ಸಿನಿಮಾ ಸುದ್ದಿ

ಕೆಂಡಸಂಪಿಗೆ ಶೋಗಳ ನಡುವೆ ಬರಲಿದೆ 'ದೊಡ್ಮನೆ ಹುಡುಗ' ಟ್ರೇಲರ್

ನಿರ್ದೇಶಕ ಸೂರಿ ಅವರ ಪ್ರಯೋಗ 'ಕೆಂಡಸಪಿಗೆ' ಯಶಸ್ವಿಯಾಗುತ್ತಿರುವ ಈ ಸಮಯದಲ್ಲಿ, ಅವರೇ ನಿರ್ದೇಶಿಸುತ್ತಿರುವ ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡುಗ'

ಕೆಂಡಸಂಪಿಗೆ ಶೋಗಳ ನಡುವೆ ಬರಲಿದೆ 'ದೊಡ್ಮನೆ ಹುಡುಗ' ಟ್ರೇಲರ್
'ದೊಡ್ಮನೆ ಹುಡುಗ' ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಮತ್ತು ಅಂಬರೀಶ್
Published On :

ಬೆಂಗಳೂರು: ನಿರ್ದೇಶಕ ಸೂರಿ ಅವರ ಪ್ರಯೋಗ 'ಕೆಂಡಸಪಿಗೆ' ಯಶಸ್ವಿಯಾಗುತ್ತಿರುವ ಈ ಸಮಯದಲ್ಲಿ, ಅವರೇ ನಿರ್ದೇಶಿಸುತ್ತಿರುವ ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡುಗ' ಸಿನೆಮಾದ ಟ್ರೇಲರ್ ಅನ್ನು ಕೆಂಡಸಂಪಿಗೆ ಪ್ರದರ್ಶನದ ವೇಳೆ ತೋರಿಸಲಿದ್ದಾರಂತೆ.

ಸದ್ಯಕ್ಕೆ ಟ್ರೇಲರ್ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದ್ದು "ಈಗ ಸದ್ಯಕ್ಕೆ ರೀ-ರೆಕಾರ್ಡಿಂಗ್ ಮತ್ತು ಡಬ್ಬಿಂಗ್ ಕೆಲಸದಲ್ಲಿ ನಿರತರಾಗಿದ್ದೇವೆ. ಶೀಘ್ರದಲ್ಲೇ ಟ್ರೇಲರ್ ಬರಲಿದ್ದು, ಕೆಂಡಸಂಪಿಗೆ ಯಶಸ್ವಿಯಾಗಿ ಓಡುತ್ತಿರುವ ಎಲ್ಲ ಥಿಯೇಟರ್ ಗಳಲ್ಲೂ ಟ್ರೇಲರ್ ಪ್ರದರ್ಶಿಸಲಿದ್ದೇವೆ" ಎನ್ನುತ್ತಾರೆ ಸೂರಿ.

ಹರಿಕೃಷ್ಣ ಸಂಗೀತದಲ್ಲಿ ಹಾಡುಗಳು ಮೂಡಿ ಬರುತ್ತಿದ್ದು, 'ಅಭಿಮಾನಿಗಳೆ ನಮ್ಮ ದೇವರು' ಎಂಬ ಒಂದು ಹಾಡನ್ನು ಯೋಗ ರಾಜ್ ಭಟ ಬರೆದಿದ್ದಾರೆ. ಪುನೀತ್ ಅವರೇ ಹಾಡಿರುವ ಈ ಹಾಡು ಚಿತ್ರಪ್ರೇಮಿಗಳ 'ರಾಷ್ಟ್ರಗೀತೆ'ಯಾಗಲಿದೆ ಎನ್ನುವ ಭರವಸೆಯಲ್ಲಿದೆ ಚಿತ್ರತಂಡ.

ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. ರಾಧಿಕಾ ಪಂಡಿತ್ ನಾಯಕ ನಟಿ ಹಾಗೂ ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್, ರವಿಶಂಕರ್, ಚಿಕ್ಕಣ್ಣ ಇತರ ನಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.