ಮಹಾ ಮದುವೆಯ ನಂತರ ಕಾಯಕಕ್ಕೆ ಮರಳಿದ ಶಿವಣ್ಣ
ಮಗಳ ಮದುವೆಯ ನಂತರ ಯಾವುದೇ ವಿರಾಮ ಪಡೆಯದೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕೆಲವೇ ಗಂಟೆಗಳಲ್ಲಿ ತಮ್ಮ ಕೆಲಸಕ್ಕೆ ಹಿಂದಿರುಗಿದ್ದಾರೆ.

ಬೆಂಗಳೂರು: ಮಗಳ ಮದುವೆಯ ನಂತರ ಯಾವುದೇ ವಿರಾಮ ಪಡೆಯದೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕೆಲವೇ ಗಂಟೆಗಳಲ್ಲಿ ತಮ್ಮ ಕೆಲಸಕ್ಕೆ ಹಿಂದಿರುಗಿದ್ದಾರೆ.
೧೯೮೬ ರಲ್ಲಿ ತಮ್ಮ ೨೪ ನೆ ವಯಸ್ಸಿನಲ್ಲಿ 'ಆನಂದ್' ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಶಿವಣ್ಣನವರಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ. ವಯಸ್ಸು ಹೆಚ್ಚಾದಂತೆ ಅವರು ಕಾಯಕದಲ್ಲಿ ಹೆಚ್ಚಿನ ಶ್ರದ್ಧೆ ಮೈಗೂಡಿಸಿಕೊಳ್ಳುತ್ತಿದ್ದಾರೆ. ಮಗಳ ಮದುವೆಯ ನಂತರ ಯಾವುದೇ ವಿರಾಮ ತೆಗೆದುಕೊಳ್ಳದೆ ಕೆಲವೇ ಗಂಟೆಗಳಲ್ಲಿ ತಾವು ಮುಗಿಸಬೇಕಾದ ಚಿತ್ರಗಳ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ವಯಸ್ಸಿನಲ್ಲಿ ಕಾರ್ಯನಿರತರಾಗಿವುದೇ ಉತ್ತಮ ಎನ್ನುವ ಶಿವರಾಜ್ ಕುಮಾರ್ ಸದ್ಯಕ್ಕೆ 'ಶಿವಲಿಂಗ' ಸಿನೆಮಾದ ಡಬ್ಬಿಂಗ್ ನಡೆಸುತ್ತಿದ್ದು, ನಾಳೆಯಿಂದ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಸೆಟ್ ಸೇರಲಿದ್ದು, ಬಾಕಿಯುಳಿದ ಕೊನೆಯ ಹಂತದ ಚಿತ್ರೀಕರಣ ಸಂಪೂರ್ಣಗೊಳಿಸಲಿದ್ದಾರಂತೆ.
ತಮ್ಮ ಮುಂದಿನ ಸಿನೆಮಾಗಳ ಬಗ್ಗೆ ಮಾತನಾಡಿದ ಶಿವಣ್ಣ "ಅಕ್ಟೋಬರ್ ಎರಡನೇ ವಾರದಿಂದ ಕಬೀರ ಚಿತ್ರ ತಂಡ ಸೇರಲಿದ್ದೇನೆ. ನಂತರದ 'ಶ್ರೀಕಂಠ' ಆನಂತರ ಯೋಗಿ ಜಿ ರಾಜ್ ಅವರ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಜಯಣ್ಣ ನಿರ್ಮಾಣ ಸಂಸ್ಥೆಯಡಿ ಪ್ರಾರಂಭವಾಗಲಿದೆ. ಇದರ ಜೊತೆಜೊತೆಗೆ 'ಖದರ್' ನಲ್ಲೂ ಕೆಲಸ ಮಾಡಲಿದ್ದೇನೆ" ಎನ್ನುತ್ತಾರೆ.
ತಂದೆಯಾಗಿದ್ದರೂ, ನಿಮ್ಮ ಚರ್ಮ ಸುಕ್ಕಗಿದ್ದಾಗ ಹೃದಯ ಸದಾ ಯುವಚೇತನದಿಂತರಬೇಕು, ಆಗ ಈ ವಯಸ್ಸಿನ ತೊಂದರೆಯನ್ನು ಗೆಲ್ಲಬಹುದು ಎನ್ನುವ ಶಿವರಾಜ್ "ಮಗಳು ನಿರುಪಮಾ ಮನೆ ತೊರೆದಾಗ ಸ್ವಲ್ಪ ಭಾವನಾತ್ಮಕನಾದೆ. ಆದರೆ ಎಲ್ಲ ಹೆಣ್ಣುಮಕ್ಕಳ ಜೊತೆ ಹೀಗಾಗುತ್ತದೆ. ಆದರೆ ಮಾವನಾಗುವ ಅವಕಾಶ ಸಿಕ್ಕಿದೆ. ದಿಲೀಪ್ (ಅಳಿಯ) ಒಳ್ಳೆಯ ಮನುಷ್ಯ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


