ಸಿನಿಮಾ ಸುದ್ದಿ

ಮುಂದಿನ ಚಿತ್ರದಲ್ಲಿ ಮಳೆಯಲ್ಲಿ ರಮಿಯಲಿರುವ ಹರಿಪ್ರಿಯ

ನಟಿ ಹರಿಪ್ರಿಯ ಅವರ ಮುಂದಿನ ಚಿತ್ರ ಪ್ರೀತಿ ಮತ್ತು ಮಳೆಯ ಬಗ್ಗೆಯಂತೆ. ಸಿನೆಮಾದಲ್ಲಿನ ಭಾವ ತೀವ್ರತೆಗೆ ಪ್ರೇಕ್ಷಕರ ಹೃದಯ ಕಲಕುವುದಂತೆ.

ಮುಂದಿನ ಚಿತ್ರದಲ್ಲಿ ಮಳೆಯಲ್ಲಿ ರಮಿಯಲಿರುವ ಹರಿಪ್ರಿಯ
ನಟಿ ಹರಿಪ್ರಿಯಾ
Published On :

ಬೆಂಗಳೂರು: ನಟಿ ಹರಿಪ್ರಿಯ ಅವರ ಮುಂದಿನ ಚಿತ್ರ ಪ್ರೀತಿ ಮತ್ತು ಮಳೆಯ ಬಗ್ಗೆಯಂತೆ. ಸಿನೆಮಾದಲ್ಲಿನ ಭಾವ ತೀವ್ರತೆಗೆ ಪ್ರೇಕ್ಷಕರ ಹೃದಯ ಕಲಕುವುದಂತೆ.

ಕನ್ನಡ ಚಿತ್ರೋದ್ಯಮದಲ್ಲಿ ೧೦ ವರ್ಷಕ್ಕಿಂತ ಹೆಚ್ಚಿ ಸಮಯ ಕಳೆದಿರುವ ಹರಿಪ್ರಿಯಾ ಒಳ್ಳೆಯ ಸ್ಕ್ರಿಪ್ಟ್ ಯಾವುದೆಂದು ಕೂಡಲೇ ಹಿಡಿಯಬಲ್ಲರಂತೆ. ನಿರ್ದೇಶಕನಾಗಿ ಭಡ್ತಿ ಹೊಂದಿರುವ ಗೀತರಚನಕಾರ ಹೃದಯಶಿವ ಯಾವಾಗ 'ಮೊದಲ ಮಳೆ'ಯ ಸ್ಕ್ರಿಪ್ಟ್ ಹಿಡಿದು ಬಂದರೋ, ಕೂಡಲೆ ಸಮ್ಮತಿ ಸೂಚಿಸಿದರಂತೆ. ಹಾಲಿವುಡ್ ಬ್ಲಾಕ್ ಬಸ್ಟರ್ 'ಸಿಂಗಿಂಗ್ ಇನ್ ರೈನ್' ಮಟ್ಟದ ಸಿನೆಮಾ ಇದು ಎನ್ನುತ್ತಾರೆ ನಟಿ.

ಪ್ರೇಮ್ ಎದುರು ಮೊದಲಬಾರಿಗೆ ನಟಿಸುತ್ತಿರುವ ಹರಿಪ್ರಿಯ "ನಮ್ಮ ಜೀವನದಲ್ಲಿ ನಾವು ಕಾಣುವ ಪ್ರೇಮ ಮತ್ತು ಹಾಸ್ಯದ ಬಗೆಗೆ ೧೦ ಪುಸ್ತಕಗಳನ್ನು ಓದಿ ಮುಗಿಸಿದೆ. ನಮ್ಮ ಪರಿಸರ ಮತ್ತು ಹಾಸ್ಯ ನಮ್ಮ ಜೀವನಕ್ಕೆ ಎಷ್ಟು ಮುದ ನೀಡಬಲ್ಲದೆಂದರೆ ಅದನ್ನು 'ಮೊದಲ ಮಳೆ' ಸಿನೆಮಾದಲ್ಲಿ ಪರೀಕ್ಷಿಸಲಿದ್ದೇನೆ" ಎನ್ನುತ್ತಾರೆ ನಟಿ.

ಸ್ವಾಭಾವಿಕ ಮಳೆಯನನ್ನೇ ಸೆರೆ ಹಿಡಿಯಲು ನಿರ್ದೇಶಕ ಸಕಲೇಶಪುರ ಇತ್ಯಾದಿ ಪ್ರದೇಶಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿದ್ದಾರಂತೆ. ಕನ್ನಡದಲ್ಲಿ ಅತ್ಯದ್ಭುತ ಸಿನೆಮಾಗಳು ಬರುತ್ತಿವೆ ಎನ್ನುವ ಹರಿಪ್ರಿಯ "ನಿರ್ದೇಶಕರಾದ ಗಿರಿರಾಜ್, ಪವನ್ ಒಡೆಯರ್, ಸಂತೋಶ್ ಆನಂದರಾಮ್, ಅನೂಪ್ ಭಂಢಾರಿ, ಪವನ್ ಕುಮಾರ್, ರಕ್ಷಿತ್ ಶೆಟ್ಟಿ ಇವರೆಲ್ಲ ಅತ್ಯದ್ಭುತ ಸಿನೆಮಾಗಳನ್ನು ಮಾಡುತ್ತಿದ್ದಾರೆ" ಎನ್ನುತ್ತಾರೆ,.

ಬುಲೆಟ್ ಬಸ್ಯಾ ಸಾಧಾರಣ ಯಶಸ್ಸು ಕಂಡಿದೆ. ಈಗ ರಕ್ಷಿತ್ ಶೆಟ್ಟಿ ಜೊತೆ 'ರಿಕ್ಕಿ' ಸಿನೆಮಾ ಪೂರೈಸಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. ಮುಂದಿನದು ರಾಜಧಾನಿ ೨.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.