ಮಾಲಾಶ್ರೀಗೆ ರಜತ ವರ್ಷದ ಸಂಭ್ರಮ
ತೊಂಬತ್ತರ ದಶಕದಲ್ಲಿ ಕನ್ನಡ ಸಿನಿಮಾಭಿಮಾನಿಗಳಲ್ಲಿ ಕಿಚ್ಚು ಹತ್ತಿಸಿದ್ದ, ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಅಭಿಮಾನಿಗಳ ಕನಸಿನ ರಾಣಿ...

ತೊಂಬತ್ತರ ದಶಕದಲ್ಲಿ ಕನ್ನಡ ಸಿನಿಮಾಭಿಮಾನಿಗಳಲ್ಲಿ ಕಿಚ್ಚು ಹತ್ತಿಸಿದ್ದ, ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಅಭಿಮಾನಿಗಳ ಕನಸಿನ ರಾಣಿ ಮಾಲಾಶ್ರೀ ಅವರ ಸಿನಿ ಪಯಣಕ್ಕೀಗ ರಜತ ವರ್ಷದ ಸಂಭ್ರಮ. 1989ರಲ್ಲಿ ಬಿಡುಗಡೆಯಾದ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದ ಮಾಲಾಶ್ರೀಗೆ ಆ ಚಿತ್ರ ಭಾರೀ ಹೆಸರನ್ನು ಕೂಡ ತಂದುಕೊಟ್ಟಿತು.
ಗಂಡುಬೀರಿ ಪಾತ್ರಗಳಿಗೆ ಮತ್ತು ಯಂಗ್ ಅಂಡ್ ಅನರ್ಜಟಿಕ್ ಪಾತ್ರಗಳಿಗೆ ಹೇಳಿ ಮಾಡಿಸಿದ ನಟಿ ಮಾಲಾಶ್ರೀ ಅವರ ಮೂಲ ಹೆಸರು ದುರ್ಗಾ. ನಂಜುಂಡಿ ಕಲ್ಯಾಣ ಚಿತ್ರಕ್ಕೆ ಪಾರ್ವತಮ್ಮ ರಾಜ್ ಕುಮಾರ್ ಅವರು ಮಾಲಾಶ್ರೀ ಎಂದು ಹೆಸರು ಬದಲಾಯಿಸಿದರಂತೆ. ನಂತರ ಅದುವೇ ಕಾಯಂ ಆಯಿತು. ಗಜಪತಿ ಗರ್ವಭಂಗ, ರಾಮಾಚಾರಿ, ರಾಣಿ ಮಹಾರಾಣಿ, ಕನಸಿನ ರಾಣಿ ಮೊದಲಾದ ಚಿತ್ರಗಳು ಹೆಸರು ತಂದುಕೊಟ್ಟಿದ್ದವು. ಆಕ್ಷನ್ ಜೊತೆಗೆ ಭಾವ ಪ್ರಧಾನ ಚಿತ್ರಗಳಲ್ಲೂ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ. ಇದೀಗ ಅವರ ಗಂಗಾ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.
ಇದರಲ್ಲಿ ಆಟೋ ಡ್ರೈವರ್ ಪಾತ್ರ. ಈ ಚಿತ್ರದಲ್ಲಿ ಅನುಭವಿಸಿ ಅಭಿನಯಿಸಿದ್ದೇನೆ. ನಿರ್ದೇಶಕ ಸಾಯಿಪ್ರಕಾಶ್ ಉತ್ತಮವಾಗಿ ಚಿತ್ರ ತಯಾರಿಸಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


