ಎಸ್ ಎಸ್ ರಾಜಮೌಳಿ ಹೆಸರಿನಲ್ಲಿ, ಎಸ್ ಎಸ್ ಅಂದರೆ ಸ್ಟೀವನ್ ಸ್ಪಿಲ್ಬರ್ಗ್: ಆರ್ ಜಿ ವಿ
ನಿರ್ದೇಶಕ ರಾಮಗೋಪಾಲ ವರ್ಮ, ಇತರ ಚಿತ್ರ ನಿರ್ದೇಶಕರು, ನಟರನ್ನು ಸಾಮಾಜಿಕ ಜಾಲತಾಣಗಳಲ್ಲಿ ಚೇಡಿಸುವುದು ಸಾಮಾನ್ಯ. ಕೆಲ ತಿಂಗಳ ಹಿಂದೆಯಷ್ಟೇ ತಮ್ಮ ಹಳೆಯ

ನಿರ್ದೇಶಕ ರಾಮಗೋಪಾಲ ವರ್ಮ, ಇತರ ಚಿತ್ರ ನಿರ್ದೇಶಕರು, ನಟರನ್ನು ಸಾಮಾಜಿಕ ಜಾಲತಾಣಗಳಲ್ಲಿ ಚೇಡಿಸುವುದು ಸಾಮಾನ್ಯ. ಕೆಲ ತಿಂಗಳ ಹಿಂದೆಯಷ್ಟೇ ತಮ್ಮ ಹಳೆಯ ಗೆಳೆಯ ಅನುರಾಗ್ ಕಶ್ಯಪ್ ಅವರನ್ನು 'ಬಾಂಬೆ ವೆಲ್ವೆಟ್' ಬಿಡುಗಡೆಯ ನಂತರ ಛೇಡಿಸಿ ಇಬ್ಬರೂ ಟ್ವಿಟ್ಟರ್ ನಲ್ಲಿ ಮಾತಿನ ಕಾಳಗ ನಡೆಸಿ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದರು.
ಆದರೆ ಇತ್ತೀಚೆಗೆ ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರನ್ನು ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ಅವರಿಗೆ ಹೋಲಿಸಿ, ಹೊಗಳಿ ಎಲ್ಲರು ಆಶ್ಚರ್ಯಚಕಿತರಾಗಲು ಕಾರಣರಾಗಿದ್ದಾರೆ ಆರ್ ಜಿ ವಿ.
"ಈಗಷ್ಟೇ ನನಗೆ ತಿಳಿಯಿತು, ಎಸ್ ಎಸ್ ರಾಜಮೌಳಿಯಲ್ಲಿ ಎಸ್ ಎಸ್ ಎಂದರೆ ಸ್ಟೀವನ್ ಸ್ಪಿಲ್ಬರ್ಗ್" ಎಂದು ಆರ್ ಜಿ ವಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜಮೌಳಿ "ಇದು ಸಾರ್ವಜನಿಕರ ಲೇವಡಿಯನ್ನು ಆಹ್ವಾನಿಸುತ್ತದೆ. ಇದು ಬೇಕಿತ್ತಾ ಗುರುಗಳೇ?" ಎಂದಿದ್ದಾರೆ.
ಕೊನೆಯ ಮಾತು ವರ್ಮಾ ಅವರದ್ದೇ ಆಗಿದ್ದು "ಎಲ್ಲೆ ಮೀರಿದ ವಿನಯ, ಧೂರ್ತತೆಯನ್ನು ಮೀರಿಸುತ್ತದೆ ಸರ್" ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


