ಸಿನಿಮಾ ಸುದ್ದಿ

ಭೂಗತ 'ಚಕ್ರವರ್ತಿಗೆ' ರೆಟ್ರೋ ಭಾರತ್ ಬ್ರಾಸ್ ಬ್ಯಾಂಡ್

'ಚಕ್ರವರ್ತಿ' ಸಿನೆಮಾದ ಸಂಗೀತದಲ್ಲಿ 80-90 ದಶಕದ ಮಾಹೋಲ್ ಸೃಷ್ಟಿಸಲು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ಕೇಳಿಕೊಂಡಾಗ ಅದಕ್ಕೆ ಅವರು ಪೂರಕವಾಗಿ ಪ್ರತಿಕ್ರಿಯಿಸಿದ್ದಾರೆ.

ಭೂಗತ 'ಚಕ್ರವರ್ತಿಗೆ' ರೆಟ್ರೋ ಭಾರತ್ ಬ್ರಾಸ್ ಬ್ಯಾಂಡ್
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ
Published On :
ಬೆಂಗಳೂರು: 'ಚಕ್ರವರ್ತಿ' ಸಿನೆಮಾದ ಸಂಗೀತದಲ್ಲಿ 80-90 ದಶಕದ ಮಾಹೋಲ್ ಸೃಷ್ಟಿಸಲು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ಕೇಳಿಕೊಂಡಾಗ ಅದಕ್ಕೆ ಅವರು ಪೂರಕವಾಗಿ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಚಿತ್ರರಂಗದ ಬ್ಯುಸಿ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಅರ್ಜುನ್, ಮೈಸೂರಿನ ಪ್ರಖ್ಯಾತ ಭಾರತ್ ಬ್ರಾಸ್ ಬ್ಯಾಂಡ್ ಅನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ. ದಸರಾ ಹಬ್ಬ ಮತ್ತು ಮದುವೆಗಳಿಗೆ ನುಡಿಸುವ ಪ್ರಖ್ಯಾತ ಬ್ಯಾಂಡ್ ಇದು. 
"ಚಿತ್ರತಂಡಕ್ಕೆ ಈ ಸಿನೆಮಾದ ಸಂಗೀತ ರೆಟ್ರೋ ಶೈಲಿಯಲ್ಲಿ ಬೇಕಾಗಿತ್ತು. ಆದುದರಿಂದ ನಾನು ಲೈವ್ ಬ್ಯಾಂಡ್ ಕರೆಸಿ ಸಂಗೀತ ರೆಕಾರ್ಡ್ ಮಾಡಲು ನಿಶ್ಚಯಿಸಿದೆ. ದಸರಾ ಹಬ್ಬದಲ್ಲಿ ನುಡಿಸಿ ಪ್ರಖ್ಯಾತವಾಗಿರುವ ಭಾರತ್ ಬ್ರಾಸ್ ಬ್ಯಾಂಡ್ ಕರೆಸಿ ಎರಡು ದಿನಗಳಲ್ಲಿ ರೆಕಾರ್ಡಿಂಗ್ ಮುಗಿಸಿದ್ದೇನೆ" ಎನ್ನುತ್ತಾರೆ ಸಂಗೀತ ನಿರ್ದೇಶಕ ಅರ್ಜುನ್. 
ಹಾಡುಗಳ ಚಿತ್ರೀಕರಣವು ಪ್ರಗತಿಯಲ್ಲಿದ್ದು, ನಟಿ ಇಶಿತಾ ವ್ಯಾಸ್ ಕೂಡ ಭಾಗಿಯಾಗಿದ್ದಾರೆ. "ಈ ಹಾಡು 80 ದಶಕದಲ್ಲಿ ನಡೆಯುವಂತಾದ್ದು. ಇದರಲ್ಲಿ ನಟ ದರ್ಶನ್ ಸೇರಿದಂತೆ 150 ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ" ಎನ್ನುತ್ತಾರೆ ನಿರ್ದೇಶಕ ಚಿಂತನ್.
ದೀಪಾ ಸನ್ನಿಧಿ ನಾಯಕ ನಟಿಯಾಗಿರುವ 'ಚಕ್ರವರ್ತಿ'ಯಲ್ಲಿ ದರ್ಶನ್ ಸಹೋದರೆ ದಿನಕರ್ ತೂಗುದೀಪ ಖಳನಾಯಕ. ಸೃಜನ್ ಲೋಕೇಶ್ ಮತ್ತು ಆದಿತ್ಯ ಕೂಡ ತಾರಾಗಣದ ಭಾಗವಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.