ಹಾರರ್ ಚಿತ್ರದ ಮೂಲಕ ಪೂನಂ ಪಾಂಡೆ ಸ್ಯಾಂಡಲ್ವುಡ್ ಗೆ ಎಂಟ್ರಿ
ತಮ್ಮ ಚೊಚ್ಚಲ ಚಿತ್ರ 'ನಶಾ'ದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ವಿವಾದಾತ್ಮಕ ನಟಿ ಪೂನಂ ಪಾಂಡೆ ಈಗ ಕನ್ನಡದ ಹಾರರ್ ಸಿನೆಮಾದಲ್ಲಿ ಕಾಣಿಕೊಳ್ಳಲಿದ್ದಾರೆ.

ಮುಂಬೈ: ತಮ್ಮ ಚೊಚ್ಚಲ ಚಿತ್ರ 'ನಶಾ'ದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ವಿವಾದಾತ್ಮಕ ನಟಿ ಪೂನಂ ಪಾಂಡೆ ಈಗ ಕನ್ನಡದ ಹಾರರ್ ಸಿನೆಮಾದಲ್ಲಿ ಕಾಣಿಕೊಳ್ಳಲಿದ್ದಾರೆ.
"ಇತ್ತೀಚಿಗೆ ನಿರ್ದೇಶಕರೊಬ್ಬರು ಕಥೆ ಹೇಳಲು ಕರೆ ಮಾಡಿದ್ದಕ್ಕೆ ಮುಂಬೈಗೆ ಹೋಗಿದ್ದೆ. ನನಗೆ ಸ್ಕ್ರಿಪ್ಟ್ ಬಹಳ ಹಿಡಿಸಿತು ಅದಕ್ಕೆ ಅಂದೇ ಒಪ್ಪಿಗೆ ನೀಡಿದ್ದೇನೆ.
"ಇದು ಹಾರರ್ ಸಿನೆಮಾ ಮತ್ತು ಮೊದಲ ಬಾರಿಗೆ ಹಾರರ್ ಸಿನೆಮಾದಲ್ಲಿ ನಟಿಸಲಿದ್ದೇನೆ. ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ" ಎಂದು ಪೂನಂ ಹೇಳಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಈ ತಿಂಗಳಲ್ಲೇ ಪ್ರಾರಂಭವಾಗಲಿದ್ದು, ಸಿನೆಮಾದಲ್ಲಿ ತಮ್ಮ ಭಯಂಕರ-ಭೀಕರ-ಬೀಭತ್ಸ ನಟನೆಯನ್ನು ಪ್ರದರ್ಶಿಸಲು ಸಿದ್ಧನಾಗಿದ್ದೇನೆ ಎನ್ನುತ್ತಾರೆ ಪೂನಂ ಪಾಂಡೆ.
"ನನ್ನ ಚೊಚ್ಚಲ ಚಿತ್ರ 'ನಶಾ'ದಲ್ಲಿ ರೋಮ್ಯಾಂಟಿಕ್ ಪಾತ್ರ ನಿರ್ವಹಿಸಿದೆ. 'ಮಾಲಿನಿ & ಕೊ.' ನಲ್ಲಿ ನನ್ನ ಶಕ್ತಿ ಪ್ರದರ್ಶಿಸದೆ. ನನ್ನ 'ಭಯಂಕರ' ನಟನೆಯನ್ನು ಪ್ರದರ್ಶಿಸಲು ಇದು ಒಳ್ಳೆಯ ಅವಕಾಶ" ಎಂದಿದ್ದಾರೆ ನಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


