'ಡಿಕ್ಟೇಟರ್' ಚಿತ್ರದಿಂದ ಹುಚ್ಚ ವೆಂಕಟ್ ಔಟ್, ನಿರ್ದೇಶಕರ ವಿರುದ್ಧ 'ಫೈರಿಂಗ್'
ಸದಾ ಒಂದಲ್ಲ ಒಂದು ವಿವಾದಗಳಿಂದಲೇ ಖ್ಯಾತಿ ಪಡೆದಿರುವ ಸ್ಯಾಂಡಲ್ ವುಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಎಸ್. ನಾರಾಯಣ ನಿರ್ದೇಶನದ...

Published On :
ಬೆಂಗಳೂರು: ಸದಾ ಒಂದಲ್ಲ ಒಂದು ವಿವಾದಗಳಿಂದಲೇ ಖ್ಯಾತಿ ಪಡೆದಿರುವ ಸ್ಯಾಂಡಲ್ ವುಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಎಸ್. ನಾರಾಯಣ್ ನಿರ್ದೇಶನದ 'ಡಿಕ್ಟೇಟರ್' ಚಿತ್ರದಿಂದ ಹೊರ ನಡೆದು ಮತ್ತೆ ಸುದ್ದಿಯಲ್ಲಿದ್ದಾರೆ.
ಚಿತ್ರದಿಂದ ಹೊರಬಂದ ನಂತರ ನಿರ್ದೇಶಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವೆಂಕಟ್, ನಾನು ಸಾಹಸಸಿಂಹ ವಿಷ್ಣುವರ್ಧನ್ ಸಾರ್ ಬಿಟ್ಟರೆ ಹ್ಯಾಟ್ರಿಕ್ ಹೀರೋ ಶಿವಣ್ಣನ ಕಟ್ಟಾ ಅಭಿಮಾನಿಯಾಗಿದ್ದು, ನಾರಾಯಣ್ ಗೆಲ್ಲಾ 'ಕೇರ್ ಮಾಡಲ್ಲ ಎಂದಿದ್ದಾರೆ. ಅಲ್ಲದೆ ನಾರಾಯಣ್ ಅವರ ತಮ್ಮ ಜನಪ್ರಿಯತೆಯನ್ನು ಚಿತ್ರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಯಾರಿಗೂ ತಲೆ ತಗ್ಗಿಸಿ ನಡೆಯೋನಲ್ಲ, ನಾನು ನನ್ನಿಷ್ಟದಂತೆ ನನ್ನ ಬ್ಯಾನರಿನಲ್ಲೇ ಅಭಿನಯಿಸಿ ನನ್ನ ಅಭಿಮಾನಿಗಳನ್ನ ಖುಷಿಪಡಿಸುತ್ತೇನೆ ಎಂದು ಹೇಳಿದ್ದಾರೆ.
'ಡಿಕ್ಟೇಟರ್' ಚಿತ್ರತಂಡ ತಮ್ಮ ಕಾಲ್‌ಶೀಟ್ ಪಡೆದು ತಮ್ಮ ಸಮಯವನ್ನು ಹಾಳು ಮಾಡಿದ್ದು, ಅದಕ್ಕಾಗಿ ನಾನು ಚಿತ್ರದಿಂದ ಹೊರಬಂದಿದ್ದೇನೆ. ನಾನು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ನನ್ನ ಅಭಿಮಾನಿಗಳು ಖುಷಿಪಟ್ಟಿದ್ದರು. ನನ್ನಿಂದಲೇ 'ಡಿಕ್ಟೇಟರ್' ಚಿತ್ರಕ್ಕೆ ಪ್ರಚಾರ ಸಿಕ್ಕಿದ್ದು ಎಂದು ವೆಂಕಟ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


