ಪ್ರೀತಂ ಚಿತ್ರದಲ್ಲಿ ಪ್ರಕಾಶ್ ರಾಜ್ ಮತ್ತು ಮಧುಬಾಲ
ನಿರ್ದೇಶಕ ಪ್ರೀತಂ ಗುಬ್ಬಿ ತಮ್ಮ ಮುಂದಿನ ಚಿತ್ರಕ್ಕೆ ಸಂಗೀತ ನಿರ್ದೇಶಕ ದಿವಂಗತ ಜಿ ಕೆ ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಮತ್ತು ಕೆ ಯು ಮೋಹನನ್ ಅವರ

ಬೆಂಗಳೂರು: ನಿರ್ದೇಶಕ ಪ್ರೀತಂ ಗುಬ್ಬಿ ತಮ್ಮ ಮುಂದಿನ ಚಿತ್ರಕ್ಕೆ ಸಂಗೀತ ನಿರ್ದೇಶಕ ದಿವಂಗತ ಜಿ ಕೆ ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಮತ್ತು ಕೆ ಯು ಮೋಹನನ್ ಅವರ ಮಗಳು ಮಾಳವಿಕಾ ಮೋಹನನ್ ಅವರಿಗೆ ಪಾತ್ರ ನೀಡಿ ಸುದ್ದಿಯಲ್ಲಿದ್ದರು.
ಈಗ ಇನ್ನೂ ಹೆಸರಿಡದ ಆ ಚಿತ್ರಕ್ಕೆ ಮಧುಬಾಲ ಮತ್ತು ಪ್ರಕಾಶ್ ರಾಜ್ ಅವರನ್ನು ಒಪ್ಪಿಸಿದ್ದಾರಂತೆ. ಇಬ್ಬರಿಗೂ ಪ್ರಮುಖ ಪಾತ್ರಗಳಿವೆಯಂತೆ. ಮಧುಬಾಲ ಸುದೀಪ್ ಅವರ 'ರನ್ನ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. "ನಾಯಕ ನಟರನ್ನು ಸ್ಕ್ರಿಪ್ಟ್ ತೋರಿಸಿ ಒಪ್ಪಿಸುವುದು ಸುಲಭ ಆದರೆ ಕನ್ನಡ ಚಿತ್ರೋದ್ಯಮದಲ್ಲಿ ಪೋಷಕ ನಟರನ್ನು ಒಪಿಸುವುದು ಕಷ್ಟ. ಅದೃಷ್ಟವಷಾತ್ ಕಥೆ ಕೇಳಿದಾಕ್ಷಣ ಮಧುಬಾಲ ಒಪ್ಪಿಕೊಂಡರು. ಮಧುಬಾಲ ವೃತ್ತಿಪರ ನಟಿ. ಪಾತ್ರಕೆ ತಕ್ಕಂತೆ ಬದಲಾವಣೆ ತರುತ್ತಾರೆ" ಎಂದು ವಿವರಿಸುತ್ತಾರೆ ಪ್ರೀತಂ.
ಇತ್ತೀಚಿನ ಸುದ್ದಿಯಂತೆ, ತೆಲುಗು ಚಿತ್ರೋದ್ಯಮದಲ್ಲಿ ಜನಪ್ರಿಯ ಖಳನಟ ಚರಣ್ ಕೂಡ ಸಿನೆಮಾದ ಭಾಗವಾಗಲಿದ್ದಾರಂತೆ. ಪವಿತ್ರ ಲೋಕೇಶ್, ರಂಗಾಯಣ ರಘು, ಸಾಧು ಕೋಕಿಲಾ, ಅಚ್ಚುತ್ ಕುಮಾರ್ ಕೂಡ ಸಿನೆಮಾದಲ್ಲಿ ನಟಿಸುತ್ತಿದ್ದು ಸೆಪ್ಟಂಬರ್ ೧೦ ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


