ರಮ್ಯ ಜಾಗಕ್ಕೆ ಹರಿಪ್ರಿಯ; ಮತ್ತೆ ಹೆಂಚಿನ ಮೇಲೆ ನೀರ್ ದೋಸೆ
ಕೆಲವು ವಿವಾದಗಳಿಗೆ ಕೊನೆಯೇ ಇರುವುದಿಲ್ಲ. ಅಂತಹ ಒಂದು ಯೋಜನೆ ನೀರ್ ದೋಸೆ. ಈಗಾಗಲೇ ಹಲವಾರು ಬಾರಿ ನಿರ್ಮಾಪಕರು ಕೈಚೆಲ್ಲಿ ತಡವಾಗಿದ್ದ

ಬೆಂಗಳೂರು: ಕೆಲವು ವಿವಾದಗಳಿಗೆ ಕೊನೆಯೇ ಇರುವುದಿಲ್ಲ. ಅಂತಹ ಒಂದು ಯೋಜನೆ ನೀರ್ ದೋಸೆ. ಈಗಾಗಲೇ ಹಲವಾರು ಬಾರಿ ನಿರ್ಮಾಪಕರು ಕೈಚೆಲ್ಲಿ ತಡವಾಗಿದ್ದ ಯೋಜನೆ ಮತ್ತೆ ಪ್ರಾರಂಭವಾಗುವ ಶುಭ ಸೂಚನೆ ದೊರೆತಿದೆ. ಈ ಯೋಜನೆಯನ್ನು ನಟಿ ರಮ್ಯ ತೊರೆದಿದ್ದರಿಂದ ಸಿನೆಮಾಗೆ ಎಳ್ಳು ನೀರು ಬಿಡಲಾಗಿದೆ ಎನ್ನಲಾಗಿತ್ತು. ಆದರೆ ಈಗ ರಮ್ಯ ಅವರ ಜಾಗಕ್ಕೆ ಹರಿಪ್ರಿಯ ಅವರು ಬಂದಿದ್ದಾರೆ ಎನ್ನಲಾಗಿದ್ದು, ಸಿದ್ಲಿಂಗು ಖ್ಯಾತಿಯ ವಿಜಯ್ ಪ್ರಸಾದ್ ಸಿನೆಮಾ ಮುಂದುವರೆಸುವ ಸೂಚನೆ ನೀಡಿದ್ದಾರೆ.
ಸ್ಕಂದ ಎಂಟರ್ಟೈನ್ಮೆಂಟ್ ಪ್ರೈ ಲಿ ಈ ಯೋಜನೆಯನ್ನು ಅಧಿಕೃತವಾಗಿ ಮುಂದುವರಿಸಲಿದೆ. ನಟ ಜಗ್ಗೇಶ್ ಮತ್ತು ದತ್ತಣ್ಣ ಸಮ್ಮುಖದಲ್ಲಿ ಮತ್ತೆ ಪೂಜೆಯನ್ನು ನೆರವೇರಿಸಲಾಗಿದ್ದು ಚಿತ್ರೀಕರಣ ಸೆಪ್ಟಂಬರ್ ೯ ಅಥವಾ ೧೦ ರಂದು ಪ್ರಾರಂಭವಾಗಲಿದೆ.
ಒಂದು ವಾರದವೆರೆಗೆ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು, ಅಕ್ಟೋಬರ್ ನಲ್ಲಿ ಉಳಿದ ಭಾಗದ ಚಿತ್ರೀಕರಣ ನಡೆಯಲಿದೆ. ರಮ್ಯ ಜೊತೆ ಸುಮಾರು ೪೦% ಚಿತ್ರೀಕರಣ ಈಗಾಗಲೇ ಮುಗಿದಿತ್ತು, ಆದರೆ ಅದನ್ನು ಈಗ ಕೈಬಿಟ್ಟು ಅದನ್ನೆಲ್ಲಾ ಮರುಚಿತ್ರೀಕರಣ ಮಾಡಬೇಕಿದೆ.
ಬಲ್ಲ ಮೂಲಗಳ ಪ್ರಕಾರ ನೀರ್ ದೋಸೆಯಲ್ಲಿ ಹರಿಪ್ರಿಯ ಲೈಂಗಿಕ ಕಾರ್ಯಕರ್ತೆಯ ಪಾತ್ರ ನಿರ್ವಹಿಸಲಿದ್ದು, ಸುಮನ್ ರಂಗನಾಥ್, ದತ್ತಣ್ಣ ಮತ್ತು ಜಗ್ಗೇಶ್ ಮುಖ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


