'ಟೈಗರ್' ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಹಿಂದಿರುಗಿದ ಓಂ ಪುರಿ
ತಮ್ಮ ೬೫ ನೆಯ ವಯಸ್ಸಿನಲ್ಲಿಯೂ ಸಿನೆಮಾವನ್ನೇ ಉಸಿರಾಗಿಸಿಕೊಂಡಿರುವ ಓಂ ಪುರಿ ಕನ್ನಡ ಚಿತ್ರೋದ್ಯಮಕ್ಕೆ ಹಿಂದಿರುಗಿದ್ದಾರೆ. ನಿರ್ದೇಶಕ ನಂದಕಿಶೋರ್ ಅವರ 'ಟೈಗರ್'

ಬೆಂಗಳೂರು: ತಮ್ಮ ೬೫ ನೆಯ ವಯಸ್ಸಿನಲ್ಲಿಯೂ ಸಿನೆಮಾವನ್ನೇ ಉಸಿರಾಗಿಸಿಕೊಂಡಿರುವ ಓಂ ಪುರಿ ಕನ್ನಡ ಚಿತ್ರೋದ್ಯಮಕ್ಕೆ ಹಿಂದಿರುಗಿದ್ದಾರೆ. ನಿರ್ದೇಶಕ ನಂದಕಿಶೋರ್ ಅವರ 'ಟೈಗರ್' ಚಿತ್ರಕಥೆ ಕೇಳಿ ಚಿತ್ರದ ಭಾಗವಾಗಲು ಓಂ ಪುರಿ ಒಪ್ಪಿಗೆ ನೀಡಿದ್ದಾರೆ.
ಓಂ ಪುರಿ ಅವರು ಕಳೆದ ಬಾರಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದು ೧೯೯೯ರ ಎಕೆ-೪೭ ಚಿತ್ರದಲ್ಲಿ. ಓಂಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಓಂ ಪುರಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈಗ ಪ್ರದೀಪ್ ನಟನೆಯ 'ಟೈಗರ್' ನಲ್ಲೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರು ಚಿತ್ರತಂಡ ಸೇರಿದ್ದು, ಮುಂಬೈನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ.
ಪ್ರದೀಪ್ ಜೊತೆ ಮಧುರಿಮಾ ಬ್ಯಾನರ್ಜಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಮತ್ತು ರವಿಶಂಕರ್ ಕೂಡ ನಟಿಸುತ್ತಿರುವುದು ವಿಶೇಷ.
ಅರ್ಜುನ್ ಜನ್ಯ ಸಂಗಿತ ನಿರ್ದೇಶಿಸುತ್ತಿದ್ದು, ಸುಧಾಕರ್ ಅವರ ಸಿನೆಮ್ಯಾಟೋಗ್ರಫಿ, ಯೋಗಾನಂದ್ ಮುದ್ದನ್ ಅವರ ಸಂಭಾಷಣೆ ಮತ್ತು ಕೆ ಎಂ ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.
ಪ್ರದೀಪ್ ಅವರ ಮಾವ ನಿವೃತ್ತ ಐ ಎ ಎಸ್ ಅಧಿಕಾರಿ ಶಿವರಾಂ ಚಿತ್ರದ ನಿರ್ಮಾಣದಲ್ಲಿ ಹೂಡಿಕೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


