'ಕಬಾಲಿ' ಮೇ ಅಥವಾ ಜೂನ್ ನಲ್ಲಿ ಬಿಡುಗಡೆ: ರಜನಿಕಾಂತ್
ಬಹು ನಿರೀಕ್ಷಿತ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಭೂಗತ ಲೋಕದ ಸಿನೆಮಾ 'ಕಬಾಲಿ' ವಿಶ್ವದಾದ್ಯಂತ ಮೇ ಅಥವಾ ಜೂನ್ ನಲ್ಲಿ ತೆರೆ ಕಾಣಲಿದೆ ಎಂದು ನಟ ಹೇಳಿದ್ದಾರೆ.

ಚೆನ್ನೈ: ಬಹು ನಿರೀಕ್ಷಿತ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಭೂಗತ ಲೋಕದ ಸಿನೆಮಾ 'ಕಬಾಲಿ' ವಿಶ್ವದಾದ್ಯಂತ ಮೇ ಅಥವಾ ಜೂನ್ ನಲ್ಲಿ ತೆರೆ ಕಾಣಲಿದೆ ಎಂದು ನಟ ಹೇಳಿದ್ದಾರೆ. ಇದು ರಜನಿಕಾಂತ್ ಅವರ ೧೬೧ನೆ ಚಿತ್ರ.
ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ನಟ ಮೇ ಕೊನೆಯ ವಾರ ಅಥವಾ ಜೂನ್ ಮೊದಲ ಭಾಗದಲ್ಲಿ ಸಿನೆಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
"ಕಬಾಲಿ ಮೇ ಕೊನೆಯ ವಾರದಲ್ಲಿ ಅಥವಾ ಜೂನ್ ಮೊದಲ ಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ" ಎಂದು ಪದ್ಮ ಭೂಷಣ ಸ್ವೀಕರಿಸಲು ನವದೆಹಲಿಗೆ ವಿಮಾನದ ಮೂಲಕ ತೆರಳುವ ಮುಂಚಿತವಾಗಿ ತಿಳಿಸಿದ್ದಾರೆ.
ನಿಜ ಜೀವನದ ಭೂಗತ ದೊರೆ 'ಕಬಾಲೀಶ್ವರಂ' ಅವರ ಮೇಲೆ ಪಾತ್ರ ಹೆಣೆದಿದ್ದು, ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ರಜನೀಕಾಂತ್ ಭೂಗತ ದೊರೆಯ ಪಾತ್ರ ನಿರ್ವಹಿಸಿದ್ದಾರೆ.
ಈ ಸಿನೆಮಾದಲ್ಲಿ ದಿನೇಶ್, ದಾನಿಷ್ಕಾ, ಕಿಶೋರ್ ಮತ್ತು ಕಲೈರಸನ್ ಕೂಡ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


