ಮಾಂಸ ನಿಷೇಧಕ್ಕೆ ಸೋನಾಕ್ಷಿ ಸಿನ್ಹಾ ಅಸಮಾಧಾನ
ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟೀಕೆಗಳಿಗೊಳಗಾಗುವುದು ಹೊಸದೇನಲ್ಲ. ಈ ಹಿಂದೆಯೂ ನಟ ಸಲ್ಮಾನ್ ಖಾನ್ ಮುಂಬೈ ಸರಣಿ ಸ್ಪೋಟದ ಆರೋಪಿ ಯಾಕುಬ್ ಮೆಮನ್ ಪರವಾಗಿ ಟ್ವೀಟ್ ಮಾಡಿ ಹಲವು ವಿವಾದಗಳಿಗೆ...

ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟೀಕೆಗಳಿಗೊಳಗಾಗುವುದು ಹೊಸದೇನಲ್ಲ. ಈ ಹಿಂದೆಯೂ ನಟ ಸಲ್ಮಾನ್ ಖಾನ್ ಮುಂಬೈ ಸರಣಿ ಸ್ಪೋಟದ ಆರೋಪಿ ಯಾಕುಬ್ ಮೆಮನ್ ಪರವಾಗಿ ಟ್ವೀಟ್ ಮಾಡಿ ಹಲವು ವಿವಾದಗಳಿಗೆ ಸಿಲುಕಿದ್ದರೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಬಾಲಿವುಡ್ ನಟಿ ಸೋನಾಕ್ಷಿ ಸಹ ಮೊದಲ ಬಾರಿಗೆ ರಾಜಕೀಯ ಪ್ರೇರಿತ ವಿಷಯವೊಂದರ ಬಗ್ಗೆ ಟೀಕೆ ಮಾಡಿ ಟ್ವಿಟರ್ ನಲ್ಲಿ ಹಲವು ಟೀಕೆಗಳಿಗೊಳಗಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ನಾಲ್ಕು ದಿನಗಳ ಕಾಲ ಮಾಂಸ ಮಾರಾಟ ನಿಷೇಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರು ಸೋನಾಕ್ಷಿ ಸಿನ್ಹಾ ಅವರು ನಿನ್ನೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಮ್ಮದು ಸ್ವತಂತ್ರ ದೇಶ! ಬ್ಯಾನ್-ಇಸ್ತಾನ್ ಗೆ ಸ್ವಾಗತ....ಇದರ ಅರ್ಥ ಭಾರತ...ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


