'ಚಂಗುಮಣಿ'ಯಾಗಿ ರವಿಚಂದ್ರನ್ ಪುತ್ರ ಮನೋರಂಜನ್
ರವಿಚಂದ್ರನ್ ಪುತ್ರ ಮನೋರಂಜನ್ ಕೂಡ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದು, ತನ್ನ ಚೊಚ್ಚಲ ಚಿತ್ರದ ಮೂಲಕ ಸಾವಿರಾರು ಹೃದಯಗಳನ್ನು...

ಬೆಂಗಳೂರು: ತಂದೆ ವೀರಸ್ವಾಮಿ ಅವರ ಸಿನಿಮಾ ಪರಂಪರೆಯನ್ನು ಮಗ ರವಿಚಂದ್ರನ್ ಮುಂದುವರಿಸಿದರು, ಈಗ ರವಿಚಂದ್ರನ್ ಪುತ್ರ ಮನೋರಂಜನ್ ಕೂಡ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದು, ತನ್ನ ಚೊಚ್ಚಲ ಚಿತ್ರದ ಮೂಲಕ ಸಾವಿರಾರು ಹೃದಯಗಳನ್ನು ಗೆಲಲ್ಲು ಮುಂದಾಗಿದ್ದಾರೆ.
ಭರತ್ ನಿರ್ದೇಶನದಲ್ಲಿ ಮನೋರಂಜನ್ ಅಭಿನಯಿಸುತ್ತಿರುವ ಸಾಹೇಬ ಚಿತ್ರ ಶೂಟಿಂಗ್ ಮುಗಿದಿದ್ದು, ರಿಲೀಸ್ ಗಾಗಿ ಕಾಯುತ್ತಿದ್ದಾರೆ, ಈ ನಡುವೆ ಮೂರು ಚಿತ್ರಗಳಿಗೆ ಮನೋರಂಜನ್ ಗೆ ಅವಕಾಶ ಸಿಕ್ಕಿದೆ.
ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ತಮಿಳಿನ ವಿಐಪಿ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುತ್ತಿದ್ದು, ಅದರಲ್ಲಿ ಮನೋರಂಜನ್ ಅಭಿನಯಿಸುತ್ತಿದ್ದು, ನಂದಕಿಶೋರ್ ನಿರ್ದೇಶನ ಮಾಡಲಿದ್ದಾರೆ.
ಗೋಲಿಸೋಡಾ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ರಘುರಾಜು ಸ್ವತಂತ್ರ್ಯ ನಿರ್ದೇಶಕರಾಗಿ ಚಂಗುಮಣಿ ಚಿತ್ರ ನಿರ್ದೇಶಿಸುತ್ತಿದ್ದು ಮನೋರಂಜನ್ ಅದರಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
1979 ರಲ್ಲಿ ಬಿಡುಗಡೆಯಾದ ಐತಿಹಾಸಿಕ ಚಿತ್ರ ಹುಲಿಯಹಾಲಿನ ಮೇವು ಸಿನಿಮಾದಲ್ಲಿ ವರನಟ ಡಾ. ರಾಜ್ ಕುಮಾರ್ ಅಭಿನಯಿಸಿದ್ದರು. 18ನೇ ಶತಮಾನದಲ್ಲಿ ಕೂರ್ಗ್ ಪ್ರದೇಶದಲ್ಲಿ ಮುಖ್ಯಸ್ಥನ ಬಗ್ಗೆ ಕಥೆಯಿದ್ದ ಭಾರತೀಸುತ ಅವರ ಕಾದಂಬರಿ ಆಧರಿಸಿ ತಯಾರು ಮಾಡಿದ್ದ ಈ ಸಿನಿಮಾದಲ್ಲಿ ಡಾ. ರಾಜ್ ಕುಮಾರ್ ಚಂಗುಮಣಿ ಪಾತ್ರದಲ್ಲಿ ಅಭಿನಯಿಸಿದ್ದರು. ಚಂಗುಮಣಿ ಚಿತ್ರ ಮನೋರಂಜನ್ ಅಭಿನಯದ ಮೊದಲ ಕಮರ್ಷಿಯಲ್ ಚಿತ್ರ ಇದಾಗಿದೆ.
ರವಿಚಂದ್ರನ್ ಕುಟುಂಬದಲ್ಲಿ ಅತ್ಯಂತ ಪ್ರತಿಭಾವಂತ ನಟ ಮನೋರಂಜನ್ ಆಗಿದ್ದು, ಅವರ ಜೊತೆ ಕೆಲಸ ಮಾಡುವುದು ತುಂಬಾ ಸುಲಭ ಎಂದು ರವಿಚಂದ್ರನ್ ಕುಟುಂಬದ ಆಪ್ತರೊಬ್ಬರು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


