ಖ್ಯಾತ ಸಾಹಿತಿ ನ. ಮುತ್ತುಕುಮಾರ್ ವಿಧಿವಶ
ಅನಾರೋಗ್ಯದಿಂದ ನರಳುತ್ತಿದ್ದ ಖ್ಯಾತ ತಮಿಳು ಸಾಹಿತಿ ಹಾಗೂ ಅಂಕಣಕಾರ ನ. ಮುತ್ತುಕುಮಾರ್ ಅವರು ಶನಿವಾರ ವಿಧಿವಶರಾಗಿದ್ದಾರೆ...

ಚೆನ್ನೈ: ಅನಾರೋಗ್ಯದಿಂದ ನರಳುತ್ತಿದ್ದ ಖ್ಯಾತ ತಮಿಳು ಸಾಹಿತಿ ಹಾಗೂ ಅಂಕಣಕಾರ ನ. ಮುತ್ತುಕುಮಾರ್ ಅವರು ಶನಿವಾರ ವಿಧಿವಶರಾಗಿದ್ದಾರೆ.
ಕೆಲ ದಿನಗಳಿಂದ ಜಾಡೀಂಸ್ ನಿಂದ ಬಳಲುತ್ತಿದ್ದ ನ. ಮುತ್ತುಕುಮಾರ್ (41) ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಮುತ್ತುಕುಮಾರ್ ಅವರು ಈವರೆಗೂ 1000ಕ್ಕೂ ಹೆಚ್ಚು ಚಿತ್ರಗಳ ಹಾಡಿಗೆ ಸಾಹಿತಿ ಬರೆದಿದ್ದಾರೆ. ನಿರ್ದೇಶನದ ಕನಸು ಹಿಡಿದು ತಮಿಳು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮುತ್ತುಕುಮಾರ್ ಅವರು, ಬಾಲು ಮಹೇಂದರ್ ಅವರೊಂದಿಗೆ ಕೆಲಸ ಮಾಡಲು ಆರಂಭಿಸಿದ್ದರು. ನಂತರ ಸಾಹಿತ್ಯ ರಂಗದಲ್ಲಿ ಹೆಸರು ಮಾಡಲು ಆರಂಭಿಸಿದ್ದರು. ತಂಗ ಮೀಂಗಲ್ ಸಿನಿಮಾದ ಆನಂದ ಯಾಜೈ ಮತ್ತು ಸೈವಂ ಚಿತ್ರದ ಅಜಾಗೆ ಅಜಾಗು ಹಾಡಿನ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು.
ಕಾಂಚೀಪುರಂನ ಕನ್ನಿಕಾಪುರಂನಲ್ಲಿ ಜನಿಸಿದ್ದ ಮುತ್ತುಕುಮಾರ್ ಅವರು ಚಿಕ್ಕ ಮಗುವಿದ್ದಾಗಲೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಪುಸ್ತಕದ ಜೊತೆಯೇ ಬೆಳೆದಿದ್ದ ಇವರು, 2006ರಲ್ಲಿ ಜೀವನಲಕ್ಷ್ಮೀ ಎಂಬುವವರೊಂದಿಗೆ ವಿವಾಹವಾಗಿದ್ದರು. ಇವರಿಗೆ 9 ವರ್ಷದ ಮಗ ಆಧವನ್ ಹಾಗೂ 9 ತಿಂಗಳ ಹೆಣ್ಣು ಮಗು ಯೋಗಲಕ್ಷ್ಮಿ ಎಂಬ ಮಕ್ಕಳಿದ್ದಾರೆ.
ಮುತ್ತುಕುಮಾರ್ ಅವರ ಸಾವಿಗೆ ಸಾಮಾಜಿಕ ತಾಣದಲ್ಲಿ ಸಾಕಷ್ಟು ಮಂದಿ ಸಂತಾಪ ಸೂಚಿಸುತ್ತಿದ್ದಾರೆ, ನಟ ಸಿದ್ಧಾರ್ಥ್ ಅವರು ಟ್ಟಿಟರ್ ನಲ್ಲಿ ಆಘಾತ ವ್ಯಕ್ತಪಡಿಸಿದ್ದು, 'ಮುತ್ತು ಕುಮಾರ್ ಅವರು ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಚಿತ್ರರಂಗಕ್ಕೆ ದೊಡ್ಡ ನಷ್ಟ! ದುಃಖದ ದಿನ' ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


