೬೧ ಕ್ಕೆ ಕಾಲಿಟ್ಟ ಪುಷ್ಪಕ ವಿಮಾನ ನಟ; ಲೇಖಕನಿಗೆ ಸನ್ಮಾನ ಮಾಡಿದ ಕಮಲ್
ನಟ-ನಿರ್ದೇಶಕ ಕಮಲ ಹಾಸನ್ ಅವರು ಶನಿವಾರಕ್ಕೆ ೬೧ನೆಯ ವಸಂತಕ್ಕೆ ಕಾಲಿಟ್ಟಿದ್ದು ಈ ಸಮಯದಲ್ಲಿ ಖ್ಯಾತ ತಮಿಳು ಲೇಖಕ ಕಿ ರಾಜನಾಯಣನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಚೆನ್ನೈ: ನಟ-ನಿರ್ದೇಶಕ ಕಮಲ ಹಾಸನ್ ಅವರು ಶನಿವಾರಕ್ಕೆ ೬೧ನೆಯ ವಸಂತಕ್ಕೆ ಕಾಲಿಟ್ಟಿದ್ದು ಈ ಸಮಯದಲ್ಲಿ ಖ್ಯಾತ ತಮಿಳು ಲೇಖಕ ಕಿ ರಾಜನಾಯಣನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
"ತೂಂಗವಾನಮ್ ಸಿನೆಮಾಗೆ ಕಥೆ ಬರೆದಿರುವ ರಾಜನಾಯಣನ್ ಅವರ ಪುದುಚೆರಿ ಮನೆಗೆ ಭೇಟಿ ಕಮಲ್ ಇಂದು ಭೇಟಿ ನೀಡಿದರು" ಎಂದು ಹಾಸನ್ ಅವರಿಗೆ ಹತ್ತಿರದ ಮೂಲವೊಂದು ತಿಳಿಸಿದೆ.
ಇದೇ ಸಮಯದಲ್ಲಿ ಲೇಖಕರಿಗೆ ೧ ಲಕ್ಷ ರೂ ನೀಡಿ ಅವರ ಆರೋಗ್ಯ ಮತ್ತು ಇತರ ವಿಷಯಗಳ ಬಗ್ಗೆ ವಿಚಾರಿಸಿದರು ಎಂದು ಮೂಲಗಳು ತಿಳಿಸಿದೆ.
ಕಿ ರಾ ಎಂದೆ ಪ್ರಖ್ಯಾತರಾದ ಲೇಖಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಕೂಡ. ಪಾಂಡಿಚೆರಿ ವಿಶ್ವವಿದ್ಯಾಲಯದ ಜನಪದ ಅಧ್ಯಯನದ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.
ಶನಿವಾರ ಕಮಲ್ ಅವರು ತಮ್ಮ ನಿಕಟ ಗೆಳೆಯರು ಮತ್ತು ಕುಟುಂಬ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


