ವಿವಾದದಲ್ಲಿ 'ಬಾಜಿರಾವ್ ಮಸ್ತಾನಿ': ಪಿಂಗಾ ಹಾಡಿನ ಪಾತ್ರಗಳ ಚಿತ್ರಣಕ್ಕೆ ವಿರೋಧ
ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಕನಸಿನ ಸಿನಿಮಾ ಹಾಗೂ ಬಹು ನಿರೀಕ್ಷಿತ ಚಿತ್ರವಾಗಿರುವ ಬಾಜಿರಾವ್ ಮಸ್ತಾನಿ ಚಿತ್ರವೀಗ ವಿವಾದವೊಂದರಲ್ಲಿ ಸಿಲುಕಿದ್ದು, ಚಿತ್ರದಲ್ಲಿ ಅತೀ ಹೆಚ್ಚು ಜನಪ್ರಿಯಗಳಿಸಿರುವ ಪಿಂಗಾ ಹಾಡಿನ ಪಾತ್ರ ಚಿತ್ರಣಕ್ಕೆ ಗುರುವಾರ ವಿರೋಧ ವ್ಯಕ್ತವಾಗುತ್ತಿದೆ...
ನವದೆಹಲಿ: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಕನಸಿನ ಸಿನಿಮಾ ಹಾಗೂ ಬಹು ನಿರೀಕ್ಷಿತ ಚಿತ್ರವಾಗಿರುವ ಬಾಜಿರಾವ್ ಮಸ್ತಾನಿ ಚಿತ್ರವೀಗ ವಿವಾದವೊಂದರಲ್ಲಿ ಸಿಲುಕಿದ್ದು, ಚಿತ್ರದಲ್ಲಿ ಅತೀ ಹೆಚ್ಚು ಜನಪ್ರಿಯಗಳಿಸಿರುವ ಪಿಂಗಾ ಹಾಡಿನ ಪಾತ್ರ ಚಿತ್ರಣಕ್ಕೆ ಗುರುವಾರ ವಿರೋಧ ವ್ಯಕ್ತವಾಗುತ್ತಿದೆ.
ಬಾಲಿವುಡ್ ನಲ್ಲಿ ಈಗಾಗಲೇ ಬಾಜಿರಾವ್ ಮಸ್ತಾನಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದು, ಚಿತ್ರವೊಂದು 17ನೇ ಶತಮಾನದ ಮರಾಠಿ ಪೇಶ್ವೆಯ ಯೋಧ ಬಾಜಿರಾವ್ ಅವರ ಜೀವನ ಚರಿತ್ರೆಯಾಧಾರಿತ ಸಿನಿಮಾವಾಗಿದೆ. ಚಿತ್ರದಲ್ಲಿ ಬಾಜಿರಾವ್ ಪ್ರೇಯಸಿಯಾಗಿ ದೀಪಿಕಾ ಪಡುಕೋಣೆ ಮಸ್ತಾನಿ ಪಾತ್ರ ನಿರ್ವಹಿಸಿದ್ದು, ರಾಣಿಯಾಗಿ ಕಾಶಿಬಾಯಿ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ದಾರೆ.
ಇತ್ತೀಚೆಗಷ್ಟೇ ನಬಾಜಿರಾವ್ ಮಸ್ತಾನಿ ಚಿತ್ರದ ಟ್ರೇಲರ್'ನ್ನು ಬಿಡುಗಡೆಯಾಗಿತ್ತು. ಇದೀಗ ಚಿತ್ರವು 'ಪಿಂಗಾ' ಹಾಡಿನ ಮೂಲಕ ವಿವಾದವೊಂದಕ್ಕೆ ಸಿಲುಕಿದ್ದು, ಪಿಂಗಾ ಹಾಡಿನ ಪಾತ್ರಧಾರಿಗಳ ಚಿತ್ರಣವು ತಪ್ಪಾಗಿದ್ದು, ನೈಜ ಪಾತ್ರಗಳಂತಿಲ್ಲ ಎಂದು ಹಲವು ವಿರೋಧಗಳು ವ್ಯಕ್ತವಾಗಿದೆ.
ವಿವಾದ ಕುರಿತಂತೆ ನಿರ್ದೇಶ ಬನ್ಸಾಲಿ ಅವರಿಗೆ ಪತ್ರ ಬರೆದಿರುವ ಮೋಹಿನಿ ಕರ್ಕರೆ ಅವರು, ಚಿತ್ರದ ಕುರಿತಂತೆ ನಡೆಸಿರುವ ಸಂಶೋಧನೆಯಲ್ಲಿ ನೈಜ ಸತ್ಯತೆಯ ಕೊರತೆ ಎದ್ದು ಕಾಣುತ್ತಿದೆ. ಪಿಂಗಾ ಹಾಡಿನಲ್ಲಿ ಕಾಶಿಬಾಯಿ ನೃತ್ಯ ಮಾಡಿದ್ದಾರೆ. ನೈಜ ಕಥೆಯಲ್ಲಿ ಕಾಶಿ ಬಾಯಿಗೆ ಸಂಧಿವಾತದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ನೃತ್ಯವನ್ನೇ ಮಾಡುತ್ತಿರಲಿಲ್ಲ. ಅಲ್ಲದೆ, ಮಸ್ತಾನಿ ಅವರು ಬುಂದೇಲ್ಖಂಡ್'ನ ರಾಜ ಛತ್ರಸಾಲ್ ಅವರ ಪುತ್ರಿಯಾಗಿದ್ದು, ಆಕೆ ವೇಶ್ಯೆಯಾಗಿರಲಿಲ್ಲ.
ಕಾಶಿಭಾಯಿ ಹಾಗೂ ಮಸ್ತಾನಿ ಕೇವಲ ಒಂದು ಬಾರಿಯಷ್ಟೇ ಭೇಟಿಯಾಗಿದ್ದು, ಅವರಿಬ್ಬರು ಎಂದಿಗೂ ಜೊತೆಗೂಡಿ ನೃತ್ಯ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಹಾಡಿನಲ್ಲಿ ದೀಪಿಕಾ ಹಾಗೂ ಪ್ರಿಯಾಂಕಾ ತೊಟ್ಟಿರುವ ವಸ್ತ್ರ ಕುರಿತಂತೆ ಮಾತನಾಡಿರುವ ಅವರು, ಆಗಿನ ಕಾಲದಲ್ಲಿ ಹೆಚ್ಚು ಚರ್ಮ ಕಾಣುವಂತೆ ಯಾರೂ ಈ ರೀತಿಯಾಗಿ ಬಟ್ಟೆ ಧರಿಸುತ್ತಿರಲಿಲ್ಲ. ಬನ್ಸಾಲಿ ಅವರು ಚಿತ್ರದ ಮೂಲಕ ಮರಾಠಿಗರಿಗೆ ಅವಮಾನಿಸಿದ್ದಾರೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

