ಚಲ ನಿರ್ದೇಶಕ, ಇಡೀ ತಾರಾಗಣ ಮತ್ತು ಎಲ್ಲ ತಂತ್ರಜ್ಞರು ಹಾಗು ನಿರ್ಮಾಪಕರನ್ನು ಆ ಒಂದು ಫ್ರೇಮ್ ನಲ್ಲಿ ಒಳಗೊಳ್ಳಲು ಯೋಜಿಸುತ್ತಿದ್ದಾರೆ. ದೇವಾಲಯದಲ್ಲಿ ಈ ಚಿತ್ರೀಕರಣ ನಡೆಯಲಿದೆ" ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ನಟ ದಿನಕರ್ ಮತ್ತು ನಟ ಆದಿತ್ಯ ಅವರ ಭಾಗದ ಕೊನೆಯ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಜರುಗುತ್ತಿದೆ. 
ನಿರ್ದೇಶಕ ಚಿಂತನ್ ಅವರೇ ಕಥೆ, ಚಿತ್ರಕಥೆ ಮತ್ತಿ ಸಂಭಾಷಣೆ ಬರೆದಿರುವ 'ಚಕ್ರವರ್ತಿ' ಸಿನೆಮಾದಲ್ಲಿ ನಟ ದರ್ಶನ್ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮತ್ತೊಂದು ಮುಖ್ಯ ಸಂಗತಿಯೆಂದರೆ ದರ್ಶನ್ ಸಹೋದರ ದಿನಕರ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಜೊತೆಗೆ ಆದಿತ್ಯ, ಸೃಜನ್ ಲೋಕೇಶ್ ಮತ್ತು ಕುಮಾರ್ ಬಂಗಾರಪ್ಪ ಒಳಗೊಂಡಂತೆ ದೊಡ್ಡ ತಾರಾಗಣೆವೆ ಇದೆ.
ಸಿದ್ಧಾಂತ್ ಮತ್ತು ಅಂಜಲಿ ನಾಗರಾಜ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಒದಗಿಸಿದ್ದರೆ, ಕೆ ಎಸ್ ಚಂದ್ರಶೇಖರ್ ಅವರದ್ದು ಸಿನೆಮ್ಯಾಟೋಗ್ರಫಿ. ಆನಂದ್ ಆಡಿಯೋ, ಸಂಗೀತದ ಹಕ್ಕುಗಳನ್ನು ಖರೀದಿಸಿದ್ದು, ಶೀಘ್ರದಲ್ಲೇ ಅದ್ದೂರಿ ಆಡಿಯೋ ಬಿಡುಗಡೆಗೆ ವೇದಿಗೆ ಸಜ್ಜಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.