ಮುಂಗಾರು ಮಳೆ ಹುಡುಗನ 'ಚಮಕ್'
ಸದ್ಯಕ್ಕೆ ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ-೨' ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಗಣೇಶ್ ಅವರು ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸುನಿ

ಬೆಂಗಳೂರು: ಸದ್ಯಕ್ಕೆ ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ-೨' ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಗಣೇಶ್ ಅವರು ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸುನಿ ನಿರ್ದೇಶನದಲ್ಲಿ ಮುಡಿ ಬರಲಿರುವ ಈ ಸಿನೆಮಾವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ನಿರ್ಮಿಸಲಿದ್ದಾರೆ. 'ಚಮಕ್' ಎಂದು ಹೆಸರಿಡಲಾಗಿರುವ ಈ ಸಿನೆಮಾ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರ ಎನ್ನಲಾಗಿದೆ.
ಈ ಹಿಂದೆ 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ನಿರ್ದೇಶಿಸಿದ್ದ ಸುನಿ ಅವರಿಗೆ ಇದು ಗಣೇಶ್ ಜೊತೆಗೆ ಹೊಸ ಪ್ರಯೋಗವಂತೆ. "ಗಣೇಶ್ ಒಂದು ಸಿನೆಮಾ ಮಾಡುವಾಗ ಅದರ ಗಮನವೆಲ್ಲ ಆ ಯೋಜನೆಯ ಬಗ್ಗೆಯೇ ಇರುತ್ತದೆ. ಅದೇ ಸಮಯದಲ್ಲಿ ಅವರ ಮುಂದಿನ ಯೋಜನೆಯ ಬಗ್ಗೆಯೂ ನಿಶ್ಚಯಿಸುತ್ತಾರೆ. ಸುನಿ ಅವರ ಕಥೆ ಕೇಳಿ ಅವರು ಆಸಕ್ತಿ ತಳೆದಿದ್ದಾರೆ" ಎನ್ನುತ್ತವೆ ಮೂಲಗಳು.
ಇನ್ನು ಅಧಿಕೃತ ಘೋಷಣೆಗಳು ಹೊರಬೀಳಬೇಕಿದ್ದರೂ, ಡಿಸೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. ಪಿ ಸಿ ಶೇಖರ್ ಅವರ 'ಸ್ಟೈಲ್ ಕಿಂಗ್' ಮತ್ತು ಪ್ರಶಾಂತ್ ರಾಜ್ ಅವರ 'ಜೂಮ್' ಚಲನಚಿತ್ರಗಳು ಕೂಡ ಗಣೇಶ್ ಅವರ ಪಟ್ಟಿಯಲ್ಲಿವೆ. ಅಲ್ಲದೆ ಮಂಜು ಸ್ವರಾಜ್ ಅವರ 'ಪಟಾಕಿ' ಚಿತ್ರೀಕರಣ ಕೂಡ ಮುಗಿಸಬೇಕಿದೆ.
ಪ್ರವೀಣ್ ಮತ್ತು ಮೇಘನ ಗೋವಂಕರ್ ಅವರು ನಟಿಸಿರುವ 'ಸಿಂಪಲ್ಲಾಗಿ ಇನ್ನೊಂದ್ ಲವ್ ಸ್ಟೋರಿ' ಚಿತ್ರೀಕರಣವನ್ನು ಸುನಿ ಮುಗಿಸಬೇಕಿದೆ. ಅಲ್ಲದೆ ಶಿವರಾಜ್ ಕುಮಾರ್ ಅವರ 'ಮನಮೋಹಕ' ಕೂಡ ಪಟ್ಟಿಯಲ್ಲಿದ್ದು ಚಿತ್ರೀಕರಣ ಪ್ರಾರಂಭವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


