ಬಿಪಾಶಾ ಬಸು ಕನ್ನಡಕ್ಕೆ 'ಕಮಿಂಗ್ ಸೂನ್'
ಯಾವತ್ತೋ ಬರಬೇಕಿದ್ದ ಬಸ್ಸು ತಡವಾಗಿಯಾದರೂ ಆಗಮಿಸುತ್ತಿದೆ! ಬಾಲಿವುಡ್ ಬೆಡಗಿ ಬಿಪಾಶಾ ಬಸು ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿದೆ.

ಯಾವತ್ತೋ ಬರಬೇಕಿದ್ದ ಬಸ್ಸು ತಡವಾಗಿಯಾದರೂ ಆಗಮಿಸುತ್ತಿದೆ! ಬಾಲಿವುಡ್ ಬೆಡಗಿ ಬಿಪಾಶಾ ಬಸು ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿದೆ.
ಯುವ ನಿರ್ದೇಶಕ ವೇಣುಗೋಪಾಲ್ ಅವರು ತ್ರಿಭಾಷಾ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಬಿಪಾಶಾ ಬಸು ಅವರನ್ನು ಸಂಪರ್ಕಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಅಕ್ಟೋಬರ್‌ನಲ್ಲಿ ಬಿಪಾಶಾ ಕನ್ನಡದಲ್ಲಿ ಉಲಿಯಲಿದ್ದಾರೆ.
ಚಿತ್ರದ ಹೆಸರು 'ಕಮಿಂಗ್ ಸೂನ್'. ಈ ಮೊದಲು 'ಟೆಕೀಲಾ' ಎಂಬ ಶೀರ್ಷಿಕೆಯಲ್ಲಿ ಕಿಕ್ ಮೇಲ್ ಕಿಕ್ ಎಂಬ ಟ್ಯಾಗ್‌ಲೈನ್‌ನೊಂದಿಗೆ ಚಿತ್ರ ಸೆಟ್ಟೇರಿತ್ತು. ಇದು ವೇಣುಗೆ ಎರಡನೇ ಚಿತ್ರ.
ಚೊಚ್ಚಲ ಚಿತ್ರ 'ಟ್ಯೂಬ್‌ಲೈಟ್' ಇನ್ನೆರಡು ತಿಂಗಳಲ್ಲಿ ಹೊರತರುವ ಪ್ರಯತ್ನದಲ್ಲಿರುವ ವೇಣು 'ಕಮಿಂಗ್ ಸೂನ್' ಎಂದು ತೆಲುಗು, ತಮಿಳು ಮತ್ತು ಕನ್ನಡ ಮೂರು ಭಾಷೆಯಲ್ಲಿ ತರುತ್ತಿದ್ದಾರೆ. ನಂತರ ಹಿಂದಿಗೆ ಡಬ್ ಆಗಲಿದೆ.
ಇನ್ನೊಂದು ವಿಶೇಷವೆಂದರೆ ತಮಿಳಿನಿ ಲಿಟ್ಲ್ ಸೂಪರ್ ಸ್ಟಾರ್ ಸಿಂಬು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


