ಸಿನಿಮಾ ಸುದ್ದಿ

ಚಿರಂಜೀವಿ ಜೊತೆಗೆ ಹೆಜ್ಜೆ ಹಾಕಿದ್ದು ಕನಸು ನನಸಾದಂತೆ: ರೈ ಲಕ್ಷ್ಮಿ

ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಹೆಜ್ಜೆ ಹಾಕುವುದು ನಟಿ ರೈ ಲಕ್ಷ್ಮಿ ಅವರ ಬಹು ದಿನಗಳ ಆಸೆಯಾಗಿತ್ತು ಮತ್ತು ಈಗ ಆ ಆಸೆ 'ಖೈದಿ ನಂ ೧೫೦' ಸಿನೆಮಾದ ಮೂಲಕ ಸಾಕಾರಗೊಳ್ಳುತ್ತಿದು,

ಚಿರಂಜೀವಿ ಜೊತೆಗೆ ಹೆಜ್ಜೆ ಹಾಕಿದ್ದು ಕನಸು ನನಸಾದಂತೆ: ರೈ ಲಕ್ಷ್ಮಿ
ಚಿರಂಜೀವಿ-ರೈ ಲಕ್ಷ್ಮಿ
Published On :
ಚೆನ್ನೈ: ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಹೆಜ್ಜೆ ಹಾಕುವುದು ನಟಿ ರೈ ಲಕ್ಷ್ಮಿ ಅವರ ಬಹು ದಿನಗಳ ಆಸೆಯಾಗಿತ್ತು ಮತ್ತು ಈಗ ಆ ಆಸೆ 'ಖೈದಿ ನಂ ೧೫೦' ಸಿನೆಮಾದ ಮೂಲಕ ಸಾಕಾರಗೊಳ್ಳುತ್ತಿದು, ನನ್ನ ಕನಸು ನನಸಾಗಿದೆ ಎಂದಿದ್ದಾರೆ ನಟಿ. 
ಟ್ವಿಟ್ಟರ್ ಮಾತುಕತೆಯಲ್ಲಿ ನಿಮ್ಮ ನೃತ್ಯ ಅನುಭವ ಹೇಗಿತ್ತು ಎಂಬ ಪ್ರಶ್ನೆಗೆ ನನಗೆ ಈ ಅವಕಾಶ ಸಿಗಲಿದೆ ಎಂದು ಎಣಿಸಿಯೇ ಇರಲಿಲ್ಲ "ಇದು ನನ್ನ ಕನಸು ನನಸಾದಂತೆ. ಈ ದಂತಕತೆಯ ಜೊತೆಗೆ ಕುಣಿಯುವ ಅವಕಾಶ ಸಿಗಲಿದೆ ಎಂದು ಎಣಿಸಿರಲಿಲ್ಲ. ಆದರೆ ಈಗ ನೀವೆಲ್ಲ ನಂಬಲೇಬೇಕು" ಎಂದು ಲಕ್ಷ್ಮಿ ಬರೆದಿದ್ದಾರೆ. 
ವಿಶೇಷ ಹಾಡೊಂದಕ್ಕೆ ಚಿರಂಜೀವಿ ಜೊತೆಗೆ ಸಿನೆಮಾದಲ್ಲಿ ಲಕ್ಷ್ಮಿ ಹೆಜ್ಜೆ ಹಾಕಿದ್ದಾರೆ. 
ವಿವಿ ವಿನಾಯಕ್ ನಿರ್ದೇಶಿಸುತ್ತಿರುವ ಈ ಸಿನೆಮಾ ತಮಿಳು ಬ್ಲಾಕ್ ಬಸ್ಟರ್ ಚಿತ್ರ 'ಥನಿ ಒರುವಂ"ನ ರಿಮೇಕ್ . ಇದು ಚಿರಂಜೀವಿ ಅವರ ೧೫೦ನೆಯ ಚಿತ್ರ ಕೂಡ. 
ಚಿರಂಜೀವಿ ಜೊತೆಗೆ ಕಾಜಲ್ ಅಗರ್ವಾಲ್ ಮತ್ತು ತರುಣ ಅರೋರಾ ನಟಿಸಿದ್ದು, ಈ ಸಿನೆಮಾವನ್ನು ರಾಮ್ ಚರಣ್ ನಿರ್ಮಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.