ರಾಮ್ಚರಣ್ ಬ್ರೂಸ್ಲಿ ಚಿತ್ರದಲ್ಲಿ ಅಪ್ಪನ ಗೆಸ್ಟ್ ರೋಲ್
ನಟ ರಾಮ್ ಚರಣ್ ಅಭಿನಯದ ಹೊಚ್ಚ ಹೊಸ ಬ್ರೂಸ್ಲಿ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪವರ್ ಸ್ಟಾರ್ ಪವನ್ ಕಲ್ಯಾಣ್ ಹಿನ್ನಲೆ ಧ್ವನಿ...

Published On :
ನಟ ರಾಮ್ ಚರಣ್ ಅಭಿನಯದ ಹೊಚ್ಚ ಹೊಸ ಬ್ರೂಸ್ಲಿ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪವರ್ ಸ್ಟಾರ್ ಪವನ್ ಕಲ್ಯಾಣ್ ಹಿನ್ನಲೆ ಧ್ವನಿ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಪವನ್ ಕಲ್ಯಾಣ್ ಸರ್ದಾರ್ ಗಬ್ಬರ್ ಸಿಂಗ್ ಚಿತ್ರದ ಚಿತ್ರೀಕರಣದಲ್ಲಿ ಬಿಸಿಯಾಗಿದ್ದರು ರಾಮ್ಚರಣ್ ಬ್ರೂಸ್ಲಿ ಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಶ್ರೀನು ವೆಟ್ಲಾ ನಿರ್ದೇಶನದ ಬ್ರೂಸ್ಲಿ ಚಿತ್ರದ ಮೆಗಾಸ್ಟಾರ್ ಚಿರಂಜೀವಿ 15 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ದಸರಾ ಹಬ್ಬಕ್ಕೆ ತೆರೆ ಮೇಲೆ ಬರುವ ಸಾಧ್ಯತೆಗಳಿವೆ.
ಇತ್ತೀಚೆಗಷ್ಟೇ ಚಿರಂಜೀವಿ ಅವರ 60ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಬ್ರೂಸ್ಲಿ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಲಾಗಿತ್ತು.
ಟೀಸರ್ ನಲ್ಲಿ ರಾಮ್ ಚರಣ್ ತೇಜಾರ ಪವರ್ ಫುಲ್ ಆ್ಯಕ್ಷನ್ ಜತೆ ಪಂಚಿಂಗ್ ಡೈಲಾಗ್ಸ್ ಕೂಡ ಇದ್ದು, ಇದೊಂದು ಪಕ್ಕಾ ಮಾಸ್ ಮಸಾಲ ಚಿತ್ರ ಎನ್ನುವ ಸೂಚನೆ ನೀಡಿದೆ. ರಾಮ್ ಚರಣ್ ಗೆ ಜತೆಯಾಗಿ ರಕೂಲ್ ಪ್ರೀತ್ ನಟಿಸಿದ್ದು, ಚಿತ್ರ ಕಲರ್ ಫುಲ್ ಲೋಕೆಷನ್ ಗಳಲ್ಲಿ ಅದ್ಭುತವಾಗಿ ಮೂಡಿಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


