ಸಿನಿಮಾ ಸುದ್ದಿ

ಕಿಲ್ಲಿಂಗ್ ವೀರಪ್ಪನ್ ಸಿನೆಮಾಕ್ಕೆ ತಡೆಯಾಜ್ಞೆ

ಕರಾರು ಪತ್ರದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ರಾಮ್ ಗೋಪಾಲ್‍ವರ್ಮಾ ನಿರ್ದೇಶಿಸಿದ ಕನ್ನಡದ ಕಿಲ್ಲಿಂಗ್ ವೀರಪ್ಪನ್ ಸಿನಿಮಾಕ್ಕೆ...

ಕಿಲ್ಲಿಂಗ್ ವೀರಪ್ಪನ್ ಸಿನೆಮಾಕ್ಕೆ ತಡೆಯಾಜ್ಞೆ
ಕಿಲ್ಲಿಂಗ್ ವೀರಪ್ಪನ್ ಚಿತ್ರದ ಪೋಸ್ಟರ್
Published On :

ಬೆಂಗಳೂರು: ಕರಾರು ಪತ್ರದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ರಾಮ್    ಗೋಪಾಲ್‍ವರ್ಮಾ ನಿರ್ದೇಶಿಸಿದ ಕನ್ನಡದ ಕಿಲ್ಲಿಂಗ್ ವೀರಪ್ಪನ್ ಸಿನಿಮಾಕ್ಕೆ ಸಿಟಿ ಸಿವಿಲ್   ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪರ ವಕೀಲ  ಜೈಪ್ರಕಾಶ್ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ಮುತ್ತುಲಕ್ಷ್ಮಿ ಅವರು ಬರೆದಿರುವ ಕರಾರು ಪತ್ರಕ್ಕೆ ನಿರ್ದೇಶಕ ರಾಮಗೋಪಾಲ ವರ್ಮಾ ಸಹಿ ಹಾಕಿದ್ದಾರೆ. ಕರಾರು  ಪತ್ರದ ಪ್ರಕಾರ ರಾಮಗೋಪಾಲ ವರ್ಮಾ ಅವರು ಹಿಂದಿ  ತಮಿಳು ಡಬ್ಬಿಂಗ್ ಚಿತ್ರಗಳನ್ನು  ಮಾತ್ರ ನಿರ್ದೇಶಿಸಲು ಅವರಿಗೆ ಹಕ್ಕಿದೆ. ಆದರೆ  ನಿಯಮವನ್ನು ಉಲ್ಲಂಘಿಸಿ ಕನ್ನಡ ಚಿತ್ರವನ್ನು ನಿರ್ದೇಶಿದ್ದಾರೆ ಎಂದರು.

ಜಾಹಿರಾತುಗಳನ್ನು ವೀಕ್ಷಿಸಿದ ಬಳಿಕ ಕೋರ್ಟ್‍ಗೆ ಹೋಗಿದ್ದೆವು. ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿಯೂ ಪ್ರದರ್ಶನವಾಗದಂತೆ ತಡೆಯಾಜ್ಞೆ ನೀಡಿ, ವರ್ಮಾ ಅವರನ್ನು ನ್ಯಾಯಾಲಯಕ್ಕೆ ಡಿ.17  ರಂದು ಹಾಜರಾಗಲು ಆದೇಶಿಸಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.