ಈ ಬಾರಿ ಬಿಗ್‍ಬಾಸ್‍ನಲ್ಲಿ ಕಿಚ್ಚ v/s ಹುಚ್ಚ
ಈಟಿವಿ ಕಲರ್ಸ್ ಆದನಂತರ ಬರ್ತಾ ಇರೋ ಮೊದಲ ಬಿಗ್‍ಬಾಸ್ ಶೋಗೆ ಸುದೀಪ್ ತಮ್ಮ ಸಿನಿಮಾಗಳ ನಡುವೆ ಬಿಡುವು ಮಾಡಿಕೊಂಡು ಡೇಟ್ ಕೊಟ್ಟಿದ್ದಾರೆ....

ಕಲರ್ಸ್ ಕನ್ನಡ ಚಾನೆಲ್ ಗೆ ಅಂತೂ ಸುದೀಪ್ ಡೇಟ್ ಸಿಕ್ಕಿದೆ. ಗಾಬರಿ ಬೇಡ. ಸುದೀಪ್ ಸೀರಿಯಲ್ಲೂ ಮಾಡ್ತಿಲ್ಲ, ಕಲಸ್ರ್ ನವ್ರು ಸಿನಿಮಾನೂ ಮಾಡ್ತಿಲ್ಲ. ಇದು `ಬಿಗ್‍ಬಾಸ್' 3ನೇ ಆವೃತ್ತಿಯ ಸುದ್ದಿ. ಹೌದು ಈಟಿವಿ ಕಲರ್ಸ್ ಆದನಂತರ ಬರ್ತಾ ಇರೋ ಮೊದಲ ಬಿಗ್‍ಬಾಸ್ ಶೋಗೆ ಸುದೀಪ್ ತಮ್ಮ ಸಿನಿಮಾಗಳ ನಡುವೆ ಬಿಡುವು ಮಾಡಿಕೊಂಡು ಡೇಟ್ ಕೊಟ್ಟಿದ್ದಾರೆ. ಅಕ್ಟೋಬರ್ 2ನೇ ವಾರದಿಂದ ಸುದೀಪ್ ಲಭ್ಯವಿರೋದ್ರಿಂದ, ಬಿಗ್‍ಬಾಸ್ ತಯಾರಿ ಇದೀಗ ಬಿರುಸಾಗಿ ಸಾಗಿದೆ. ಅಂದುಕೊಂಡಂತಾದಲ್ಲಿ ಅ.12ಕ್ಕೆ ಶುರುವಾಗುವ ನಿರೀಕ್ಷೆಯಿದೆ.
ಕಳೆದೆರಡು ಆವೃತ್ತಿಗಳು ಪುಣೆಯ ಲೋನಾವಾಲದಲ್ಲಿ ನಡೆದಿದ್ದವು. ಆದರೆ ಈ ಬಾರಿಯ ಬಿಗ್‍ಬಾಸ್ ಕರ್ನಾಟಕದಲ್ಲೇ , ಬೆಂಗಳೂರಲ್ಲೇ ನಡೆಯಲಿದೆ. ಈಗಾಗಲೇ ಇನ್ನೋವೇಟಿವ್ ಪಿಲ್ಮ್ ಸಿಟಿಯಲ್ಲಿ ಬಿಗ್‍ಬಾಸ್ ಮನೆ ನಿರ್ಮಾಣವಾಗುತ್ತಿದೆ. ಕಳೆದೆರಡು ಬಾರಿಯಂತೆ ಈ ಬಾರಿ ಬರೀ ಸೆಲೆಬ್ರಿಟಿಗಳೇ ಸ್ಪರ್ಧೆಯಲ್ಲಿರುವುದಿಲ್ಲ ಎಂಬ ಸೂಚನೆ ದೊರೆತಿದ್ದು, ಸಿನಿಮಾ, ಕಿರುತೆರೆ, ರಾಜಕೀಯ ಈ ಮೂರರಿಂದ ಹೊರಗಿರುವ ಪ್ರತಿಭೆಗಳಿಗೂ ಅವಕಾಶ ಇರಲಿದೆಯಂತೆ. ಆರು ತಿಂಗಳ ಹಿಂದೆಯೂ ಒಂದು ದೊಡ್ಡ ಲಿಸ್ಟ್ ಮಾಡಿದ್ದ ತಂಡ, ಅದರಲ್ಲಿ ಹುಚ್ಚ ವೆಂಕಟ್, ಶೀತಲ್ ಶೆಟ್ಟಿ, ಪ್ರೇಮಲತಾ ದಿವಾಕರ್, ಮಾಸ್ಟರ್ ಆನಂದ್, ನಿತ್ಯಾನಂದ, ಮೈತ್ರೇಯಿ ಗೌಡ ಹೀಗೆ ಹಲವು ಹೆಸರುಗಳನ್ನು ಸೇರಿಸಿತ್ತು. ಆದರೆ ಅಧಿಕೃತವಾಗಿ ಯಾರನ್ನೂ ಸಂಪರ್ಕಿಸಿರಲೂ ಇಲ್ಲ. ಅವರಿಂದ ಒಪ್ಪಿಗೆಯೂ ಬಂದಿರಲಿಲ್ಲ. ಸದ್ಯಕ್ಕೆ ಹುಚ್ಚ ವೆಂಕಟ್ ಕೂಡ ಎಲ್ಲೆಡೆತಾನೂ ಬಿಗ್ ಬಾಸ್ ಗೆ ಹೋಗುತ್ತಿರುವುದಾಗಿ ಹೇಳಿಕೊಂಡಿರುವುದರಿಂದ ಈಗಿರುವ ಅವರ ಕ್ರೇಝನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ. ಆದ್ರೆ ಹುಚ್ಚ ವೆಂಕಟ್ ಇದ್ರೆ ತಮಾಷೇನೇ ಅಲ್ಲ, ಹೌದು ಸ್ವಾಮಿ ಈ ಥರದ ಟ್ಯಾಗ್‍ಲೈನ್ ಎಲ್ಲ ಇರಲಿಕ್ಕಿಲ್ಲ. ಬ್ಯಾನ್ ಆಗ್ಬೇಕ್.. ಅರ್ಥ ಆಯ್ತಾ... ನನ್ ಮಗಂದ್ ಈ ತರದ ಹೊಸ ಟ್ಯಾಗ್‍ಲೈನ್ ಬಳಸಬೇಕಾಗಬಹುದೇನೋ! ಸದ್ಯಕ್ಕೆ ಮುಂದಿನ ತಿಂಗಳ ತನಕ ಕಾದ್ ನೋಡ್‍ಬೇಕ್!!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


