ಮೈನಸ್ ೧೦ ಡಿಗ್ರಿ ಚಳಿಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡ ವಿಕಲಾಂಗ ಚೇತನ ಮಕ್ಕಳು
ಚೊಚ್ಚಲ ನಿರ್ದೇಶಕ ಮಹೇಶ್ ಭಟ್ ಅವರ ಸಿನೆಮಾ 'ದ ಸೈಲೆಂಟ್ ಹಿರೋಸ್' ಸಿನೆಮಾದ ನಾಯಕನಟರಾದ ೧೩ ಕಿವುಡು ಮಕ್ಕಳು ವ್ಯತಿರಿಕ್ತ ಹವಾಮಾನ ಪರಿಸರದಲ್ಲಿ

ಮುಂಬೈ: ಚೊಚ್ಚಲ ನಿರ್ದೇಶಕ ಮಹೇಶ್ ಭಟ್ ಅವರ ಸಿನೆಮಾ 'ದ ಸೈಲೆಂಟ್ ಹಿರೋಸ್' ಸಿನೆಮಾದ ನಾಯಕನಟರಾದ ೧೩ ಕಿವುಡು ಮಕ್ಕಳು ವ್ಯತಿರಿಕ್ತ ಹವಾಮಾನ ಪರಿಸರದಲ್ಲಿ (ಉಷ್ಣಾಂಶ -೧೦ ಡಿಗ್ರಿ ಸೆಲ್ಸಿಯಸ್) ಚಿತ್ರೀಕರಣದಲ್ಲಿ ಪಾಲ್ಗೊಂಡು ಚಿತ್ರೀಕರಣ ಸಂಪೂರ್ಣಗೊಳಿಸಿದ್ದಾರೆ.
"ಸ್ಕ್ರಿಪ್ಟ್ ನ ಪ್ರಕಾರ ನಾವು ಮಂಜಿದ್ದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದೆವು. ಎಲ್ಲ ರಸ್ತೆಗಳನ್ನು ಮುಚ್ಚಲಾಗಿತ್ತು ಮತ್ತು ಉಷ್ಣಾಂಶ ಮೈನಸ್ ೧೦ ರಿಂದ ೧೨ ಡಿಗ್ರಿಗೆ ಇಳಿದಿತ್ತು. ಇಂತಹ ವ್ಯತಿರಿಕ್ತ ಹವಾಮಾನದಲ್ಲಿ ಚಿತ್ರೀಕರಣ ನಡೆಸುವುದು ಸವಾಲಾಗಿತ್ತು. ರಸ್ತೆಗಳು ಜಾರುತ್ತಿದ್ದರೂ ಕೂಡ ಮಕಳು ಧೈರ್ಯವಾಗಿ ನಟಿಸಿದರು" ಎನ್ನುತ್ತಾರ ಭಟ್.
ಉತ್ತರಾಖಾಂಡದ ಗಂಗೋತ್ರಿ ಕಣಿವೆಯಲ್ಲಿ ಚಿತ್ರೀಕರಣ ನಡೆಸಿದ್ದಾರೆ ಚಿತ್ರತಂಡ. "ಮಕ್ಕಳಿಗೆ ಬೇಕಾದ ಅಗತ್ಯ ಸುರಕ್ಷಿತ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೆವು. ಹೀಗಿದ್ದರೂ ಗಂಗಾ ನದಿಯಲ್ಲಿ ರಾಫ್ಟಿಂಗ್ ಮಾಡುವುದು ಬಹಳ ಕಷ್ಟದ ಕೆಲಸವಾಗಿತ್ತು. ಇಷ್ಟೆಲ್ಲಾ ತೊಂದರೆಗಳ ನಡುವೆಯೂ ಮಕ್ಕಳು ಅಧ್ಬುತವಾಗಿ ನಟಿಸಿದ್ದಾರೆ" ಎನ್ನುತ್ತಾರೆ ನಿರ್ದೇಶಕ.
ಈ ಮಕ್ಕಳಲ್ಲಿ ಒಬ್ಬರಾದ ಕ್ವಯಿಶ್ ಎಂಬ ಬಾಲಕನ ನಟನೆಯನ್ನು ನವಾಜುದ್ದೀನ್ ಸಿದ್ದಿಕಿ ಮನಸಾರೆ ಪ್ರಶಂಸಿಸಿದ್ದಾರೆ.
೧೩ ನಿಜ ಕಿವುಡ ಮಕ್ಕಳು ಉತ್ತರಾಖಾಂದ ಬೆಟ್ಟ ತಪ್ಪಲುಗಳಲ್ಲಿ ಸಾಹಸಮಯ ಪ್ರವಾಸ ಕೈಗೊಳ್ಳುವುದು ಸಿನೆಮಾದ ಕಥೆ. ಸೆಪ್ಟಂಬರ್ ಕೊನೆಯ ವಾರದಲ್ಲಿ ಸಿನೆಮಾ ಬಿಡುಗಡೆಯಾಗಲಿದೆ.
ಸಿನೆಮಾದ ಟೀಸರ್ ಇಲ್ಲಿದೆ ನೋಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


