ಚೈನಾದಲ್ಲಿ ಚಿತ್ರೀಕರಣ ನಡೆಸುವುದಕ್ಕೆ ಖ್ಯಾತ ನಿರ್ದೇಶಕ ಕಿಮ್ ಕಿ-ಡುಕ್ ಅವರಿಗೆ ವೀಸಾ ನಿರಾಕರಣೆ
'ವೂ ಇಸ್ ಗಾಡ್' ಸಿನೆಮಾದ ಚಿತ್ರೀಕರಣಕ್ಕೆ ದಕ್ಷಿಣ ಕೊರಿಯಾದ ಖ್ಯಾತ ನಿರ್ದೇಶಕ ಕಿಮ್ ಕಿ-ಡುಕ್ ಅವರಿಗೆ ಚೈನಾ ವೀಸಾ ನಿರಾಕರಿಸಿದೆ.

Published On :
ಸಿಯೋಲ್: 'ವೂ ಇಸ್ ಗಾಡ್' ಸಿನೆಮಾದ ಚಿತ್ರೀಕರಣಕ್ಕೆ ದಕ್ಷಿಣ ಕೊರಿಯಾದ ಖ್ಯಾತ ನಿರ್ದೇಶಕ ಕಿಮ್ ಕಿ-ಡುಕ್ ಅವರಿಗೆ ಚೈನಾ ವೀಸಾ ನಿರಾಕರಿಸಿದೆ.
ದಕ್ಷಿಣ ಕೊರಿಯಾ ಮತ್ತು ಚೈನಾ ನಡುವೆ ನಡೆಯುತ್ತಿರುವ ಭೌಗೋಳಿಕ-ರಾಜಕೀಯ ವಿವಾದದಲ್ಲಿ ಕಿ-ಡುಕ್ ಅವರು ಬಲಿಪಶುವಾಗಿರುವ ರೀತಿಯಲ್ಲಿ ಇದು ಕಾಣುತ್ತಿದು "ಕೇವಲ ಒಂದು ತಿಂಗಳವರೆಗೆ ಕಿಮ್ ಕಿ-ಡುಕ್ ಅವರಿಗೆ ಪ್ರವಾಸ ವೀಸಾ ಮಾತ್ರ ನೀಡಲಾಗಿದೆ. ಆದರೆ ಅವರು ಮೂರು ತಿಂಗಳುಗಳ ಕಾಲ ಚಿತ್ರೀಕರಣ ನಡೆಸುವುದಕ್ಕೆ ವೀಸಾ ಕೋರಿದ್ದರು" ಎಂದು ಸಿನೆಮಾದ ನಿರ್ಮಾಪಕ ಜೂಲಿಯಾ ಜಾಂಗ್ ಹೇಳಿರುವುದಾಗಿ ವೆರೈಟಿ.ಕಾಮ್ ವರದಿ ಮಾಡಿದೆ.
"ಇದಕ್ಕಾಗಿ ನಮಗೆ ಇನ್ನು ಅಧಿಕೃತ ವಿವರಣೆ ಸಿಕ್ಕಿಲ್ಲ. ಈ ಸಮಯದಲ್ಲಿ ಹಲವು ಕೊರಿಯಾದ ಕಲಾವಿದರು ಚೈನಾದಲ್ಲಿ ಎದುರಿಸಬೇಕಾದ ಪರಿಸ್ಥಿತಿ ನಮಗೂ ಒದಗಿದೆ ಎಂಬ ಸಂಶಯವಿದೆ. ಈ ಪರಿಸ್ಥಿತಿ ಶೀಘ್ರದಲ್ಲೇ ಬದಲಾಗದಿದ್ದರೆ, ಕಿಮ್ ಅವರು 'ವೂ ಇಸ್ ಗಾಡ್' ಸಿನೆಮಾದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ" ಎಂದು ಜಾಂಗ್ ಹೇಳಿದ್ದಾರೆ.
ಯುದ್ಧ, ಶಾಂತಿ ಮತ್ತು ಬೌದ್ಧ ಧರ್ಮದ ಬಗೆಗಿನ ಚಿತ್ರ ಇದಾಗಿದೆ. ಸದ್ಯಕ್ಕೆ ವೆನಿಸ್ ಸಿನಿಮೋತ್ಸವದಲ್ಲಿ ಪಾಲ್ಗೊಂಡಿರುವ ಕಿಮ್ ನಾನು ಕಳೆದ ವರ್ಷದಿಂದ ಅಲ್ಲಿಂದ ಇಲ್ಲಿಗೆ ಓಡಾಡುತ್ತಿದ್ದೇನೆ. ನಾನು ಅಕ್ಟೊಬರ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಬೇಕಿತ್ತು, ಆದರೆ ಈಗ ವೀಸಾ ತೊಂದರೆ ಬಂದೊದಗಿದೆ. ನನಗೆ ಸರಿಯಾದ ಕಾರಣ ತಿಳಿದಿಲ್ಲ" ಎಂದು ಕಿಮ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
"ಇದು ಬದಲಾಗದೆ ಹೋದರೆ ನಾನು ಕಾರ್ಯಕಾರಿ ಕಲಾತ್ಮಕ ನಿರ್ದೇಶಕನಾಗಿ ಕೆಲಸ ಮಾಡಲಿದ್ದೇನೆ ಅಂದರೆ ಚೈನಾದಲ್ಲಿ ಒಬ್ಬ ನಿರ್ದೇಶಕನನ್ನಿಟ್ಟು ಕೊರಿಯಾದಿಂದಲೇ ಅವರಿಗೆ ನಿರ್ದೇಶನ ನೀಡಬೇಕಾಗುತ್ತದೆ" ಎಂದು ಕೂಡ ಕಿಮ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


