ಧ್ರುವ ಸರ್ಜಾ 'ಜಬರದಸ್ತ್' ಆಕ್ಷನ್!
'ಆಕ್ಷನ್ ಪ್ರಿನ್ಸ್' ಧ್ರುವ್ ಸರ್ಜಾ ಅವರಿಗೆ ಆಕ್ಷನ್ ಸಿನೆಮಾಗಳು ಕೈಬೀಸಿ ಕರೆಯುತ್ತವೆ. ಈಗ ಅವರ ನೂತನ ಸಿನೆಮಾದ ಹೆಸರು 'ಜಬರದಸ್ತ್'. ಈ ಸಿನೆಮಾದ ತರಬೇತಿಗಾಗಿ ಹಾಲಿವುಡ್ ಆಕ್ಷನ್

ಬೆಂಗಳೂರು: 'ಆಕ್ಷನ್ ಪ್ರಿನ್ಸ್' ಧ್ರುವ್ ಸರ್ಜಾ ಅವರಿಗೆ ಆಕ್ಷನ್ ಸಿನೆಮಾಗಳು ಕೈಬೀಸಿ ಕರೆಯುತ್ತವೆ. ಈಗ ಅವರ ನೂತನ ಸಿನೆಮಾದ ಹೆಸರು 'ಜಬರದಸ್ತ್'. ಈ ಸಿನೆಮಾದ ತರಬೇತಿಗಾಗಿ ಹಾಲಿವುಡ್ ಆಕ್ಷನ್ ನಿರ್ದೇಶಕನ ಮೊರೆ ಹೋಗಲಿದ್ದಾರೆ ಎಂದಿವೆ ಮೂಲಗಳು.
"ಧ್ರುವ್ ಸರ್ಜಾ ಅವರಿಗೆ ಸಾಕಷ್ಟು ಸ್ಟಂಟ್ ಪ್ರತಿಭೆ ಇರುವುದರಲ್ಲಿ ಎರಡು ಮಾತಿಲ್ಲ ಆದರೆ ಹಾಲಿವುಡ್ ಆಕ್ಷನ್ ನಿರ್ದೇಶಕರ ಬಳಿಯಲ್ಲಿ ಪಡೆಯುವ ತರಬೇತಿ ಇನ್ನು ಹೆಚ್ಚಿನ ಪರಿಣಿತಿಗೆ ಸಹಕಾರಿಯಾಗಬಲ್ಲುದು" ಎನ್ನುವ ಮೂಲಗಳು "ಸಾಮಾನ್ಯವಾಗಿ ಆಕ್ಷನ್ ಸಿನಿಮಾಗಳನ್ನೇ ಹೆಚ್ಚು ಮಾಡುವ ಈ ಹೀರೋಗೆ ಇದು ಸಹಾಯ ಮಾಡುತ್ತದೆ" ಎನ್ನುತ್ತಾರೆ.
ಮೊದಲಿನ ಘೋಷಣೆಯಂತೆ ನಿರ್ದೇಶಕ ನಂದಕಿಶೋರ್ ಮತ್ತು ನಟ ಧ್ರುವ್ ಸರ್ಜಾ ತೆಲುಗಿನ ರೋಮ್ಯಾಂಟಿಕ್-ಆಕ್ಷನ್-ಕಾಮಿಡಿ ಚಿತ್ರ 'ಕಂದಿರೀಗ'ದ ರಿಮೇಕ್ ಮಾಡಬೇಕಿತ್ತು. ಆದರೆ ಈಗ ಆ ಯೋಜನೆಯನ್ನು ನಿಲ್ಲಿಸಿ ಎರಡು ವರ್ಷಗಳ ನಂತರ ಸ್ವತಂತ್ರ ಸ್ಕ್ರಿಪ್ಟ್ ನಿರ್ದೇಶಿಸಲು ಮುಂದಾಗಿದ್ದಾರೆ. 'ಜಬರದಸ್ತ್' ಸಿನೆಮಾವನ್ನು ಗಂಗಾಧರ್ ನಿರ್ಮಿಸುತ್ತಿದ್ದಾರೆ.
ನಂದ ಕಿಶೋರ್ ಸದ್ಯಕ್ಕೆ 'ಟೈಗರ್' ಮತ್ತು 'ಮುಕುಂದ ಮುರಾರಿ' ಸಿನೆಮಾಗಳು ಚಿತ್ರೀಕರಣ ನಂತರದ ಕೆಲಸಗಳಲ್ಲಿ ನಿರತರಾಗಿದ್ದು ಜೊತೆಗೆ ಮನೋರಂಜನ್ ಅವರ 'ವಿ ಐ ಪಿ' ಸಿನೆಮಾ ಚಿತ್ರೀಕರಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಧ್ರುವ್ ಅವರು ಸದ್ಯಕ್ಕೆ 'ಭರ್ಜರಿ' ಚಿತ್ರೀಕರಣದಲ್ಲಿ ನಿರತರಾಗಿದ್ದು, ಇಬ್ಬರೂ 'ಜಬರದಸ್ತ್' ಸಿನೆಮಾವನ್ನು ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


