ಪ್ರೇಮ್ ನಿರ್ದೇಶನದಲ್ಲಿ ಶಿವಣ್ಣ-ಕಿಚ್ಚ ಒಟ್ಟಿಗೆ ನಟನೆ
ನಿರ್ದೇಶಕ ಪ್ರೇಮ್ ಮಹತ್ತರವಾದ ಸಿನೆಮಾವೊಂದಕ್ಕೆ ಕೈಹಾಕಿದ್ದಾರೆ. ಗಾಂಧಿನಗರದ ವದಂತಿಗಳನ್ನು ನಂಬುವುದಾದರೆ ಕನ್ನಡದ ಇಬ್ಬರು ಖ್ಯಾತ ನಟರನ್ನು ಒಟ್ಟಿಗೆ ನಟಿಸಲು

ಬೆಂಗಳೂರು: ನಿರ್ದೇಶಕ ಪ್ರೇಮ್ ಮಹತ್ತರವಾದ ಸಿನೆಮಾವೊಂದಕ್ಕೆ ಕೈಹಾಕಿದ್ದಾರೆ. ಗಾಂಧಿನಗರದ ವದಂತಿಗಳನ್ನು ನಂಬುವುದಾದರೆ ಕನ್ನಡದ ಇಬ್ಬರು ಖ್ಯಾತ ನಟರನ್ನು ಒಟ್ಟಿಗೆ ನಟಿಸಲು ಒಪ್ಪಿಸಲು ಪ್ರೇಮ್ ಯಶಸ್ವಿಯಾಗಿದ್ದಾರೆ. ಶಿವರಾಜ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲು.
ಸಿನೆಮಾದ ನಿರ್ಮಾಪಕರು ಈ ಯೋಜನೆ ಬಗ್ಗೆ ತುಟಿ ಬಿಚ್ಚುತ್ತಿಲ್ಲವಾದರೂ ಇದು ಸಿ ಆರ್ ಮನೋಹರ್ ಅವರ ದೊಡ್ಡ ಬಜೆಟ್ ಚಿತ್ರ ಎಂದು ಮೂಲಗಳಿಂದ ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಡಿಸೆಂಬರ್ 7ರಂದು ಚಿತ್ರದ ಮುಹೂರ್ತ ನೆರವೇರಲಿದ್ದು, ಚಿತ್ರೀಕರಣಕ್ಕೂ ಮುಂಚಿನ ಕಾರ್ಯಗಳು ಪ್ರಾರಂಭವಾಗಿವೆ. ಚಿತ್ರೀಕರಣ ಜನವರಿ ೨೦೧೬ರಿಂದ ಪ್ರಾರಂಭವಾಗಲಿದೆ" ಎಂದು ಮೂಲಗಳು ತಿಳಿಸಿವೆ.
ಇದು ಬಹುಭಾಷಾ ಚಲನಚಿತ್ರ ಎಂದು ತಿಳಿದುಬಂದಿದ್ದು, ಸುದೀಪ್ ಎಲ್ಲ ಭಾಷೆಗಳಲ್ಲೂ ಪಾತ್ರ ಪಡೆದಿದ್ದರೆ, ಶಿವರಾಜ್ ಕುಮಾರ್ ಕನ್ನಡ ಅವತರಿಣಿಕೆಯಲ್ಲಿ ಮಾತ್ರ ಇರಲಿದ್ದಾರೆ ಎನ್ನಲಾಗಿದೆ. ಇವರಲ್ಲದೆ ದಕ್ಷಿಣ ಭಾರತದ ಇತರ ದೊಡ್ಡ ನಟರ ತಾರಾಗಣವೂ ಇರಲಿದೆಯಂತೆ. ಶಿವಣ್ಣ ಮತ್ತು ಸುದೀಪ್ ಜೋಡಿ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳುತ್ತಿದ್ದು, ಚಿತ್ರಕ್ಕೆ 'ಕುಂಭಮೇಳ' ಎಂದು ಶೀರ್ಷಿಕೆ ಇಡಲಾಗುತ್ತದೆ ಎಂಬ ಸುದ್ದಿಯೊಂದು ಗಾಂಧಿನಗರದಿಂದ ಕೇಳಿಬರುತ್ತಿದೆ.
ಸದ್ಯಕ್ಕೆ ಶಿವರಾಜಕುಮಾರ್ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ಕಾಯುತ್ತಿದ್ದರೆ, 'ಕಬೀರ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆ ಎಸ್ ರವಿಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನೆಮಾದ ಚಿತ್ರೀಕರಣದಲ್ಲಿ ಸುದೀಪ್ ನಿರತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


