ಸಿನಿಮಾ ಸುದ್ದಿ

ಬಂಧನ ಭೀತಿ; ಕುಡಿದು ಚಾಲನೆ ಮಾಡಿದ್ದ ನಟ ಅರುಣ್ ವಿಜಯ್ ನಾಪತ್ತೆ

ಕನ್ನಡದ ಚಕ್ರವ್ಯೂಹ ಚಿತ್ರದಲ್ಲಿ ಪುನೀತ್ ಎದುರಿಗೆ ವಿಲನ್ ಆಗಿ ನಟಿಸಿದ್ದ ತಮಿಳು ನಟ ಅರುಣ್ ವಿಜಯ್ ಪಾನಮತ್ತ ಚಾಲನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು ಇದೀಗ...

ಬಂಧನ ಭೀತಿ; ಕುಡಿದು ಚಾಲನೆ ಮಾಡಿದ್ದ ನಟ ಅರುಣ್ ವಿಜಯ್ ನಾಪತ್ತೆ
ಅರುಣ್ ವಿಜಯ್
Published On :

ಚೆನ್ನೈ: ಕನ್ನಡದ ಚಕ್ರವ್ಯೂಹ ಚಿತ್ರದಲ್ಲಿ ಪುನೀತ್ ಎದುರಿಗೆ ವಿಲನ್ ಆಗಿ ನಟಿಸಿದ್ದ ತಮಿಳು ನಟ ಅರುಣ್ ವಿಜಯ್ ಪಾನಮತ್ತ ಚಾಲನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು ಇದೀಗ ನಾಪತ್ತೆಯಾಗಿದ್ದಾರೆ.

ಕ್ರಿಕೆಟಿಗ ಅಭಿಮನ್ಯು ಮಿಥುನ್ ಮತ್ತ ನಟಿ ರಾಧಿಕಾ ಶರತ್ ಕುಮಾರ್ ಪುತ್ರಿ ರಯಾನೆ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅರುಣ್ ವಿಜಯ್ ಅಲ್ಲಿಂದ ಹೊರಟು ಬರುವಾಗ ಬೆಳಗ್ಗೆ 3 ಸುಮಾರಿಗೆ ನಂಗಮಕ್ಕಂ ಪೊಲೀಸ್ ಠಾಣೆ ಹೊರಗಡೆ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು.

ಈ ವೇಳೆ ಅರುಣ್ ವಿಜಯ್ ಪಾನಪತ್ತರಾಗಿದ್ದು ಅವರು ವಿರುದ್ಧ ಕುಡಿದು ವಾಹನ ಚಾಲನೆ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಹೇಳಿದ್ದು ಸೋಮವಾರದಿಂದ ನಟ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ಮರುಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಸದ್ಯ ಅರುಣ್ ವಿಜಯ್ ಕಾರನ್ನು ಪಾಂಡಿ ಬಜಾರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.