ಸಿನಿಮಾ ಸುದ್ದಿ

ವಿದೇಶದಲ್ಲಿ ಕೋಟಿ ಗಳಿಸಿದ ರಂಗಿತರಂಗ!

ವಿದೇಶದಲ್ಲಿ ಗಂಧದ ಪರಿಮಳ ಎನ್ನಬೇಕೋ ಗಾಂಧಿನಗರದ ಪರಿಮಳ ಎನ್ನಬೇಕೋ, ರಂಗಿತರಂಗ ಸಿನೆಮಾದ ವಿದೇಶಿ ಗಳಿಕೆ ಗಾಂಧಿನಗರದಲ್ಲಿ ಭರವಸೆಯ ಮಹಾಪೂರವನ್ನೇ ಹರಿಸಿದೆ.

ವಿದೇಶದಲ್ಲಿ ಕೋಟಿ ಗಳಿಸಿದ ರಂಗಿತರಂಗ!
ರಂಗಿತರಂಗ ಸಿನೆಮಾ ಭಿತ್ತಿಚಿತ್ರ
Published On :

ಬೆಂಗಳೂರು: ವಿದೇಶದಲ್ಲಿ ಗಂಧದ ಪರಿಮಳ ಎನ್ನಬೇಕೋ ಗಾಂಧಿನಗರದ ಪರಿಮಳ ಎನ್ನಬೇಕೋ, ರಂಗಿತರಂಗ ಸಿನೆಮಾದ ವಿದೇಶಿ ಗಳಿಕೆ ಗಾಂಧಿನಗರದಲ್ಲಿ ಭರವಸೆಯ ಮಹಾಪೂರವನ್ನೇ ಹರಿಸಿದೆ. ವಿದೇಶದಲ್ಲಿ ಇಷ್ಟು ಖ್ಯಾತಿ ಪಡೆದ ಕನ್ನಡ ಸಿನೆಮಾವಾಗಿ ಇದು ಹೊರ ಹೊಮ್ಮಿದ್ದರೆ ಇಲ್ಲಿ ಕೂಡ ಶತದಿನದತ್ತ ದಾಪುಗಾಲು ಹಾಕಿದೆ.

ಈ ಸಿನೆಮಾ ವಿದೇಶಗಳಲ್ಲಿ ೫೦ ದಿನಗಳನ್ನು ಪೂರಿಸಿದ್ದು, ೨.೧ಕೋಟಿ ಗಳಿಕೆ ಕಂಡಿದೆ. ಅಲ್ಲದೆ ಇನ್ನು ತುಂಬಿನ ಪ್ರದರ್ಶನ ಕಾಣುತ್ತಿದೆಯಂತೆ. ಮೊದಲ ಬಾರಿಗೆ ಕನ್ನಡ ಸಿನೆಮಾವೊಂದು ಸ್ವೀಡನ್, ಸ್ಟೂಗ್ಗರ್ಟ್, ಬೆಲ್ಜಿಯಮ್, ಜ್ಯುರಿಕ್, ಹಾಂಕಾಂಗ್ ಮತ್ತು ಮಲೇಸಿಯಾದಲ್ಲಿ ಪ್ರದರ್ಶನ ಕಾಣುತ್ತಿರುವುದು. ಮಧ್ಯ ಪ್ರಾಚ್ಯ ದೇಶಗಳಲ್ಲಿ ಸೆನ್ಸಾರ್ ಮಂಡಲಿ ಅಸ್ತು ನೀಡಬೇಕಿರುವುದರಿಂದ ದಿನಾಂಕಗಳು ಶೀಘ್ರದಲ್ಲೇ ಹೊರಬೀಳಲಿವೆ ಎನ್ನಲಾಗಿದೆ.

ಉಪ್ಪಿ೨ ಕೂಡ ಅಮೆರಿಕಾದಲ್ಲಿ ಪ್ರದರ್ಶನ ಕಾಣುತ್ತಿದ್ದು, ೨೬ ಲಕ್ಷ ಗಳಿಕೆ ಕಂಡಿದೆ ಎನ್ನಲಾಗಿದೆ. ಮಿ ಅಂಡ್ ಮಿಸೆಸ್ ರಾಮಾಚಾರಿ ಕೂಡ ವಿದೇಶಗಳಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.