ಸಿನಿಮಾ ಸುದ್ದಿ

ಹಾಸ್ಯ ಚಿತ್ರ 'ದ ಲೆಜೆಂಡ್ ಆಫ್ ಮೈಕೆಲ್ ಮಿಶ್ರಾ' ಪಂಜಾಬ್ ನಲ್ಲಿ ನಿಷೇಧ

ಹಾಸ್ಯ ಚಲನಚಿತ್ರ 'ದ ಲೆಜೆಂಡ್ ಆಫ್ ಮೈಕೆಲ್ ಮಿಶ್ರಾ' ಪ್ರದರ್ಶನದ ಮೇಲೆ ನಿಷೇಧ ಹೇರಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ.

ಹಾಸ್ಯ ಚಿತ್ರ 'ದ ಲೆಜೆಂಡ್ ಆಫ್ ಮೈಕೆಲ್ ಮಿಶ್ರಾ' ಪಂಜಾಬ್ ನಲ್ಲಿ ನಿಷೇಧ
'ದ ಲೆಜೆಂಡ್ ಆಫ್ ಮೈಕೆಲ್ ಮಿಶ್ರಾ' ಸಿನೆಮಾದ ಪೋಸ್ಟರ್
Published On :
ಚಂಡೀಘರ್: ಹಾಸ್ಯ ಚಲನಚಿತ್ರ 'ದ ಲೆಜೆಂಡ್ ಆಫ್ ಮೈಕೆಲ್ ಮಿಶ್ರಾ' ಪ್ರದರ್ಶನದ ಮೇಲೆ ನಿಷೇಧ ಹೇರಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ. 
"ಎರಡು ತಿಂಗಳವರೆಗೆ ಈ ಸಿನೆಮಾದ ಪ್ರದರ್ಶನವನ್ನು ರದ್ದುಗೊಳಿಸಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ ಮತ್ತು ಈ ಸಮಯದಲ್ಲಿ ಇದನ್ನು ಪ್ರಮಾಣಪತ್ರ ಪಡೆಯದ ಸಿನೆಮಾ ಎಂದು ಪರಿಗಣಿಸಲಾಗುತ್ತದೆ" ಎಂದು ಸರ್ಕಾರದ ವಕ್ತಾರ ಹೇಳಿದ್ದಾರೆ. 
"ಮಹರ್ಷಿ ವಾಲ್ಮೀಕಿ ಬಗೆಗೆ ಆಕ್ಷೇಪಣೀಯ ಸಂಗತಿಗಳು ಸಿನೆಮಾದಲ್ಲಿದ್ದು ವಾಲ್ಮೀಕಿ ಸಮುದಾಯ ಇದಕ್ಕೆ ವಿರೋಧ ತೋರಿರುವುದರಿಂದ" ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. 
"ರಾಜ್ಯದಲ್ಲಿ ಕಷ್ಟ ಪಟ್ಟು ಸಾಧಿಸಲಾಗಿರುವ ಸೌಹಾರ್ದ ಮತ್ತು ಶಾಂತಿಯನ್ನು ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ಈ ಚಿತ್ರದ ಪ್ರದರ್ಶನ ಭಾರಿ ಪ್ರತಿಭಟನೆಗಳಿಗೆ ಎಡೆಮಾಡಿಕೊಡುವ ಸಾಧ್ಯತೆ ಇದೆ" ಎಂದು ವಕ್ತಾರ ಹೇಳಿದ್ದಾರೆ. 
ಅರ್ಶದ್ ವಾರ್ಸಿ, ಅದಿತಿ ರಾವ್ ಮತ್ತು ಬೊಮ್ಮನ್ ಇರಾನಿ ನಟಿಸಿರುವ ಈ ಚಿತ್ರ ಆಗಸ್ಟ್ 5 ಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.