ಬಾಂಡ್ಗರ್ಲ್ ಆಯ್ಕೆ ಆಗಿದ್ದು ಅಡುಗೆಮನೆಯಲ್ಲಿ!
`ಸ್ಪೆಕ್ಟರ್'ನಲ್ಲಿ ಬಾಂಡ್ ಗರ್ಲ್ ಆಯ್ಕೆಯಾದ ವಿಧಾನವೇ ಬೇರೆ. ಮೆಕ್ಸಿಕನ್ ನಟಿ ಸ್ಟೆಫನೀ ಸಿಗ್ಮನ್ಳ ಆಯ್ಕೆಗೆ ಆಡಿಷನ್ ನಡೆದಿದ್ದು ಅಡುಗೆ ಮನೆಯಲ್ಲಿ!..

ಬಾಂಡ್ ಗರ್ಲ್ ಆಯ್ಕೆ ಆಗೋದು ಹೇಗೆ? ಗ್ಲ್ಯಾಮರ್ ಫಿಟ್ನೆಸ್, ಮಾಡೆಲಿಂಗ್ ಅನುಭವದೊಂದಿಗೆ ಅವಳು ಆ್ಯಕ್ಷನ್ ನಟನೆಗೆ ಸಿದ್ಧವಿರುವ ಹುಡುಗಿಯೇ ಆದರೂ ಹೈ ಲೆವೆಲ್ನಲ್ಲಿ ಕಾಂಟ್ಯಾಕ್ಟ್ ಇಟ್ಟುಕೊಂಡಿರಬೇಕು.
ಯಾವುದಾದರೂ ಸ್ಟಾರ್ ಡೈರೆಕ್ಟರ್ಗಳಿಂದ ಹೇಳಿಸಿ, ಬಾಂಡ್ ಚಿತ್ರದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳೋದು ಇಲ್ಲಿಯ ತನಕ ನಡೆದ ಕಸರತ್ತು. ಹೀಗೆ ಚಾನ್ಸ್ಗೆ ಹಾತೊರೆದ ಹುಡುಗಿಯರಿಗೆ ಸ್ಟಾರ್ ಹೋಟೆಲ್ ಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆಯುತ್ತದೆ. ಆದರೆ, `ಸ್ಪೆಕ್ಟರ್'ನಲ್ಲಿ ಬಾಂಡ್ ಗರ್ಲ್ ಆಯ್ಕೆಯಾದ ವಿಧಾನವೇ ಬೇರೆ. ಮೆಕ್ಸಿಕನ್ ನಟಿ ಸ್ಟೆಫನೀ ಸಿಗ್ಮನ್ಳ ಆಯ್ಕೆಗೆ ಆಡಿಷನ್ ನಡೆದಿದ್ದು ಅಡುಗೆ ಮನೆಯಲ್ಲಿ!
ಹೌದು. ಈ ಮೆಕ್ಸಿಕನ್ ನಟಿ ಗಮನ ಸೆಳೆಯದ ಚಿತ್ರಗಳಲ್ಲಿ ನಟಿಸಿದ್ದಳಷ್ಟೇ. ಬಾಂಡ್ ಗರ್ಲ್ ಆಗಿ ಫೇಮಸ್ಸಾಗುವ ಕನಸಿನೊಂದಿಗೆ ಒಂದೊಳ್ಳೆ ಕ್ಯಾಮೆರಾ ತಗೊಂಡು, ಅದನ್ನು ಫೆ್ರಂಡ್ ಕೈಗೆ ಕೊಟ್ಟಿದ್ದಾಳೆ. ಕಿಚನ್ನಲ್ಲಿ ತನ್ನ ನಟನೆ ಮತ್ತು ರೂಪಸಿರಿಯನ್ನು ಅವನಿಂದ ಶೂಟ್ ಮಾಡಿಸಿದ್ದಾಳೆ. ಈ ವಿಡಿಯೋವನ್ನು ಸ್ಪೆಕ್ಟರ್ ಡೈರೆಕ್ಟರ್ ಸ್ಯಾಮ್ ಮೆಂಡೆಸ್ಗೆ ಕಳುಹಿಸಿದ್ದಾಳೆ. ಒಂದು ತಿಂಗಳ ಬಳಿಕ ಸ್ಟೆಫನೀ ಸಿಗ್ಮನ್ಗೆ ಕಾಲ್ ಬಂದಿದೆ. ಸ್ಯಾಮ್ ಮೆಂಡೆಸ್ `ಮೆಕ್ಸಿಕೋ ಸಿಟಿಯಲ್ಲಿ ನಿಮ್ಮನ್ನು ಭೇಟಿ ಆಗಬಹುದಾ?' ಎಂದು ಕೇಳಿದ್ದಾರೆ. ಈಕೆ ಅದಕ್ಕೆ ಒಪ್ಪಿ, `ಸ್ಪೆಕ್ಟರ್'ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾಳೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


