'ರಣಧೀರ ಪ್ರೇಮಲೋಕದಲ್ಲಿ' ಮನೋರಂಜನ್ ನ ಮೊದಲ ಚಿತ್ರ ಅಲ್ಲ?
ರಣಧೀರ ಪ್ರೇಮಲೋಕದಲ್ಲಿ ಚಿತ್ರ ಬಿಡುಗಡೆ ವಿಳಂಬವಾಗಲಿದ್ದು, ಇದಕ್ಕೂ ಮುನ್ನ ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರ ಮನೋರಂಜನ್ ನಟನೆಯ ಬಿಡುಗಡೆಯಾಗಲಿರುವ ಮೊದಲನೇ ಚಿತ್ರವಾಗಿರಲಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್, ರಣಧೀರ ಪ್ರೇಮಲೋಕದಲ್ಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾಗುವ ಸಾಧ್ಯತೆಗಳಿಲ್ಲ.
ರವಿಚಂದ್ರನ್ ಮಾರ್ಗದರ್ಶನದಲ್ಲಿ ತಯಾರಾಗುತ್ತಿರುವ ರಣಧೀರ ಪ್ರೇಮಲೋಕದಲ್ಲಿ ಚಿತ್ರ ಬಿಡುಗಡೆ ವಿಳಂಬವಾಗಲಿದ್ದು, ಇದಕ್ಕೂ ಮುನ್ನ ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರ ಮನೋರಂಜನ್ ನಟನೆಯ ಬಿಡುಗಡೆಯಾಗಲಿರುವ ಮೊದಲನೇ ಚಿತ್ರವಾಗಿರಲಿದೆ.
ರಣಧೀರ ಪ್ರೇಮಲೋಕದಲ್ಲಿ ಚಿತ್ರವನ್ನು ಕಳೆದ ವರ್ಷ ಮೇ.30 ರಂದು ಘೋಷಣೆ ಮಾಡಲಾಗಿತ್ತು. ಆದರೆ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಹಾಗೂ ಇನ್ನಿತರ ಚಿತ್ರಗಳಲ್ಲಿ ರವಿಚಂದ್ರನ್ ಕಾರ್ಯನಿರತರಾಗಿದ್ದರಿಂದ ಮನೋರಂಜನ್ ನಟನೆಯ ಚಿತ್ರದ ಬಗ್ಗೆ ಗಮನ ಹರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಯಣ್ಣ-ಭೋಗೇಂದ್ರ ಅವರೊಂದಿಗೆ ರವಿಚಂದ್ರನ್ ನಡುವೆ ಮಾತುಕತೆ ನಡೆದಿದೆ. ಆದರೆ ಈ ವರೆಗೂ ಅಧಿಕೃತ ಮಾಹಿತಿ ಹೊರಬಂದಿಲ್ಲ.
ರಣಧೀರ ಪ್ರೇಮಲೋಕದಲ್ಲಿ ಚಿತ್ರಕ್ಕೂ ಮುನ್ನ ಅಪೂರ್ವ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ರವಿಚಂದ್ರನ್ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮನೋರಂಜನ್ ನಟನೆಯ ರಣಧೀರ ಪ್ರೇಮಲೋಕದಲ್ಲಿ ಚಿತ್ರ ಬಿಡುಗಡೆ ವಿಳಂಬವಾಗಲಿದೆ. ರಣಧೀರ ಪ್ರೇಮಲೋಕದಲ್ಲಿ ಚಿತ್ರಕ್ಕೂ ಮುನ್ನ ಮನೋರಂಜನ್ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


