ಶಮಿಕಾ ಎಂಟರ್‌ಪ್ರೈಸಸ್‌ನಿಂದ 'ನಮಗಾಗಿ' ನಿರ್ಮಾಣ
ರಾಧಿಕಾ ಕುಮಾರಸ್ವಾಮಿ ಹಾಗೂ ವಿಜಯ ರಾಘವೇಂದ್ರ ಅಭಿನಯದ, ಡಿ.ಪಿ.ರಘುಗಾಮ್ ನಿರ್ದೇಶನದ 'ನಮಗಾಗಿ' ಚಿತ್ರದ ಶೂಟಿಂಗ್ ಕುಂಟುತ್ತಾ ಸಾಗಿದ್ದು,...

ರಾಧಿಕಾ ಕುಮಾರಸ್ವಾಮಿ ಹಾಗೂ ವಿಜಯ ರಾಘವೇಂದ್ರ ಅಭಿನಯದ, ಡಿ.ಪಿ.ರಘುಗಾಮ್ ನಿರ್ದೇಶನದ 'ನಮಗಾಗಿ' ಚಿತ್ರದ ಶೂಟಿಂಗ್ ಕುಂಟುತ್ತಾ ಸಾಗಿದ್ದು, ಇದೀಗ ಆ ಪ್ರಾಜೆಕ್ಟ್ ಅನ್ನು ಶಮಿಕಾ ಎಂಟರ್‌ಪ್ರೈಸಸ್ ಬ್ಯಾನರಿನಡಿ ನಿರ್ಮಿಸಲು ರಾಧಿಕಾ ಮುಂದಾಗಿದ್ದಾರೆ.
ಚಿತ್ರದ ಚಿತ್ರೀಕರಣದ ಬಗ್ಗೆ ಮಾತನಾಡಿರುವ ನಿರ್ದೇಶಕ ರಘುರಾಮ್ ಅವರು, ವೇಣುಗೋಪಾಲ ಜತೆ ಚೌಡೇಶ್ವರಿ ಸಿನೆ ಕಂಬೈನ್ಸ್ ನಿರ್ಮಾಣದ ನಮಗಾಗಿ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ. ಏಪ್ರಿಲ್ ವೇಳೆಗೆ ಶೇ.50ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಆದರೆ ಆರ್ಥಿಕ ತೊಂದರೆಯಿಂದಾಗಿ ನಿರ್ಮಾಣ ಸಂಸ್ಥೆ ಈಗ ಹಣ ನೀಡುತ್ತಿಲ್ಲ. ಹೀಗಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ ಎಂದಿದ್ದಾರೆ. ಅಲ್ಲದೆ ಇತ್ತೀಚಿಗಷ್ಟೇ ಈ ಸಂಬಂಧ ತಾವು ನಟಿ ರಾಧಿಕಾ ಹಾಗೂ ಅವರ ಸಹೋದರನೊಂದಿಗೆ ಮಾತನಾಡಿದ್ದು, ಈ ಪ್ರಾಜೆಕ್ಟ್‌ನ್ನು ಶಮಿಕಾ ಎಂಟರ್‌ಪ್ರೈಸಸ್ ಬ್ಯಾನರಿನಡಿ ನಿರ್ಮಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಾಜೆಕ್ಟ್‌ನ್ನು ಶಮಿಕಾ ಎಂಟರ್‌ಪ್ರೈಸಸ್‌ಗೆ ವರ್ಗಾಯಿಸುವ ಮಾತುಕತೆ ಮುಗಿದಿದ್ದು, ದಾಖಲಾತಿ ಪ್ರಕ್ರಿಯೆ ನಡೆದಿದೆ. ರಾಧಿಕಾ ಅವರು ಸದ್ಯದಲ್ಲೇ ಬೆಂಗಳೂರಿಗೆ ಆಗಮಿಸಲಿದ್ದು, ಎಲ್ಲವೂ ಅಂತಿಮವಾಗಲಿದೆ ಎಂದಿದ್ದಾರೆ.
ನಾವು ಅಂದುಕೊಂಡಂತೆ ಎಲವೂ ನಡೆದರೆ, ಸದ್ಯದಲ್ಲೇ ವಿದೇಶದಲ್ಲಿ 18ರಿಂದ 20ದಿನಗಳ ಕಾಲ ವಿದೇಶದಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ರಘುರಾಮ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


