ಅದ್ದೂರಿ ಚಾಲನೆಗೆ ಸೂರಿ 'ಟಗರು' ಸಿದ್ಧ; ಶಿವಣ್ಣನ ಜೊತೆಗೆ ಧನಂಜಯ್, ವಸಿಷ್ಠ
ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರ ಮುಂದಿನ ನಿರ್ಮಾಣದ ಚಿತ್ರ 'ಟಗರು' ಅವರ ಹೃದಯಕ್ಕೆ ಹತ್ತಿರದ ಚಿತ್ರವಂತೆ. ನಟ ಶಿವರಾಜ್ ಕುಮಾರ್ ಅವರನ್ನು ಹಿರಿಯ ನಿರ್ದೇಶಕ ಸೂರಿ ನಿರ್ದೇಶಿಸುತ್ತಿದ್ದು ಶ್ರೀಕಾಂತ್

Published On :
ಬೆಂಗಳೂರು: ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರ ಮುಂದಿನ ನಿರ್ಮಾಣದ ಚಿತ್ರ 'ಟಗರು' ಅವರ ಹೃದಯಕ್ಕೆ ಹತ್ತಿರದ ಚಿತ್ರವಂತೆ. ನಟ ಶಿವರಾಜ್ ಕುಮಾರ್ ಅವರನ್ನು ಹಿರಿಯ ನಿರ್ದೇಶಕ ಸೂರಿ ನಿರ್ದೇಶಿಸುತ್ತಿದ್ದು ಶ್ರೀಕಾಂತ್ ಅವರ ಬ್ಯಾನರ್ ವೀನಸ್ ಎಂಟರ್ಟೈನರ್ಸ್ ಅಡಿ ಸಿನೆಮಾ ನಿರ್ಮಾಣಗೊಳ್ಳುತ್ತಿದೆ ಮತ್ತು ಆಗಸ್ಟ್ 21 ಕ್ಕೆ ಅಧಿಕೃತ ಚಾಲನೆ ಸಿಗಲಿದೆ.
"ಅಂದು (ಆಗಸ್ಟ್ 21) ನನಗೆ ಅತಿ ದೊಡ್ಡ ದಿನ ಮತ್ತು ಗೀತಾ ಶಿವರಾಜ್ ಕುಮಾರ್ ನಮ್ಮ ಬ್ಯಾನರ್ ಬಿಡುಗಡೆ ಮಾಡಲಿರುವುದಕ್ಕೆ ಉತ್ಸುಕನಾಗಿ ಕಾಯುತ್ತಿದ್ದೇನೆ" ಎನ್ನುತ್ತಾರೆ ಸ್ವತಂತ್ರ ನಿರ್ಮಾಪಕನಾಗಿ ಹೊರಹೊಮ್ಮಿರುವ ಶ್ರೀಕಾಂತ್.
ಶಿವಣ್ಣ ಮತ್ತು ಸೂರಿ ಜೋಡಿಯಲ್ಲಿ ಮೂಡಿಬರುತ್ತಿರುವ 'ಟಗರು' ಒಂದು ಸವಾಲು ಎನ್ನುವ ಅವರು "ನಾನು ಶಿವರಾಜ್ ಕುಮಾರ್ ಅವರನ್ನು ವರ್ಷಗಳಿಂದ ಬಲ್ಲೆ ಮತ್ತು ಅವರ ಗುಣ ನನಗೆ ತಿಳಿದಿದೆ. ಆದರೆ ಸೂರಿ ಅಂತಹ ನಿರ್ದೇಶಕನನ್ನು ನಿಭಾಯಿಸುವುದು ನನಗೆ ಸಾಹಸದಂತೆ" ಎನ್ನುತ್ತಾರೆ. ಈ ಹಿಂದೆ 2013 ರಲ್ಲಿ ಸೂರಿ, ಶಿವಣ್ಣ ನಟನೆಯ 'ಕಡ್ಡಿಪುಡಿ' ಸಿನೆಮಾ ನಿರ್ದೇಶಿಸಿದ್ದರು.
'ಟಗರು' ಸಿನೆಮಾದ ಸ್ಟಿಲ್ ಗಳು ಈಗಾಗಲೇ ಅಭಿಮಾನಿಗಳ ನಡುವೆ ಸಂಚಲನ ಸೃಷ್ಟಿಸಿದೆ. ಈ ಚಿತ್ರದಲ್ಲಿ ಶಿವಣ್ಣ ಅವರನ್ನು ಇತರ ನಟರಾದ ಧನಂಜಯ್, ವಸಿಷ್ಠ ಸುತ್ತುವರೆದಿರುವುದನ್ನು ಕಾಣಬಹುದಾಗಿದೆ. ಮಾನ್ವಿತಾ ಹರೀಶ್ ಕೂಡ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.
ಭಾನುವಾರ ಸಿನೆಮಾದ ಮುಹೂರ್ತ ನಡೆಯಲಿದ್ದು, ಸದ್ಯಕ್ಕೆ ಸೂರಿ ಥಿಯಾಟ್ರಿಕಲ್ ಟ್ರೇಲರ್ ಚಿತ್ರೀಕರಿಸುತ್ತಿದ್ದು, ಪುನೀತ್ ರಾಜಕುಮಾರ್ ಅವರ 'ದೊಡ್ಮನೆ ಹುಡುಗ' ಸಿನೆಮಾದ ಜೊತೆಗೆ ಟ್ರೇಲರ್ ಬಿಡುಗಡೆ ಮಾಡಲಿದ್ದಾರಂತೆ.
ಸೆಪ್ಟೆಂಬರ್ 18 ರಿಂದ 'ಟಗರು' ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ. ಅದಕ್ಕೆ ಮುಂಚಿತವಾಗಿ ಸೂರಿ ಉಳಿದ ತಾರಾಗಣವನ್ನು ಆಯ್ಕೆ ಮಾಡಲಿದ್ದಾರಂತೆ. ಚರಣ್ ರಾಜ್ ಸಂಗೀತ ನೀಡಲಿದ್ದು, ನಿರ್ದೇಶಕ ಮಹೇಂದ್ರ ಸಿಂಹ ಸಿನೆಮ್ಯಾಟೋಗ್ರಾಫರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


