'ರಾಕ್ಷಸಿ' ಆಡಿಯೋ ಬಿಡುಗಡೆ ಮಾಡಿದ ಪುನೀತ್, ವಿಶಾಲ್
'ರಾಕ್ಷಸಿ' ಸಿನೆಮಾದ ಆಡಿಯೋ ಅನಾವರಣ ಸೋಮವಾರ ನೆರವೇರಿತು. ತಮಿಳು ನಟ ವಿಶಾಲ್ ಮತ್ತು ಪುನೀತ್ ರಾಜಕುಮಾರ್ ಅವರು ಆಡಿಯೋ ಬಿಡುಗಡೆಯಲ್ಲಿ

ಬೆಂಗಳೂರು: 'ರಾಕ್ಷಸಿ' ಸಿನೆಮಾದ ಆಡಿಯೋ ಅನಾವರಣ ಸೋಮವಾರ ನೆರವೇರಿತು. ತಮಿಳು ನಟ ವಿಶಾಲ್ ಮತ್ತು ಪುನೀತ್ ರಾಜಕುಮಾರ್ ಅವರು ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಂಡಿದ್ದರು.
ಭಾನುವಾರ ನಡೆಯಬೇಕಿದ್ದ ಈ ಕಾರ್ಯಕ್ರಮಕ್ಕೆ ಚಿತ್ರನಟರಾದ ಆರ್ಯ ಮತ್ತು ಕೀರ್ತಿ ಅವರನ್ನೂ ಆಹ್ವಾನಿಸಲಾಗಿತ್ತಂತೆ. ಆದರೆ ಭಾನುವಾರ ಸುರಿದ ಆಕಾಲಿಕ ಮಳೆಯಿಂದಾಗಿ ಆ ನಟರು ಶೂಟಿಂಗ್ ಗೆ ಹೀಂದಿರುಗಬೇಕಾಗಿ ಬಂದು ಇದರಿಂದ ನಿರ್ಮಾಪಕರಿಗೆ ೨೦ ಲಕ್ಷ ನಷ್ಟವಾಯಿತಂತೆ!
ಮಿಸ್ಕಿನ್ ನಿರ್ದೇಶನದ ತಮಿಳು ಚಿತ್ರದ 'ಪಿಸಾಸು' ಸಿನೆಮಾದ ರಿಮೇಕ್ ಇದಾಗಿದ್ದು, ನಟ ವಿಶಾಲ್ ಅವರ ತಂದೆ, ದಕ್ಷಿಣ ಭಾರತದಲ್ಲಿ ಜನಪ್ರಿಯ ನಿರ್ಮಾಪಕ ಜಿ ಕೆ ರೆಡ್ಡಿ ಕೂಡ ಸಿನೆಮಾದಲ್ಲಿ ನಟಿಸಿದ್ದಾರೆ. ವಿಶಾಲ್ ಮತ್ತು ಜಿ ಕೆ ರೆಡ್ಡಿ ಚೆನ್ನೈಗೆ ತೆರಳಿ ತಮಿಳು ಚಿತ್ರರಂಗದಲ್ಲಿ ತಳವೂರುವ ಮೊದಲು ಬೆಂಗಳೂರಿನಲ್ಲೇ ನೆಲಸಿದ್ದವರು. ಕನ್ನಡದಲ್ಲೇ ಮಾತನಾಡಿದ ವಿಶಾಲ್ "ನಾನು ನನ್ನ ತಂದೆಗೋಸ್ಕರ ಇಲ್ಲಿದ್ದೇನೆ ಅದಕ್ಕೂ ಮುಖ್ಯವಾಗಿ ಪುನೀತ್ ರಾಜಕುಮಾರ್ ಅವರ ಜೊತೆ ವೇದಿಕೆ ಹಂಚಿಕೊಳ್ಳುವ ತವಕವಿತ್ತು. ನಮ್ಮ ತಾಯಿ ಪುನೀತ್ ಅವರ ದೊಡ್ಡ ಅಭಿಮಾನಿ ಮತ್ತು ಅವರ ನೃತ್ಯವೆಂದರೆ ಅವರಿಗೆ ಹೆಚ್ಚು ಇಷ್ಟ. ಅವರ ಡ್ಯಾನ್ಸಿಂಗ್ ನಂತೆ ನಾನು ನೃತ್ಯ ಕಲಿಯಬೇಕು ಎಂದು ಅವರು ಹೇಳುತ್ತಿರುತ್ತಾರೆ" ಎಂದು ಅವರು ತಿಳಿಸಿದ್ದಾರೆ.
ಆಡಿಯೊ ಅನಾವರಣಕ್ಕೆ ಶುಭ ಕೋರಿ ನಟ ಕಾರ್ತಿ ಅವರು ವಿಡಿಯೋ ಬೈಟ್ ಕಳುಹಿಸಿದ್ದರು. ಅಶ್ರಫ್ ನಿರ್ದೇಶನದ ಈ ಕನ್ನಡ ಅವತರಿಣಿಕೆಯಲ್ಲಿ ಸಿಂಧು ಲೋಕನಾಥ್ ಮತ್ತು ನವರಸನ್ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


