ವಿಕ್ರಮ್ '10 ಎಂದ್ರತುಕುಳ್ಳ' ಟ್ರೇಲರ್; ಎರಡು ದಿನದಲ್ಲಿ ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ
ಈ ದಸಾರಾಗೆ, ಅಂದರ ಅಕ್ಟೋಬರ್ ೨೧ರಂದು ಬಿಡುಗಡೆಯಾಗಲಿರುವ '೧೦ ಎಂದ್ರಥಕುಳ್ಳ' (೧೦ ಎಣಿಸುವುದರೊಳಗೆ) ಸಿನೆಮಾದ ಟ್ರೇಲರ್ ಜನಪ್ರಿಯವಾಗಿದ್ದು, ಕೇವಲ

ಚೆನ್ನೈ: ಈ ದಸಾರಾಗೆ, ಅಂದರ ಅಕ್ಟೋಬರ್ ೨೧ರಂದು ಬಿಡುಗಡೆಯಾಗಲಿರುವ '೧೦ ಎಂದ್ರತುಕುಳ್ಳ' (೧೦ ಎಣಿಸುವುದರೊಳಗೆ) ತಮಿಳು ಸಿನೆಮಾದ ಟ್ರೇಲರ್ ಜನಪ್ರಿಯವಾಗಿದ್ದು, ಕೇವಲ ಎರಡು ದಿನಗಳಲ್ಲಿ ಯೂಟ್ಯೂಬ್ ನಲ್ಲಿ ೧ ದಶಲಕ್ಷಕ್ಕೂ ಹೆಚ್ಚು ಬಾರಿ ಟ್ರೇಲರ್ ನೋಡಲಾಗಿದೆ.
ಹುಚ್ಚಾಪಟ್ಟೆ ಆಕ್ಷನ್, ಮತ್ತು ಚೇಸ್ ದೃಶ್ಯಗಳಿಂದ ತುಂಬಿರುವ ಈ ಟ್ರೇಲರ್ ನಲ್ಲಿ ರೋಮ್ಯಾನ್ಸ್ ದೃಶ್ಯಗಳೂ ಪ್ರಾಮುಖ್ಯತೆ ಪಡೆದಿವೆ.
"ಜನ ಟ್ರೇಲರ್ ಇಷ್ಟ ಪಟ್ಟಿರುವುದಕ್ಕೆ ನನಗೆ ಅತೀವ ಸಂತಸವಾಗಿದೆ. ಆಕ್ಷನ್, ರೋಮ್ಯಾನ್ಸ್ ಮತ್ತು ಹಾಸ್ಯ ತುಂಬಿರುವ '೧೦ ಎಂದ್ರಥಕುಳ್ಳ' ಮನೆಮಂದಿಯನ್ನು ರಂಜಿಸಬಲ್ಲ ಸಿನೆಮಾ ಎಂಬ ಭರವಸೆ ನೀಡುತ್ತೇನೆ. ವಿಕ್ರಮ್ ಮತ್ತು ಸಮಂತ ಜೋಡಿಯನ್ನು ನೋಡಲು ಜನ ಕಾತರದಿಂದಿದ್ದಾರೆ ಎಂದು ನನಗೆ ತಿಳಿದಿದೆ" ಎಂದು ಸಿನೆಮಾದ ನಿರ್ದೇಶಕ ವಿಜಯ್ ಮೆಲ್ಟನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಲ್ಲಿದೆ ನೋಡಿ ಟ್ರೇಲರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


